ಕನ್ನಡದಲ್ಲಿ ಕ್ವಿಜ್ 2020

ಕ್ವಿಜ್ ೨೦೨೦

(ಉತ್ತರಗಳು ಕೊನೆಯಲ್ಲಿವೆ)

__________________

ರಸಪ್ರಶ್ನೆ

1. ಸಂಸ್ಕೃತ ಸೂತ್ರಗಳಿಗೆ “ಸೂತ್ರ” ಎಂದು ಏಕೆ ಕರೆಯುತ್ತಾರೆ?

2.  ವೃಷಭ ರಾಶಿಯಲ್ಲಿ ಸೂರ್ಯ, ಮಕರ ರಾಶಿಯಲ್ಲಿ ಚಂದ್ರ, ತುಲಾ ರಾಶಿಯಲ್ಲಿ ಶನಿ, ಕರ್ಕಾಟಕ ರಾಶಿಯಲ್ಲಿ ಗುರು, ಮೀನ ರಾಶಿಯಲ್ಲಿ ಶುಕ್ರ ಇಂತಹ ದಿವ್ಯಗಳಿಗೆ ಬರುವುದೇ ಯುಗಕ್ಕೊಂದು ಬಾರಿ. ಈ ದಿವ್ಯಗಳಿಗೆಯಲ್ಲಿ ಯಾವ ವಿಶೇಷ ಘಟನೆ ನೆಡೆಯಿತು?  ಯಾವ ಯುಗದಲ್ಲಿ?

3.  ಅವತಾರ ಎನ್ನುವ ಪದದ ಮೂಲ ಏನು?

4. ಉತ್ತಾನಪಾದ, ಸುನೀತಿ, ಸುರುಚಿ, ಉತ್ತಮ, ಇವರೆಲ್ಲರೂ ಯಾರ ಕತೆಯಲ್ಲಿ ಮುಖ್ಯ ಪಾತ್ರವಹಿಸುತ್ತಾರೆ?  

5. ಪತಾಂಜಲಿಯ ಪ್ರಕಾರ ಯಾಮ, ಆಸನ, ಪ್ರಾಣಾಯಾಮ, ಪ್ರತ್ಯಾಹಾರ, ಭಾವನ, ಮತ್ತು ಧಾರಣ ಎನ್ನುವ ಆರು ಹಂತಗಳಲ್ಲಿ ವಿಷ್ಣುವಿನ ಧ್ಯಾನಮಾಡಬಹುದಂತೆ. ಮೊದಲಮೂರು ಹಂತಗಳು ಯೋಗಕ್ಕೆ ಸಂಭಂದಿಸದವು. ಹಾಗಾದರೆ ಪ್ರತ್ಯಾಹಾರ, ಭಾವನ ಮತ್ತು ಧಾರಣ ಅಂದರೆ ಏನು?

6. ವಿಷ್ಣುಪುರಾಣಕ್ಕೂ ಈಜಿಪ್ಟ್ನಲ್ಲಿ ಪದ್ದತಿಯಲ್ಲಿ ಇದ್ದ ಮಮ್ಮಿಗೂ ಏನಾದರೂ ಒಂದು ಸಮಾನಾಂಶದ ವಿಷಯವಿದೆಯೇ?

7. ನಳ-ದಮಯಂತಿ ಕತೆ ಮಹಾಭಾರತಕ್ಕಿಂತ ಹಳೆಯದು.  ನಳ, ದಮಯಂತಿ, ಯಜ್ಞಸೇನಿ, ಪಾಂಡವರು ಎಲ್ಲರ ಕತೆ ಜನಜನಿತ.  ಆದರೆ ನಳನಿಗೂ ಭೀಮಸೇನನಿಗೂ ಮಧ್ಯೆ ಇರುವ ಸಮಾನಾಂಶವೇನು ?

8. ನಂದನವನ ಅಂತ ಎಷ್ಟೋಕಡೆ ಕೇಳಿದ್ದೇವೆ. ಅದು ಎಲ್ಲಿದೆ ಅದರ ವೈಶಿಷ್ಟ್ಯವೇನು?

9.  ಪಂಚತಂತ್ರ ಕತೆಗಳಲ್ಲಿ ಮಿತ್ರ ಭೇದ, ಮಿತ್ರಪ್ರಾಪ್ತಿ, ಕಾಕಲೋಕಿಯ, ಲಬ್ಧನಷ್ಟ ಮತ್ತು ಅಸಂಪ್ರೇಕ್ಷ್ಯ ಕರಿತ್ವ ಎನ್ನುವ ಪಂಚ (ಐದು) ತಂತ್ರಗಳನ್ನು ಕಲಿಸುತ್ತವೆ.  ಮಿತ್ರ ಭೇದ, ಮಿತ್ರ ಪ್ರಾಪ್ತಿ ಅಂದರೆ ಸುಲಭವಾಗಿ ಅರ್ಥವಾಗುತ್ತೆ.  ಹಾಗಾದರೆ ಇನ್ನು ಮಿಕ್ಕ ಮೂರು ತಂತ್ರಗಳ ಅರ್ಥವೇನು?  

10.  ರೇಚಕ, ಪೂರಕ, ಮತ್ತು ಕುಂಭಕ ಅಂತ ಎಲ್ಲೋ ಕೇಳಿದ್ದೀನೀ ಅಂತ ನೀವು ಅಂದು ಕೊಂಡರೆ ಹೌದು, ನೀವು ಕೇಳೇ ಇದ್ದೀರಿ. ಈ ಮೂರು ಪದಗಳ ಅರ್ಥ ಏನು ಮತ್ತು ಎಲ್ಲಿ ಉಪಯೋಗಿಸುತ್ತಾರೆ?

ಉತ್ತರ 

1 ಉತ್ತರ: ಸಂಸ್ಕೃತದಲ್ಲಿ ಯಾವುದೇ ವಿಷಯದ ಬಗ್ಗೆ ಪಾಂಡಿತ್ಯದ ಲೇಖನಗಳನ್ನು/ ನಿಯಮಗಳನ್ನು ಸಾಮಾನ್ಯವಾಗಿ ಬರೆಯುತ್ತಿದ್ದುದು ತಾಳೆಗರಿಗಳ ಮೇಲೆ. ಅಂತಹ ತಾಳೆಗರಿಗಳಗೆ ಎಡ ಮತ್ತು ಬಲಗಡೆ ರಂಧ್ರವನ್ನು ಕೊರೆದು ಅವುಗಳನ್ನು ಒಟ್ಟುಗೂಡಿಸಲು “ಸೂತ್ರ” ಅಥವಾ ದಾರವನ್ನು ಉಪಯೋಗಿಸುತ್ತಿದ್ದರು. ಹಾಗೆಯೇ ಅದನ್ನುಕಟ್ಟಿಡಲು ಸೂತ್ರದ ಬಳಕೆಯಾಗುತ್ತಿತ್ತು. ಅಂತಹ ಕಡತಗಳಲ್ಲಿರುವ ಜ್ಞಾನವನ್ನು ಕೂಡ ಸೂತ್ರ ಎಂದು ಕರೆದರು.

2 ಉತ್ತರ: ತ್ರೇತಾ ಯುಗದಲ್ಲಿ ಶ್ರೀರಾಮ ಹುಟ್ಟಿದ ಘಳಿಗೆ ಇದು.

3 ಉತ್ತರ:  ತ್ರ ಎನ್ನುವ ಮೂಲದಿಂದ, ಅಂದರೆ ಹಾದುಹೋಗು/ ದಾಟಿಹೋಗು ಅಥವಾ ಅವರೋಹಣ ಅರ್ಥದಲ್ಲಿ ಬಂದ ಮೂಲ ಪದ.  ಅವ ಎಂದು ಉಪಸರ್ಗ ಸೇರಿಸಿ ಅವತಾರ ಎಂದಾಗಿದೆ. 

4 ಉತ್ತರ: ಧ್ರುವನ ಕತೆಯಲ್ಲಿ ಉತ್ತಾನಪಾದ ಮತ್ತು ಸುನೀತಿ ಅವನ ತಂದೆಯಾಯಿಗಳು, ಮತ್ತು ಸುರುಚಿ ಧ್ರುವನ ಮಲತಾಯಿ ಹಾಗು ಉತ್ತಮ ಸುರಚಿಯ ಮಗ.  ಸುರಚಿ ಮತ್ತು ಉತ್ತಮ ತೋರುತ್ತಿದ್ದ ಮಾತ್ಸರ್ಯದಿಂದ ನೊಂದು ಧ್ರುವ ಕಠಿಣ ತಪಸ್ಸು ಮಾಡಿ ವಿಷ್ಣುವಿನಿಂದ ವರ ಪಡೆಯುತ್ತಾನೆ.  ಧ್ರುವ ನಕ್ಷತ್ರವನ್ನೇ ನಿರ್ಮಿಸುತ್ತಾನೆ ವಿಷ್ಣು

5 ಉತ್ತರ:  ಧ್ಯಾನ ಮಾಡುವಾಗ ಹೊರಗಿನಿಂದ ಬರುವ ಯೋಚನೆಗಳನ್ನು ತಡೆಹಿಡಿಯುವುದು ಪ್ರತ್ಯಾಹಾರ, ಮನಸ್ಸಿನೊಳಗಿರುವ ಭಾವನೆ ಮತ್ತು ಉದ್ವೇಗಗಳನ್ನು ನಿಲ್ಲಿಸುವುದು ಭಾವನ ಹಾಗು ಒಂದೇ ಮನಸ್ಸಿನ ಮನೋಸಂಕಲ್ಪವನ್ನು ಧಾರಣ ಎನ್ನುತ್ತಾರೆ.

6 ಉತ್ತರ: ಹೌದು ವಿಷ್ಣುಪುರಾಣದಲ್ಲಿ ಬರುವ ಒಂದು ಕತೆಯಲ್ಲಿ ನಿಮಿ ಎನ್ನುವ ರಾಜನ ಶವವನ್ನು ಮಮ್ಮಿಗಳಂತೆ ಸುಗಂಧಭರಿತ ತೈಲ ಮತ್ತು ಮರದ ಅಂಟು ಬಳಸಿ ಮೃತದೇಹವನ್ನು ಕೆಡದಂತೆ ಇರಿಸಲಾಗಿತ್ತು. ಸಾವಿಗೀಡಾದರೂ ಅಮರ್ತ್ಯ ಜೀವಿಯಂತೆ ನಿಮಿಯನ್ನು ಕಾಪಾಡಿದ್ದರು ಎನ್ನುವ ಸೋಜಿಗದ ಕತೆ ಇದು. ನಿಮಿತ್ತ ಎನ್ನುವ ಪದ ಕೂಡ ಈ ಕತೆಯಿಂದ ಬಂದಿದ್ದು. ಏಕೆ ಅಂತ ಗೊತ್ತಿದ್ದರೆ ಇಲ್ಲಿ ಹಂಚಿ ಕೊಳ್ಳಿ.  

7 ಉತ್ತರ: ನಳ ದಮಯಂತಿ ಕತೆಯಲ್ಲಿ ನಳ ದಮಯಂತಿಯಿಂದ ದೂರವಾಗಿ ಕೊನೆಗೆ ಅವರಿಬ್ಬರೂ ಒಂದೇ ರಾಜನ ಬಳಿ ಕೆಲಸಕ್ಕೆ ಸೇರುತ್ತಾರೆ.  ನಳ ಅಡಿಗೆ ಭಟ್ಟನಾಗಿ.  ನಳ ಪಾಕ ಎನ್ನುವುದು ಅಲ್ಲಿಂದಲೇ ಬಂದದ್ದು.  ಅದೇ ರೀತಿ ಮಹಾಭಾರತದಲ್ಲಿ ಭೀಮಸೇನ ವಿರಾಟ ರಾಜನ ಬಳಿ ಅಡಿಗೆ ಭಟ್ಟನಾಗಿ ಕೆಲಸಕ್ಕೆ ಸೇರುತ್ತಾನೆ. ಭೀಮನೂ ನಳನಂತೆ ಒಳ್ಳೆ ಅಡಿಗೆ ಭಟ್ಟ.

8 ಉತ್ತರ: ನಂದನವನ ಇಂದ್ರನ ಹೂದೋಟವೆಂದು ನಮ್ಮ ಪುರಾಣಗಳಲ್ಲಿ ಬರುವ ಉಲ್ಲೇಖ. ಅದು ಮೇರು ಪರ್ವತದ ಉತ್ತರ ದಿಕ್ಕಿನಲ್ಲಿ ಇದೆಯೆಂದು ನಂಬಿಕೆ. 

9 ಉತ್ತರ: ಕಾಕಲೋಕಿಯ ಅಂದರೆ ನೆಲೆನಿಂತ ಅಥವಾ ಬೇರೂರಿದ ದ್ವೇಷ. ಲಬ್ಧನಷ್ಟ ಅಂದರೆ ಉಪಯುಕ್ತವಾದ ಅಥವಾ ಅನುಕೂಲವಾದದ್ದನ್ನು ನಷ್ಟ ಮಾಡುವುದು.  ಅಸಂಪ್ರೇಕ್ಷ್ಯ ಕರಿತ್ವ ಅಂದರೆ ಪರ್ಯಾಲೋಚನೆ ಇಲ್ಲದೆ ಅಥವಾ ದುಡುಕಿನಿಂದ ಮಾಡುವುದು

10 ಉತ್ತರ: ಪ್ರಾಣಾಯಾಮದ ಸಮಯದಲ್ಲಿ ನಿಮ್ಮ ಯೋಗ ಟೀಚರ್ ಉಪಯೋಗಿಸುವ ಪದಗಳಿವು. ಒಂದುಮೂಗಿನ ಹೊಳ್ಳೆಯನ್ನು ಬೆರಳಿನಿಂದ ಬಿಗಿಹಿಡಿದು ಉಸಿರು ಬಿಟ್ಟಾಗ ರೇಚಕ, ಅದೇ ರೀತಿ ಉಸಿರು ಒಳಗೆಳೆದುಕೊಂಡಾಗ ಪೂರಕ ಎಂತಲೂ, ಉಸಿರನ್ನು ಬಿಗಿಹಿಡಿದಾಗ ಕುಂಭಕ ಎಂತಲೂ ಕರೆಯುತ್ತಾರೆ. 

_____________

*ಒಂದಕ್ಷರದ ಉತ್ತರ ಗುರಿತಿಸಿ.*

-ರವಿ ಗೋಪಾಲರಾವ್

ಪ್ರತಿಯೊಂದು ಪ್ರಶ್ನೆಗೂ ನಾಲ್ಕು ಒಂದಕ್ಷರದ ಉತ್ತರಗಳನ್ನು ಕೊಟ್ಟಿದೆ.  ಅವುಗಳಲ್ಲಿ ಒಂದನ್ನು ಆರಿಸಿಕೊಂಡು ಸರಿಯಾದ ಉತ್ತರ ಬರೆಯಿರಿ. ಉದಾ: 

1.ವೇದಗಳಲ್ಲಿ ಇವನು ದೇವತೆಗಳ ತಂದೆ. 

a) ಶ್ರು b) ಬೃ c) ಇಂ d) ವಿ 

ಸರಿಯಾದ ಉತ್ತರ: 1.  b) ಬೃ (ಬೃಹಸ್ಪತಿ) [ನಿಮ್ಮ ಉತ್ತರಗಳು ಕೂಡ ಇದೆ ಫಾರ್ಮ್ಯಾಟ್ನಲ್ಲಿ ಇರಲಿ.]

******

1. ನಮ್ಮ ಹಿಂದೂ ಸಂವತ್ಸರಗಳಲ್ಲಿ ಕೊನೆಯದು 

a) ವಿ b) ಹೇ c) ಅ  d) ದು  

2. ದೇವತೆಗಳಿಗೆ ಅಸುರರು ದೈತ್ಯರು, ದಾನವರು ರಾಕ್ಷಸರು ಎಲ್ಲ ಶತ್ರುಗಳು. ಆದರೆ ಮತ್ತೊಂದು ಅತಿಂದ್ರೀಯ ಶತ್ರುಗಳ ಗುಂಪು ಯಾವುದು?

a) ಪಿ b) ಮಾ c) ಕೌ d) ಯಾ 

3.ಗೌತಮರ ಕೋಪ ಇಂದ್ರನ ಮೇಲೆ. ಆದರೆ ಶಾಪ ದಕ್ಕಿದ್ದು ಇನ್ಯಾರಿಗೋ. 

a) ದ್ರು b) ಕುಂ c) ಗಾಂ d) ಅ 

4.ಈ ದೇವನ ಆರ್ಭಟ ಕೇಳಿಸಿದರೂ ಕಣ್ಣಿಗೆ ಕಾಣುವುದಿಲ್ಲವಂತೆ. 

a) ಯ b) ವಾ c) ಹ d) ಗ 

5.ರಾಮಾಯಣದ ಈ ಪರ್ವತ ವಾಲ್ಮೀಕಿಯ ಹೆಸರಿನೊಂದಿಗೆ ಪ್ರಖ್ಯಾತಿ ಪಡೆದಿದೆ

a) ವಿಂ  b) ಹಿ c) ಚಿ d) ಮೇ

6.ಅಷ್ವಿನಿ ಸಹೋದರರು ಈ ವಯಸ್ಸಾದ ಮಹರ್ಷಿಯ ನವ ಯೌವನವನ್ನು ಹಿಂದಿರುಗಿಸಿದರಂತೆ

a) ಚ್ಯ  b) ವ c) ಗೌ  d) ಭೃ 

7.ಈ ಹೂವಿನ ಗಿಡವನ್ನು ಕೃಷ್ಣ ಸತ್ಯಭಾಮೆಯ ತೋಟದಲ್ಲಿ ಬೆಳೆಸಿದನಂತೆ 

a) ಮ b) ಜಾ c) ತು d) ಪಾ

8.ಕುಬೇರ ತನ್ನ ಸೇವೆ ಮಾಡಲು ಕುದುರೆಯ ತಲೆಯಿರುವ ವಿಚಿತ್ರ ಮನುಷ್ಯರನ್ನು ನೇಮಕ ಮಾಡಿಕೊಂಡಿದ್ದನಂತೆ 

a) ಹ b) ಕಿಂ  c)  ಅ d) ನಾ

9.ಈ ಬಿಳಿ ಕುದುರೆ ಎಲ್ಲ ಕುದುರೆಗಳಿಗಿಂತ ಶ್ರೇಷ್ಠವಂತೆ.  

a) ಚೇ  b) ಉ c) ಹ d) ವ

10. ಭೂಮಿಯೊಳಗೆ ಅಡಗಿದ ಈ ಹತ್ತುಸಾವಿರ ಯೋಜನದ ಪ್ರದೇಶ ಕತ್ತಲುಮಯ

a) ಮಂ  b) ನ c) ಪಾ d) ಸ

11. ವಾಲೀ ಮತ್ತು ಸುಗ್ರೀವ ಈ ಹೆಣ್ಣಿಗಾಗಿ ಕಾದಾಡಿ ಒಬ್ಬನು ಪ್ರಾಣ ಕಳೆದು ಕೊಳ್ಳಬೇಕಾಯಿತು, ಪಾಪ. 

a) ತಾ  b) ಶೂ  c) ಮಂ  d) ಕ 

12.ಹನ್ನೆರಡನೇ ಶತಮಾನದಲ್ಲಿ ಸೋಮದೇವ ಸಂಗ್ರಹಿಸಿದ ನೀತಿಕತೆಗಳು ಇವು.

a) ಪಂ b) ಮ c) ಕ d) ಚಂ 

13. ಭವಭೂತಿ ಬರೆದ ಈ ನಾಟಕದ ಹೀರೊ ಮಾಧವ. ಆದರೆ ನಾಯಕಿ ಯಾರು?

a) ಮೇ  b) ರಂ  c) ರು  d) ಮಾ

14. ಮಥುರ ಪಟ್ಟಣವನ್ನು ಕಟ್ಟಿಸಿದವನು ಈ ರಾಮಾಯಣದ ಉಪನಾಯಕ

a) ಶ  b) ರಾ c) ಕೃ d) ಬ

15. ಈ ಜಾನಪದ ದೇವಿಯ ಕೈಯಲ್ಲಿ ಡಮರು, ತ್ರಿಶೂಲ, ಪಾಶ, ಮತ್ತು ತಲೆಬುರುಡೆ ಇದೆ.

a) ಸೀ b) ಶ c) ಮಾ d) ಕಾ

_____________

*ಒಂದಕ್ಷರದ ಉತ್ತರಗುರುತಿಸಿ

ಉತ್ತರ:*

1. c) ಅ (ಅಕ್ಷಯ)

2. a) ಪಿ (ಪಿಶಾಚಿಗಳು) 

3. d) ಅ (ಅಹಲ್ಯೆ)

4. b) ವಾ (ವಾಯು) 

5. c) ಚಿ (ಚಿತ್ರಕೂಟ) 

6. a) ಚ್ಯ  (ಚ್ಯವನ) 

7. d) ಪಾ (ಪಾರಿಜಾತ)

8. b) ಕಿಂ ( ಕಿಂಪುರುಷರು)

9. b) ಉ (ಉಚ್ರೈಸ್ರವಸ್ಸು)

10. c) ಪಾ (ಪಾತಾಳ)

11. a) ತಾ (ತಾರ) 

12. c) ಕ  (ಕಥಾಸರಿಸ್ಸಾಗರ) 

13. d) ಮಾ (ಮಾಲತಿ) 

14. a) ಶ  (ಶತ್ರುಘ್ನ) 

15. c) ಮಾ (ಮಾರಮ್ಮ)


____________

ಸಂಬಂಧಗಳು

-ರವಿ ಗೋಪಾಲರಾವ್


ಕನ್ನಡದಲ್ಲಿ ಎಷ್ಟೋ ಸಂಬಂಧಗಳಿಗೆ ಎರಡು ಅಥವಾ ಹೆಚ್ಚಿನ ಅರ್ಥವಿದೆ. 

ಈ ಕೆಳಗಿನ ಸಂಬಂಧಗಳನ್ನು ತಿಳಿಸಿ. (#) ಎಷ್ಟು ಅರ್ಥವಿದೆ ಅಂತ ಕೊಟ್ಟಿದೆ. 

1. ಭಾವಮೈದುನ (2)

2. ನಾದಿನಿ (3) 

3. ಬೀಗ (2) 

4, ಬೀಗಿತ್ತಿ (2)

5, ಸೋದರಳಿಯ (2)

6, ಸೋದರಸೊಸೆ (2) 

7. ಭಾವ (5)

8. ಅತ್ತಿಗೆ (4)

9. ಷಡ್ಡಕ (1)

10. ದೊಡ್ಡಪ್ಪ(2)

ಬೋನಸ್:  ಈ ಸಂಬಂಧಗಳನ್ನು ಬಳಸಿರುವ ಯಾವುದಾದರೂ ಒಂದು ಗಾದೆ ತಿಳಿಸಿ  


ಉತ್ತರ:

1. ಭಾವಮೈದುನ (2)

ಹೆಂಡತಿಯ ತಮ್ಮ, ತಂಗಿಯ ಗಂಡ

2. ನಾದಿನಿ (3)

ಗಂಡನ ತಂಗಿ, ಹೆಡತಿಯ ತಂಗಿ, ತಮ್ಮನ ಹೆಂಡತಿ 

3. ಬೀಗ (2) 

ಸೊಸೆಯ ತಂದೆ, ಅಳಿಯನ ತಂದೆ

4, ಬೀಗಿತ್ತಿ (2)

ಸೊಸೆಯ ತಾಯಿ, ಅಳಿಯನ ತಾಯಿ

5, ಸೋದರಳಿಯ (2)

ಅಕ್ಕನ ಮಗ, ಹೆಂಡತಿಯ ಅಣ್ಣನ ಮಗ

6, ಸೋದರಸೊಸೆ (2) 

ಗಂಡನ ಅಕ್ಕನ ಮಗಳು, ಹೆಂಡತಿಯ ತಮ್ಮನ ಮಗಳು 

7. ಭಾವ (5)

ಅಕ್ಕನ ಗಂಡ, ಗಂಡನ ಅಣ್ಣ, ತಂದೆಯ ಅಕ್ಕನ ಗಂಡ, ಹೆಂಡತಿಯ ಅಣ್ಣ, ಚಿಕ್ಕಪ್ಪನ ಮಗ

8. ಅತ್ತಿಗೆ (4)

ಅಣ್ಣನ ಹೆಂಡತಿ, ಗಂಡನ ದೊಡ್ಡಕ್ಕ, ಚಿಕ್ಕಮ್ಮನ (ತಾಯಿ ತಂಗಿ) ಮಗಳು, ಚಿಕ್ಕಪ್ಪನ (ತಂದೆ ತಮ್ಮ) ಮಗಳು

9. ಷಡ್ಡಕ (1)

ಹೆಂಡತಿ ತಂಗಿಯ ಗಂಡ

10. ದೊಡ್ಡಪ್ಪ (2)

ತಂದೆ ಅಣ್ಣ, ತಾಯಿ ಅಕ್ಕನ ಗಂಡ


ಬೋನಸ್:  

ತಂಗಿಯ ಮಗಳನ್ನು ತಂದರೆ ಪಾಪ, ಅಕ್ಕನ ಮಗಳನ್ನು ಬಿಟ್ಟರೆ ಪಾಪ 

(ಅಕ್ಕನ ಮಗಳನ್ನು ಮದುವೆ ಮಾಡಿಕೊಳ್ಳುವ ರೂಡಿಯಲ್ಲಿ ಬಂದಿರುವುದು ಈ ಗಾದೆ)


———————-

ತಲೆಕಟ್ಟು ವಿವರಿಸಲು ಹೋಗಿ ತಲೆಕೆಟ್ಟೀತು, ಜೋಕೆ. 

-ರವಿ ಗೋಪಾಲರಾವ್ 


ಕನ್ನಡ ಕಲಿಯಲು ಆಸಕ್ತಿ ತೋರಿಸಿದ ಒಬ್ಬರು ನಾವು ಉಪಯೋಗಿಸುವ ಕೀಲಿಮಣೆಯನ್ನು ತೋರಿಸಿ ನನಗೆ ಇಲ್ಲಿರುವ ಅಕ್ಷರಗಳು ಅರ್ಥವಾಯಿತು.  ಆದರೆ ಇವುಗಳಿಗೆ ಏನು ಹೆಸರು ಅಂತ ಕೇಳಿದರು. ನಿಮಗೆ ಗೊತ್ತಿದ್ದರೆ ಅವರಿಗೆ ಸಹಾಯ ಮಾಡಿ.   

1. ಾ = ?

2. ಿ =  ?

3. ೀ = ? 

4. ು = ?

5. ೂ =  ?

6. ೃ =  ?

7. ೆ = ?

8. ೇ=  ?

9. ೈ=  ?

10. ೊ =  ?

11. ೋ =  ?

12. ೌ =  ?

___________

ಉತ್ತರ

1. ಾ = ಇಳಿ 

2. ಿ= ಗುಡಿಸು 

3. ೀ = ಗುಡಿಸು ಧೀರ್ಘ 

4. ು= ಕೊಂಬು 

5. ೂ= ಕೊಂಬಿನಿಳಿ 

6. ೃ= ಒಟ್ರು ಸುಡಿ 

7. ೆ= ಎತ್ವ 

8. ೇ= ಏತ್ವ 

9. ೈ= ಐತ್ವ 

10.  ೊ = ಒತ್ವ 

11.  ೋ= ಓತ್ವ 

12.   ೌ= ಔತ್ವ 

______________


ಪ್ರಧಾನ ಸಂಭಾಷಣೆಗಳು

ರವಿ ಗೋಪಾಲರಾವ್


ನಮಗೆ ಗೊತ್ತಿರುವ ಪುರಾಣ, ಕಥೆ, ಕಾವ್ಯ, ಕಾದಂಬರಿಗಳಲ್ಲಿ ತಿರುವು ಕೊಟ್ಟ ಮುಖ್ಯ ಸಂಭಾಷಣೆಗಳು. ಅದನ್ನು ಒಮ್ಮೆ ಓದಿದರೆ ಇಡೀ ಸನ್ನಿವೇಶವೇ ಕಣ್ಮುಂದೆ ಬರಬಹುದು. ಯಾರು ಯಾರಿಗೆ ಹೇಳಿದರು ಮತ್ತು ಸನ್ನಿವೇಶದ ತುಣಕಿನೊಂದಿಗೆ ಉತ್ತರಿಸಿ. 

(ನಿಮ್ಮ ಉತ್ತರ ಹೀಗಿರಲಿ: #, ಯಾರು ಯಾರಿಗೆ ಹೇಳಿದ್ದು, ಸನ್ನಿವೇಶ)


1.”ಕೇಶವ, ನೋಡು ಕೇಶವ.”


2. “ಗೆದ್ದವನು ಸೋತ, ಸೋತವನು ಸತ್ತ.” 


3. “ಕುಟಿಲತೆಯಲಿ ಸೇರಲು ನನ್ನ ಪುರುಷನಿರದ ಈ ಗಳಿಗೆಗಾಗಿ ಕಾಯುತ್ತಿದ್ದೆಯ?”  


4. “ಉತ್ತರ ಗೊತ್ತಿದ್ದರೂ ಹೇಳದಿದ್ದರೆ ನಿನ್ನ ತಲೆ ಸಾವಿರ ಹೋಳಾಗುವುದು.”


5. “ನಾನು ಏನು ಮಾಡಿದರೂ ಏಕೆ ಎಂದು ಕಾರಣ ಕೇಳಕೂಡದು.”


6. “. . . . . . . . . . . . ಮೆಚ್ಚನಾ ಪರಮಾತ್ಮನು.”


7. “ನಿಲ್ಲಿಸದಿರು ವನಮಾಲಿ ಕೊಳಲ ಗಾನವ.”


8.  “ಇವರೆಲ್ಲರನ್ನು ಕೊಂದು ನಾನೆಂತ ಭಾಗ್ಯ ಪಡೆಯುವೆ?”


9. “ನಾನೇ ಗೆದ್ದೇ. ನಾನೇ ಗೆದ್ದೇ.  ನಿನಗಿಂತ ಮುಂಚೆ ಭೂಮಿ ಸುತ್ತಿ ಬಂದೆ.”


10. “ನಾನು ನಿನ್ನನ್ನು ಪಾಣಿಗ್ರಹಣ ಮಾಡಿದ್ದು ನೆನಪಿಲ್ಲ.”


11.  “ನನ್ನ ತಲೆಯಮೇಲೆ ಇಟ್ಟು ನನ್ನನ್ನು ಕೃತಾರ್ಥನನ್ನಾಗಿ ಮಾಡು.”


12. “ನನಗೆ ತಂದೆ ತಾಯಿ ಬಂಧು ಬಳಗ ಯಾರೂ ಇಲ್ಲ.”


13. “ನೀನು ಕೇಳಿದ ವರ ಕೊಟ್ಟಮೇಲೆಯೂ ನೀನೇಕೆ ನನ್ನ ಹಿಂದೆ ಬರುವೆ?”


14. “ರಣರಂಗದಲ್ಲಿ ನೀನು ನೀಡಿದ ಎರಡು ವರಗಳು ನೆನಪಿದೆಯೇ?”


15. “ಶುಲ್ಕ ಕೊಡದೆ ಅಂತ್ಯಕ್ರಿಯೆ ಮಾಡಲು ನನ್ನಿಂದಾಗದು.”


16.  “ರಾಜ, ನನ್ನ ತಂದೆ ತಾಯಿಯ ಬಾಯಾರಿಕೆಯನ್ನು ನೀಗಿಸು.”


17. “ಸರ್ಪದ ಹಲ್ಲಿಗಿಂತಲೂ ಮೊನಚಾದದ್ದಲ್ಲವೇ ಕೃತಘ್ನ ಮಗಳನ್ನು ಪಡೆಯುವುದು?”


18.  “ಜಹಾಪನ, ನೀವು ನನ್ನನ್ನು ಜೀವಂತ ಸಮಾಧಿ ಮಾಡಿದರು ನಾನು ನಗುನಗುತ್ತಲೇ ಸ್ವೀಕರಿಸುವೆ.”


19. “ಹೋಮೋನಿಯಂ ರಿವೀಲಿಯೋ .... “ (“ಎಲ್ಲ ನರಮಾನವರು ನನ್ನ ಮುಂದೆ ಪ್ರತ್ಯಕ್ಷ ಕಾಣಿಸಿಕೊಳ್ಳಿ”)

______________________


ಪ್ರಧಾನ ಸಂಭಾಷಣೆಗಳು

-ರವಿ ಗೋಪಾಲರಾವ್

ಉತ್ತರ


1.”ಕೇಶವ, ನೋಡು ಕೇಶವ.”

ಉತ್ತರ: ದ್ರೌಪದಿ ಶ್ರೀಕೃಷ್ಣನಿಗೆ ಹೇಳಿದ್ದು; ದೃತರಾಷ್ಟ್ರನ ಸಭೆಯಲ್ಲಿ ಅಪಮಾನಿತಳಾಗಿ ತನ್ನ ಕೇಶವನ್ನು ಕಟ್ಟುವುದಿಲ್ಲವೆಂದು ಕೃಷ್ಣನ ಮುಂದೆ ಶಪಥ ಮಾಡಿದಾಗ ನೆಡೆದ ಸಂಭಾಷಣೆ (ಮಹಾಭಾರತ)

2. “ಗೆದ್ದವನು ಸೋತ, ಸೋತವನು ಸತ್ತ.” 

ಉತ್ತರ: ದೇವಯ್ಯ, ಭೂತಯ್ಯನ… ಕತೆಯಲ್ಲಿ. ಕೋರ್ಟ್ ಕೇಸ್ ಸೋತ ಮೇಲೆ ತನ್ನ ಬೆಂಬಲಿಗರ ಜೊತೆ ಕೊನೆ ಸಂಭಾಷಣೆ. (ಭೂತಯ್ಯನ ಮಗ ಅಯ್ಯು)

3. “ಕುಟಿಲತೆಯಲಿ ಸೇರಲು ನನ್ನ ಪುರುಷನಿರದ ಈ ಗಳಿಗೆಗಾಗಿ ಕಾಯುತ್ತಿದ್ದೆಯ?”  

ಉತ್ತರ:  ಸೀತೆ, ಲಕ್ಷ್ಮಣನಿಗೆ ಪರ್ಣಕುಟೀರದಲ್ಲಿ ಹೇಳಿದ್ದು. ರಾಮ ಚಿನ್ನದ ಜಿಂಕೆಯನ್ನು ಅಟ್ಟಿ ಹೋಗಿ ಮರಳಿ ಬರದಾಗ. (ರಾಮಾಯಣ)

4. “ಉತ್ತರ ಗೊತ್ತಿದ್ದರೂ ಹೇಳದಿದ್ದರೆ ನಿನ್ನ ತಲೆ ಸಾವಿರ ಹೋಳಾಗುವುದು.”

ಉತ್ತರ:  ಶವದೊಳಗಿದ್ದ ಬೇತಾಳ ತ್ರಿವಿಕ್ರಮನಿಗೆ ಹೇಳುವುದು.  ಪ್ರತಿಬಾರಿಯೂ ತ್ರಿವಿಕ್ರಮ ಬೇತಾಳವನ್ನು ಹಿಡಿದು ಸ್ಮಶಾನದ ದಾರಿಯತ್ತ ನಡೆದಾಗ. (ತ್ರಿವಿಕ್ರಮನ ಕಥೆಗಳು) 

5. “ನಾನು ಏನು ಮಾಡಿದರೂ ಏಕೆ ಎಂದು ಕಾರಣ ಕೇಳಕೂಡದು.”

ಉತ್ತರ: ಗಂಗೆ ಶಂತನುಗೆ ಹೇಳಿದ್ದು.  ಶಂತನು ಗಂಗೆಯನ್ನು ಮದುವೆ ಮಾಡಿಕೊಳ್ಳುತ್ತೀನಿ ಎಂದಾಗ ಗಂಗೆ ಹಾಕಿದ ಷರತ್ತು. (ಮಹಾಭಾರತ) 

6. “,,,,,,,,,,,, ಮೆಚ್ಚನಾ ಪರಮಾತ್ಮನು.”

ಉತ್ತರ:  ಅರ್ಬುದ ವ್ಯಾಘ್ರ ಪುಣ್ಯಕೋಟಿಗೆ ಹೇಳಿದ್ದು.  ಪುಣ್ಯಕೋಟಿ ಮರಳಿ ಬಂದಾಗ ನಿನ್ನನ್ನು ಕೊಂದು ತಿಂದರೆ ಮೆಚ್ಚನಾ ಪರಮಾತ್ಮನು ಎಂದು ಹೇಳಿ ತನ್ನ ಪ್ರಾಣವನ್ನೇ ಕೊಡುವ ಸನ್ನಿವೇಶ.  (ಪುಣ್ಯಕೋಟಿ)

7. “ನಿಲ್ಲಿಸದಿರು ವನಮಾಲಿ ಕೊಳಲ ಗಾನವ.”

ಉತ್ತರ:  ಗೋಪಿಕೆಯರು ಶ್ರೀಕೃಷ್ಣನಿಗೆ ಹೇಳಿದ್ದು. ಗೋಕುಲವನ್ನು ಬಿಟ್ಟುಹೋಗುವ ಮುಂಚೆ ಗೋಪಿಕೆಯರು ಮತ್ತು ಶ್ರೀಕೃಷ್ಣನ ಸಂಭಾಷಣೆ. (ಗೋಕುಲ ನಿರ್ಗಮನ)

8.  “ಇವರೆಲ್ಲರನ್ನು ಕೊಂದು ನಾನೆಂತ ಭಾಗ್ಯ ಪಡೆಯುವೆ?”

ಉತ್ತರ  ಅರ್ಜುನ ಶ್ರೀಕೃಷ್ಣನನ್ನು ಕೇಳಿದ್ದು. ಮಹಾಭಾರತದ ಯುದ್ಧ ಶುರುವಾಗುವ ಮುಂಚೆ.(ಮಹಾಭಾರತ) 

9. “ನಾನೇ ಗೆದ್ದೇ. ನಾನೇ ಗೆದ್ದೇ.  ನಿನಗಿಂತ ಮುಂಚೆ ಭೂಮಿ ಸುತ್ತಿ ಬಂದೆ.” 

ಉತ್ತರ:  ಗಣೇಶ ಕಾರ್ತಿಕೇಯನಿಗೆ ಹೇಳಿದ್ದು.  ಶಿವ ಪಾರ್ವತಿಯರನ್ನು ಸುತ್ತಿ ಹಾಕಿದರೆ ಭೂಮಿಯನ್ನು ಸುತ್ತಿದಹಾಗೆ ಎಂದು ತಮ್ಮ ಕಾರ್ತಿಕೇಯನಿಗೆ ತಿಳಿ ಹೇಳಿದಾಗ. (ಸ್ಕಂದ ಪುರಾಣ)

10. “ನಾನು ನಿನ್ನನ್ನು ಪಾಣಿಗ್ರಹಣ ಮಾಡಿದ್ದು ನೆನಪಿಲ್ಲ.”

ಉತ್ತರ:  ದುಷ್ಯಂತ ಶಕುಂತಲೆಗೆ ಹೇಳಿದ್ದು.  ಶಕುಂತಲೆ ದುಷ್ಯಂತನ ಆಸ್ಥಾನಕ್ಕೆ ಮಗನೊಂದಿಗೆ ಬಂದಾಗ.(ಶಾಕುಂತಲ ನಾಟಕ)

11.  “ನನ್ನ ತಲೆಯಮೇಲೆ ಇಟ್ಟು ನನ್ನನ್ನು ಕೃತಾರ್ತನನ್ನಾಗಿ ಮಾಡು.”

ಉತ್ತರ:  ಬಲಿ ಚಕ್ರವರ್ತಿ ವಿಷ್ಣುವಿಗೆ ಹೇಳಿದ್ದು.  ಎರಡೇ ಹೆಜ್ಜೆಯಲ್ಲಿ ಭೂಮ್ಯಾಕಾಶ ತುಳಿದು ಮೂರನೇ ಹೆಜ್ಜೆ ಎಲ್ಲಿ ಇಡಲಿ ಎಂದು ಕೇಳಿದಾಗ (ವಾಮನಾವತಾರ) 

12. “ನನಗೆ ತಂದೆ ತಾಯಿ ಬಂಧು ಬಳಗ ಯಾರೂ ಇಲ್ಲ.”

ಉತ್ತರ:  ಬಾಲಕ ಶಂಕರಾಚಾರ್ಯರು ಗೌಡಪಾದ ಗುರುಗಳಿಗೆ ಹೇಳಿದ್ದು.  ಮೊದಲ ಬಾರಿ ಭೇಟಿಯಾದಾಗ ಗೌಡಪಾದರು ನೀನು ಯಾರೆಂದು ಕೇಳಿದಾಗ ಕೊಟ್ಟ ಉತ್ತರ. (ಶಂಕರಾಚಾರ್ಯರ ಜೀವನ ಚರಿತ್ರೆ) 

13. “ನೀನು ಕೇಳಿದ ವರ ಕೊಟ್ಟಮೇಲೆಯೂ ನೀನೇಕೆ ನನ್ನ ಹಿಂದೆ ಬರುವೆ?”

ಉತ್ತರ:  ಯಮ ಸಾವಿತ್ರಿಯನ್ನು ಕೇಳಿದ್ದು. ಯಮ ನೀಡಿದ ವರಗಳನ್ನು ತಿರಸ್ಕರಿಸಿ ಸಾವಿತ್ರಿ ಗಂಡನನ್ನು ಉಳಿಸಿಕೊಳ್ಳಲು ಯಮನ ಹಿಂದೆಯೇ ಹೋದಾಗ ನಡೆದ ಸಂಭಾಷಣೆ.(ಸತ್ಯವಾನ್  ಸಾವಿತ್ರಿ) 

14. “ರಣರಂಗದಲ್ಲಿ ನೀನು ನೀಡಿದ ಎರಡು ವರಗಳು ನೆನಪಿದೆಯೇ?”

ಉತ್ತರ:  ಕೈಕೆ ದಶರಥನನ್ನು ಕೇಳಿದ್ದು.  ಮಂಥರೆಯ ಕುಟಿಲೋಪಾಯಕ್ಕೆ ಸಿಕ್ಕಿ ಕೈಕೆ ದಶರಥ ನೀಡಿದ್ದ ವರಗಳನ್ನು ಕಾರ್ಯಗತ ಮಾಡಲು ಕೇಳಿದಾಗ.(ರಾಮಾಯಣ)

15. “ಶುಲ್ಕ ಕೊಡದೆ ಅಂತ್ಯಕ್ರಿಯೆ ಮಾಡಲು ನನ್ನಿಂದಾಗದು.”

ಉತ್ತರ: ಸತ್ಯ ಹರಿಶ್ಚಂದ್ರ ತನ್ನ ಪತ್ನಿಗೆಹೇಳಿದ್ದು. ಮಗು ಲೋಹಿತಾಶ್ವ ಹಾವಿನವಿಷದಿಂದ ಮೃತನಾದಾಗ ಅಂತ್ಯಕ್ರಿಯೆ ಮಾಡಲು ಶ್ಮಶಾನದ ಒಡೆಯನಿಗೆ  ಶುಲ್ಕ ಕೊಡಲೇಬೇಕೆಂದು ಹರಿಶ್ಚಂದ್ರ ಹೇಳುವ ಮಾತು.(ಸತ್ಯ ಹರಿಶ್ಚಂದ್ರ)

16.  “ರಾಜ, ನನ್ನ ತಂದೆ ತಾಯಿಯ ಬಾಯಾರಿಕೆಯನ್ನು ನೀಗಿಸು.”

ಉತ್ತರ:  ಶ್ರಾವಣ ಕುಮಾರ ದಶರಥನಿಗೆ ಹೇಳಿದ್ದು.  ಆಕಸ್ಮಿಕವಾಗಿ ದಶರಥನ ಬಾಣದಿಂದ ಸಾವನ್ನಪ್ಪುವ ಮುನ್ನ ಶ್ರಾವಣ ತನ್ನ ಕುರುಡು ತಂದೆ ತಾಯಿಗಳಿಗೆ ನೀರು ಕೊಡು ಎಂದು ದಶರಥನಿಗೆ ಹೇಳಿದ ಸನ್ನಿವೇಶ. (ಶ್ರವಣ ಕುಮಾರನ ಕತೆ, ರಾಮಾಯಣ) 

17. “ಸರ್ಪದ ಹಲ್ಲಿಗಿಂತಲೂ ಮೊನಚಾದದ್ದಲ್ಲವೇ ಕೃತಘ್ನ ಮಗಳನ್ನು ಪಡೆಯುವುದು?”

ಉತ್ತರ:  ಕಿಂಗ್ ಲೀಯರ್ ತನ್ನ ಇಬ್ಬರು ನಿಷ್ಕರುಣ ಹೆಣ್ಣುಮಕ್ಕಳ ಬಗ್ಗೆ ತನಗೆತಾನೇ  ಮಾತನಾಡಿಕೊಳ್ಳುವ ದೃಶ್ಯ ಶೇಕ್ಸ್ಪಿಯರ್ ನ ಕಿಂಗ್ ಲಿಯರ್ ಕಥೆಯಿಂದ (ಕಿಂಗ್ಲಿಯರ್)

18.  “ಜಹಾಪನ, ನೀವು ನನ್ನನ್ನು ಜೀವಂತ ಸಮಾಧಿ ಮಾಡಿದರು ನಾನು ನಗುನಗುತ್ತಲೇ ಸ್ವೀಕರಿಸುವೆ.”

ಉತ್ತರ:  ಅನಾರ್ಕಲಿ ಬಾದಷಹ ಅಕ್ಬರನಿಗೆ ಹೇಳಿದ್ದು.  ಸಲೀಮ್ ಮತ್ತು ಅನಾರ್ಕಲಿಯ ಅನೈತಿಕ ಸಂಬಂಧದ ತೀರ್ಮಾನ ತಿಳಿದನಂತರ ಅನಾರ್ಕಲಿ ಸಂಭಾಷಣೆ (ಅನಾರ್ಕಲಿ)

19. “ಹೋಮ್ನಮ್ ರಿವೆಲಿಯೋ .... “ (“ಎಲ್ಲ ನರಮಾನವರು ಪ್ರತ್ಯಕ್ಷ ನನ್ನ ಮುಂದೆ ಕಾಣಿಸಿಕೊಳ್ಳಿ”)

ಉತ್ತರ: ಮಾಂತ್ರಿಕಕೋಲನ್ನು ಕೈಯಲ್ಲಿ ಹಿಡಿದು ಹ್ಯಾರಿ ಪಾಟರ್ ಕಾಣಿಸದ ವ್ಯಕ್ತಿಗಳಿಗೆ ಕೂಗಿ ಹೇಳುವ ಇಂದ್ರಜಾಲದ ಎಚ್ಚರಿಕೆ.(ಹ್ಯಾರಿ ಪಾಟರ್ ಕಥೆಗಳು)



__________________

ಪ್ರಧಾನ ಸಂಭಾಷಣೆಗಳು

ರವಿ ಗೋಪಾಲರಾವ್


ನಮಗೆ ಗೊತ್ತಿರುವ ಪುರಾಣ, ಕಥೆ, ಕಾವ್ಯ, ಕಾದಂಬರಿಗಳಲ್ಲಿ ತಿರುವು ಕೊಟ್ಟ ಮುಖ್ಯ ಸಂಭಾಷಣೆಗಳು. ಅದನ್ನು ಒಮ್ಮೆ ಓದಿದರೆ ಇಡೀ ಸನ್ನಿವೇಶವೇ ಕಣ್ಮುಂದೆ ಬರಬಹುದು. ಯಾರು ಯಾರಿಗೆ ಹೇಳಿದರು ಮತ್ತು ಸನ್ನಿವೇಶದ ತುಣಕಿನೊಂದಿಗೆ ಉತ್ತರಿಸಿ. 

(ನಿಮ್ಮ ಉತ್ತರ ಹೀಗಿರಲಿ: #, ಯಾರು ಯಾರಿಗೆ ಹೇಳಿದ್ದು, ಸನ್ನಿವೇಶ)


1.”ಕೇಶವ, ನೋಡು ಕೇಶವ.”


2. “ಗೆದ್ದವನು ಸೋತ, ಸೋತವನು ಸತ್ತ.” 


3. “ಕುಟಿಲತೆಯಲಿ ಸೇರಲು ನನ್ನ ಪುರುಷನಿರದ ಈ ಗಳಿಗೆಗಾಗಿ ಕಾಯುತ್ತಿದ್ದೆಯ?”  


4. “ಉತ್ತರ ಗೊತ್ತಿದ್ದರೂ ಹೇಳದಿದ್ದರೆ ನಿನ್ನ ತಲೆ ಸಾವಿರ ಹೋಳಾಗುವುದು.”


5. “ನಾನು ಏನು ಮಾಡಿದರೂ ಏಕೆ ಎಂದು ಕಾರಣ ಕೇಳಕೂಡದು.”


6. “. . . . . . . . . . . . ಮೆಚ್ಚನಾ ಪರಮಾತ್ಮನು.”


7. “ನಿಲ್ಲಿಸದಿರು ವನಮಾಲಿ ಕೊಳಲ ಗಾನವ.”


8.  “ಇವರೆಲ್ಲರನ್ನು ಕೊಂದು ನಾನೆಂತ ಭಾಗ್ಯ ಪಡೆಯುವೆ?”


9. “ನಾನೇ ಗೆದ್ದೇ. ನಾನೇ ಗೆದ್ದೇ.  ನಿನಗಿಂತ ಮುಂಚೆ ಭೂಮಿ ಸುತ್ತಿ ಬಂದೆ.”


10. “ನಾನು ನಿನ್ನನ್ನು ಪಾಣಿಗ್ರಹಣ ಮಾಡಿದ್ದು ನೆನಪಿಲ್ಲ.”


11.  “ನನ್ನ ತಲೆಯಮೇಲೆ ಇಟ್ಟು ನನ್ನನ್ನು ಕೃತಾರ್ಥನನ್ನಾಗಿ ಮಾಡು.”


12. “ನನಗೆ ತಂದೆ ತಾಯಿ ಬಂಧು ಬಳಗ ಯಾರೂ ಇಲ್ಲ.”


13. “ನೀನು ಕೇಳಿದ ವರ ಕೊಟ್ಟಮೇಲೆಯೂ ನೀನೇಕೆ ನನ್ನ ಹಿಂದೆ ಬರುವೆ?”


14. “ರಣರಂಗದಲ್ಲಿ ನೀನು ನೀಡಿದ ಎರಡು ವರಗಳು ನೆನಪಿದೆಯೇ?”


15. “ಶುಲ್ಕ ಕೊಡದೆ ಅಂತ್ಯಕ್ರಿಯೆ ಮಾಡಲು ನನ್ನಿಂದಾಗದು.”


16.  “ರಾಜ, ನನ್ನ ತಂದೆ ತಾಯಿಯ ಬಾಯಾರಿಕೆಯನ್ನು ನೀಗಿಸು.”


17. “ಸರ್ಪದ ಹಲ್ಲಿಗಿಂತಲೂ ಮೊನಚಾದದ್ದಲ್ಲವೇ ಕೃತಘ್ನ ಮಗಳನ್ನು ಪಡೆಯುವುದು?”


18.  “ಜಹಾಪನ, ನೀವು ನನ್ನನ್ನು ಜೀವಂತ ಸಮಾಧಿ ಮಾಡಿದರು ನಾನು ನಗುನಗುತ್ತಲೇ ಸ್ವೀಕರಿಸುವೆ.”


19. “ಹೋಮೋನಿಯಂ ರಿವೀಲಿಯೋ .... “ (“ಎಲ್ಲ ನರಮಾನವರು ನನ್ನ ಮುಂದೆ ಪ್ರತ್ಯಕ್ಷ ಕಾಣಿಸಿಕೊಳ್ಳಿ”)

______________________


ಪ್ರಧಾನ ಸಂಭಾಷಣೆಗಳು

-ರವಿ ಗೋಪಾಲರಾವ್

ಉತ್ತರ


1.”ಕೇಶವ, ನೋಡು ಕೇಶವ.”

ಉತ್ತರ: ದ್ರೌಪದಿ ಶ್ರೀಕೃಷ್ಣನಿಗೆ ಹೇಳಿದ್ದು; ದೃತರಾಷ್ಟ್ರನ ಸಭೆಯಲ್ಲಿ ಅಪಮಾನಿತಳಾಗಿ ತನ್ನ ಕೇಶವನ್ನು ಕಟ್ಟುವುದಿಲ್ಲವೆಂದು ಕೃಷ್ಣನ ಮುಂದೆ ಶಪಥ ಮಾಡಿದಾಗ ನೆಡೆದ ಸಂಭಾಷಣೆ (ಮಹಾಭಾರತ)

2. “ಗೆದ್ದವನು ಸೋತ, ಸೋತವನು ಸತ್ತ.” 

ಉತ್ತರ: ದೇವಯ್ಯ, ಭೂತಯ್ಯನ… ಕತೆಯಲ್ಲಿ. ಕೋರ್ಟ್ ಕೇಸ್ ಸೋತ ಮೇಲೆ ತನ್ನ ಬೆಂಬಲಿಗರ ಜೊತೆ ಕೊನೆ ಸಂಭಾಷಣೆ. (ಭೂತಯ್ಯನ ಮಗ ಅಯ್ಯು)

3. “ಕುಟಿಲತೆಯಲಿ ಸೇರಲು ನನ್ನ ಪುರುಷನಿರದ ಈ ಗಳಿಗೆಗಾಗಿ ಕಾಯುತ್ತಿದ್ದೆಯ?”  

ಉತ್ತರ:  ಸೀತೆ, ಲಕ್ಷ್ಮಣನಿಗೆ ಪರ್ಣಕುಟೀರದಲ್ಲಿ ಹೇಳಿದ್ದು. ರಾಮ ಚಿನ್ನದ ಜಿಂಕೆಯನ್ನು ಅಟ್ಟಿ ಹೋಗಿ ಮರಳಿ ಬರದಾಗ. (ರಾಮಾಯಣ)

4. “ಉತ್ತರ ಗೊತ್ತಿದ್ದರೂ ಹೇಳದಿದ್ದರೆ ನಿನ್ನ ತಲೆ ಸಾವಿರ ಹೋಳಾಗುವುದು.”

ಉತ್ತರ:  ಶವದೊಳಗಿದ್ದ ಬೇತಾಳ ತ್ರಿವಿಕ್ರಮನಿಗೆ ಹೇಳುವುದು.  ಪ್ರತಿಬಾರಿಯೂ ತ್ರಿವಿಕ್ರಮ ಬೇತಾಳವನ್ನು ಹಿಡಿದು ಸ್ಮಶಾನದ ದಾರಿಯತ್ತ ನಡೆದಾಗ. (ತ್ರಿವಿಕ್ರಮನ ಕಥೆಗಳು) 

5. “ನಾನು ಏನು ಮಾಡಿದರೂ ಏಕೆ ಎಂದು ಕಾರಣ ಕೇಳಕೂಡದು.”

ಉತ್ತರ: ಗಂಗೆ ಶಂತನುಗೆ ಹೇಳಿದ್ದು.  ಶಂತನು ಗಂಗೆಯನ್ನು ಮದುವೆ ಮಾಡಿಕೊಳ್ಳುತ್ತೀನಿ ಎಂದಾಗ ಗಂಗೆ ಹಾಕಿದ ಷರತ್ತು. (ಮಹಾಭಾರತ) 

6. “,,,,,,,,,,,, ಮೆಚ್ಚನಾ ಪರಮಾತ್ಮನು.”

ಉತ್ತರ:  ಅರ್ಬುದ ವ್ಯಾಘ್ರ ಪುಣ್ಯಕೋಟಿಗೆ ಹೇಳಿದ್ದು.  ಪುಣ್ಯಕೋಟಿ ಮರಳಿ ಬಂದಾಗ ನಿನ್ನನ್ನು ಕೊಂದು ತಿಂದರೆ ಮೆಚ್ಚನಾ ಪರಮಾತ್ಮನು ಎಂದು ಹೇಳಿ ತನ್ನ ಪ್ರಾಣವನ್ನೇ ಕೊಡುವ ಸನ್ನಿವೇಶ.  (ಪುಣ್ಯಕೋಟಿ)

7. “ನಿಲ್ಲಿಸದಿರು ವನಮಾಲಿ ಕೊಳಲ ಗಾನವ.”

ಉತ್ತರ:  ಗೋಪಿಕೆಯರು ಶ್ರೀಕೃಷ್ಣನಿಗೆ ಹೇಳಿದ್ದು. ಗೋಕುಲವನ್ನು ಬಿಟ್ಟುಹೋಗುವ ಮುಂಚೆ ಗೋಪಿಕೆಯರು ಮತ್ತು ಶ್ರೀಕೃಷ್ಣನ ಸಂಭಾಷಣೆ. (ಗೋಕುಲ ನಿರ್ಗಮನ)

8.  “ಇವರೆಲ್ಲರನ್ನು ಕೊಂದು ನಾನೆಂತ ಭಾಗ್ಯ ಪಡೆಯುವೆ?”

ಉತ್ತರ  ಅರ್ಜುನ ಶ್ರೀಕೃಷ್ಣನನ್ನು ಕೇಳಿದ್ದು. ಮಹಾಭಾರತದ ಯುದ್ಧ ಶುರುವಾಗುವ ಮುಂಚೆ.(ಮಹಾಭಾರತ) 

9. “ನಾನೇ ಗೆದ್ದೇ. ನಾನೇ ಗೆದ್ದೇ.  ನಿನಗಿಂತ ಮುಂಚೆ ಭೂಮಿ ಸುತ್ತಿ ಬಂದೆ.” 

ಉತ್ತರ:  ಗಣೇಶ ಕಾರ್ತಿಕೇಯನಿಗೆ ಹೇಳಿದ್ದು.  ಶಿವ ಪಾರ್ವತಿಯರನ್ನು ಸುತ್ತಿ ಹಾಕಿದರೆ ಭೂಮಿಯನ್ನು ಸುತ್ತಿದಹಾಗೆ ಎಂದು ತಮ್ಮ ಕಾರ್ತಿಕೇಯನಿಗೆ ತಿಳಿ ಹೇಳಿದಾಗ. (ಸ್ಕಂದ ಪುರಾಣ)

10. “ನಾನು ನಿನ್ನನ್ನು ಪಾಣಿಗ್ರಹಣ ಮಾಡಿದ್ದು ನೆನಪಿಲ್ಲ.”

ಉತ್ತರ:  ದುಷ್ಯಂತ ಶಕುಂತಲೆಗೆ ಹೇಳಿದ್ದು.  ಶಕುಂತಲೆ ದುಷ್ಯಂತನ ಆಸ್ಥಾನಕ್ಕೆ ಮಗನೊಂದಿಗೆ ಬಂದಾಗ.(ಶಾಕುಂತಲ ನಾಟಕ)

11.  “ನನ್ನ ತಲೆಯಮೇಲೆ ಇಟ್ಟು ನನ್ನನ್ನು ಕೃತಾರ್ತನನ್ನಾಗಿ ಮಾಡು.”

ಉತ್ತರ:  ಬಲಿ ಚಕ್ರವರ್ತಿ ವಿಷ್ಣುವಿಗೆ ಹೇಳಿದ್ದು.  ಎರಡೇ ಹೆಜ್ಜೆಯಲ್ಲಿ ಭೂಮ್ಯಾಕಾಶ ತುಳಿದು ಮೂರನೇ ಹೆಜ್ಜೆ ಎಲ್ಲಿ ಇಡಲಿ ಎಂದು ಕೇಳಿದಾಗ (ವಾಮನಾವತಾರ) 

12. “ನನಗೆ ತಂದೆ ತಾಯಿ ಬಂಧು ಬಳಗ ಯಾರೂ ಇಲ್ಲ.”

ಉತ್ತರ:  ಬಾಲಕ ಶಂಕರಾಚಾರ್ಯರು ಗೌಡಪಾದ ಗುರುಗಳಿಗೆ ಹೇಳಿದ್ದು.  ಮೊದಲ ಬಾರಿ ಭೇಟಿಯಾದಾಗ ಗೌಡಪಾದರು ನೀನು ಯಾರೆಂದು ಕೇಳಿದಾಗ ಕೊಟ್ಟ ಉತ್ತರ. (ಶಂಕರಾಚಾರ್ಯರ ಜೀವನ ಚರಿತ್ರೆ) 

13. “ನೀನು ಕೇಳಿದ ವರ ಕೊಟ್ಟಮೇಲೆಯೂ ನೀನೇಕೆ ನನ್ನ ಹಿಂದೆ ಬರುವೆ?”

ಉತ್ತರ:  ಯಮ ಸಾವಿತ್ರಿಯನ್ನು ಕೇಳಿದ್ದು. ಯಮ ನೀಡಿದ ವರಗಳನ್ನು ತಿರಸ್ಕರಿಸಿ ಸಾವಿತ್ರಿ ಗಂಡನನ್ನು ಉಳಿಸಿಕೊಳ್ಳಲು ಯಮನ ಹಿಂದೆಯೇ ಹೋದಾಗ ನಡೆದ ಸಂಭಾಷಣೆ.(ಸತ್ಯವಾನ್  ಸಾವಿತ್ರಿ) 

14. “ರಣರಂಗದಲ್ಲಿ ನೀನು ನೀಡಿದ ಎರಡು ವರಗಳು ನೆನಪಿದೆಯೇ?”

ಉತ್ತರ:  ಕೈಕೆ ದಶರಥನನ್ನು ಕೇಳಿದ್ದು.  ಮಂಥರೆಯ ಕುಟಿಲೋಪಾಯಕ್ಕೆ ಸಿಕ್ಕಿ ಕೈಕೆ ದಶರಥ ನೀಡಿದ್ದ ವರಗಳನ್ನು ಕಾರ್ಯಗತ ಮಾಡಲು ಕೇಳಿದಾಗ.(ರಾಮಾಯಣ)

15. “ಶುಲ್ಕ ಕೊಡದೆ ಅಂತ್ಯಕ್ರಿಯೆ ಮಾಡಲು ನನ್ನಿಂದಾಗದು.”

ಉತ್ತರ: ಸತ್ಯ ಹರಿಶ್ಚಂದ್ರ ತನ್ನ ಪತ್ನಿಗೆಹೇಳಿದ್ದು. ಮಗು ಲೋಹಿತಾಶ್ವ ಹಾವಿನವಿಷದಿಂದ ಮೃತನಾದಾಗ ಅಂತ್ಯಕ್ರಿಯೆ ಮಾಡಲು ಶ್ಮಶಾನದ ಒಡೆಯನಿಗೆ  ಶುಲ್ಕ ಕೊಡಲೇಬೇಕೆಂದು ಹರಿಶ್ಚಂದ್ರ ಹೇಳುವ ಮಾತು.(ಸತ್ಯ ಹರಿಶ್ಚಂದ್ರ)

16.  “ರಾಜ, ನನ್ನ ತಂದೆ ತಾಯಿಯ ಬಾಯಾರಿಕೆಯನ್ನು ನೀಗಿಸು.”

ಉತ್ತರ:  ಶ್ರಾವಣ ಕುಮಾರ ದಶರಥನಿಗೆ ಹೇಳಿದ್ದು.  ಆಕಸ್ಮಿಕವಾಗಿ ದಶರಥನ ಬಾಣದಿಂದ ಸಾವನ್ನಪ್ಪುವ ಮುನ್ನ ಶ್ರಾವಣ ತನ್ನ ಕುರುಡು ತಂದೆ ತಾಯಿಗಳಿಗೆ ನೀರು ಕೊಡು ಎಂದು ದಶರಥನಿಗೆ ಹೇಳಿದ ಸನ್ನಿವೇಶ. (ಶ್ರವಣ ಕುಮಾರನ ಕತೆ, ರಾಮಾಯಣ) 

17. “ಸರ್ಪದ ಹಲ್ಲಿಗಿಂತಲೂ ಮೊನಚಾದದ್ದಲ್ಲವೇ ಕೃತಘ್ನ ಮಗಳನ್ನು ಪಡೆಯುವುದು?”

ಉತ್ತರ:  ಕಿಂಗ್ ಲೀಯರ್ ತನ್ನ ಇಬ್ಬರು ನಿಷ್ಕರುಣ ಹೆಣ್ಣುಮಕ್ಕಳ ಬಗ್ಗೆ ತನಗೆತಾನೇ  ಮಾತನಾಡಿಕೊಳ್ಳುವ ದೃಶ್ಯ ಶೇಕ್ಸ್ಪಿಯರ್ ನ ಕಿಂಗ್ ಲಿಯರ್ ಕಥೆಯಿಂದ (ಕಿಂಗ್ಲಿಯರ್)

18.  “ಜಹಾಪನ, ನೀವು ನನ್ನನ್ನು ಜೀವಂತ ಸಮಾಧಿ ಮಾಡಿದರು ನಾನು ನಗುನಗುತ್ತಲೇ ಸ್ವೀಕರಿಸುವೆ.”

ಉತ್ತರ:  ಅನಾರ್ಕಲಿ ಬಾದಷಹ ಅಕ್ಬರನಿಗೆ ಹೇಳಿದ್ದು.  ಸಲೀಮ್ ಮತ್ತು ಅನಾರ್ಕಲಿಯ ಅನೈತಿಕ ಸಂಬಂಧದ ತೀರ್ಮಾನ ತಿಳಿದನಂತರ ಅನಾರ್ಕಲಿ ಸಂಭಾಷಣೆ (ಅನಾರ್ಕಲಿ)

19. “ಹೋಮ್ನಮ್ ರಿವೆಲಿಯೋ .... “ (“ಎಲ್ಲ ನರಮಾನವರು ಪ್ರತ್ಯಕ್ಷ ನನ್ನ ಮುಂದೆ ಕಾಣಿಸಿಕೊಳ್ಳಿ”)

ಉತ್ತರ: ಮಾಂತ್ರಿಕಕೋಲನ್ನು ಕೈಯಲ್ಲಿ ಹಿಡಿದು ಹ್ಯಾರಿ ಪಾಟರ್ ಕಾಣಿಸದ ವ್ಯಕ್ತಿಗಳಿಗೆ ಕೂಗಿ ಹೇಳುವ ಇಂದ್ರಜಾಲದ ಎಚ್ಚರಿಕೆ.(ಹ್ಯಾರಿ ಪಾಟರ್ ಕಥೆಗಳು)

______________

ಇದಕ್ಕೇ ಇಂಗ್ಲಿಷ್ ಬೇಡ ಬೇಡ ಅಂತ  ಹೇಳೋದು. 

ಇಂಗ್ಲಿಷ್ಗೆ ಭಾಷಾಂತರಿಸಿದ ಕನ್ನಡ ಹಾಡುಗಳನ್ನು ಕನ್ನಡಕ್ಕೆ ಭಾಷಾಂತರಿಸಿ.

- ರವಿ ಗೋಪಾಲರಾವ್ 


1. ಇನ್ ಟೌನ್ ಐ ಕ್ಲೆವರ್

2. ಎಕ್ಸೆಸ್ ಸ್ವೀಟ್ ಅಫೆಕ್ಷನ್ 

3. ಐ (eye) ಕಿಂಗ್ ಈಸ್ 

4. ಐ ಲೈಕ್ಡ್ ಬಾಯ್ 

5. ಒನ್ ಡೇ ಫ್ರಮ್ ವೇರ್

6. ಒನ್ ಲ್ಯಾನ್ಡ್ ಒನ್ ರೇಸ್ 

7. ಕನ್ನಡ ಆಲ್ ಚಿಲ್ಡ್ರನ್

8. ದಿಸ್ ಡೀಸೆನ್ಸಿ?

9. ದಿಸ್ ಮೈ ಆನ್ಸರ್

10. ಫ್ರೆಶ್ಫ್ರೆಶ್ ಗ್ರೌಂಡ್ನಟ್

11. ಬರ್ತ್ ಬರ್ತ್ ಬಾಂಡಿಂಗ್

12. ಯು ಸ್ಟೆಪ್ ರೂಟ್

13. ಯುವರ್ ಐ (eye)  ಮಿರರ್

14. ರನ್ನಿಂಗ್ ರಿವರ್ ಓಷನ್

15. ರೆಡ್ ರೋಜ್ ರೆಡ್ಲಿಪ್ಸ್ 

16. ಲಿಸನ್ ಕೃಷ್ಣ ಫ ಫ್ಲ್ಯೂಟ್ ಕಾಲ್ 

17. ಲೈಫ್ ಒನ್ ಎಮೋಷನ್ ಸಾಂಗ್

18. ವಾಕ್ ಫಾರ್ವರ್ಡ್ ವಾಕ್

19. ಸಿಲ್ವರ್ ಬರ್ಡ್ ಬಿಕಮ್ 

20. ಸ್ವಿಶ್ ವಿಂಡ್ ಫ್ಲೋ 

21. ಹ್ಯಾಂಡ್ಸಮ್ ಹ್ಯಾಂಡ್ಸಮ್ಮರ್

22. ಐ (eye) ಲ್ಯಾಷಸ್ ಈಚ್ ಅದರ್ 

23. ಮ್ಯಾರೇಜ್ ದಿಸ್ ಕನೆಕ್ಷನ್

24. ಬಿವೇರ್ ಐ ವೈನ್ (vine) ಫ್ಲ್ಯಾಶ್

25. ದಿಸ್ ಬ್ಯೂಟಿಫುಲ್ ಹೌಸ್ ಇನ್ 


ಉತ್ತರ:  

1. ಇನ್ ಟೌನ್ ಐ ಕ್ಲೆವರ್:  ನಮ್ಮೂರಾಗ್ ನಾನೊಬ್ಬನೇ ಜಾಣ

2. ಎಕ್ಸೆಸ್ ಸ್ವೀಟ್ ಅಫೆಕ್ಷನ್:  ಅತಿಮಧುರ ಅನುರಾಗ ಜೀವನ 

3. ಐ (eye) ಕಿಂಗ್ ಈಸ್: ನಯನದಲಿ ದೊರೆಇರಲು ಯಾರ ಕಾಣಲಿ 

4. ಐ ಲೈಕ್ಡ್ ಬಾಯ್:  ನಾ ಮೆಚ್ಚಿದ ಹುಡುಗನಿಗೆ 

5. ಒನ್ ಡೇ ಫ್ರಮ್ ವೇರ್:  ಒಂದು ದಿನ ಎಲ್ಲಿಂದಲೋ ನೀ ಬಂದೆ

6. ಒನ್ ಲ್ಯಾನ್ಡ್ ಒನ್ ರೇಸ್:  ಒಂದೇ ನಾಡು ಒಂದೇ ಕುಲವು ಒಂದೇ ದೈವವು

7. ಕನ್ನಡ ಆಲ್ ಚಿಲ್ಡ್ರನ್:  ಕನ್ನಡದ ಮಕ್ಕಳೆಲ್ಲ ಒಂದಾಗಿ ಬನ್ನಿ

8. ದಿಸ್ ಡೀಸೆನ್ಸಿ?:  ಇದೇನು ಸಭ್ಯತೆ ಇದೇನು ಸಂಸ್ಕೃತಿ

9. ದಿಸ್ ಮೈ ಆನ್ಸರ್:  ಇದೇ ನನ್ನ ಉತ್ತರ ಕೊಡುವೆ ಬಾರೆ ಹತ್ತಿರ 

10. ಫ್ರೆಶ್ಫ್ರೆಶ್ ಗ್ರೌಂಡ್ನಟ್:  ತಾಜಾ ತಾಜಾ ಕಳ್ಳೇಕಾಯಿ ಗರ್ಮಾ ಗರಂ 

11. ಬರ್ತ್ ಬರ್ತ್ ಬಾಂಡಿಂಗ್:  ಜನುಮ ಜನುಮದಾ ಅನುಬಂಧ 

12. ಯು ಸ್ಟೆಪ್ ರೂಟ್:  ನೀ ನೆಡೆವ ಹಾದಿಯಲ್ಲಿ ನಗೆ ಹೂವು ಬಾಡದಿರಲಿ 

13. ಯುವರ್ ಐ (eye)  ಮಿರರ್:  ನಿನ್ನ ಕಣ್ಣ ಕನ್ನಡಿಯಲ್ಲಿ ಕಂಡೆ ನ್ನನ್ನರೂಪ

14. ರನ್ನಿಂಗ್ ರಿವರ್ ಓಷನ್:  ಓಡುವ ನದಿ ಸಾಗರವ ಸೇರಲೇ ಬೇಕು

15. ರೆಡ್ ರೋಜ್ ರೆಡ್ಲಿಪ್ಸ್:  ಕೆಂಪು ಗುಲಾಬಿಯ ಕೆಂದುಟಿ ಚೆಲುವೆ

16. ಲಿಸನ್ ಕೃಷ್ಣ ಫ್ಲ್ಯೂಟ್ ಕಾಲ್:  ಆಲಿಸು ಕೃಷ್ಣನ ಕೊಳಲಿನ ಕರೆ  

17. ಲೈಫ್ ಒನ್ ಎಮೋಷನ್ ಸಾಂಗ್:  ಬಾಳೊಂದು ಭಾವ ಗೀತೆ ಆನಂದ ತುಂಬಿದ 

18. ವಾಕ್ ಫಾರ್ವರ್ಡ್ ವಾಕ್:  ನಡೆ ಮುಂದೆ ನಡೆ ಮುಂದೆ ನುಗ್ಗಿ ನಡೆ ಮುಂದೆ 

19. ಸಿಲ್ವರ್ ಬರ್ಡ್ ಬಿಕಮ್:  ಬೆಳ್ಳಿ ಹಕ್ಕಿ ಆಗುವ ಬೆಳ್ಳಮೋಡ ಸೇರುವ

20. ಸ್ವಿಶ್ ವಿಂಡ್ ಫ್ಲೋ:  ಬೀಸೋ ಗಾಳಿಯಲಿ ಹರಿವ ನೀರಾಲೆ 

21. ಹ್ಯಾಂಡ್ಸಮ್ ಹ್ಯಾಂಡ್ಸಮ್ಮರ್: ಚೆಲುವರಲ್ಲಿ ಚೆಲುವ ಒಲಿದರೆನ್ನ ಒಲಿವ 

22. ಐ (eye) ಲ್ಯಾಷಸ್ ಈಚ್ ಅದರ್:  ಕಣ್ಣು ರೆಪ್ಪೆ ಒಂದನೊಂದು ಮರೆವುದೆ ಅವು ಎಂದಾದರೂ 

23. ಮ್ಯಾರೇಜ್ ದಿಸ್ ಕನೆಕ್ಷನ್:  ಮದುವೆಯ ಈ ಬಂಧ  ಅನುರಾಗದ ಅನುಬಂಧ 

24. ಬಿವೇರ್ ಐ ವೈನ್ (vine) ಫ್ಲ್ಯಾಶ್:  ಜೋಕೆ  ನಾನು ಬಳ್ಳಿಯ  ಮಿಂಚು 

25. ದಿಸ್ ಬ್ಯೂಟಿಫುಲ್ ಹೌಸ್ ಇನ್:  ಈ ಚಂದದ ಮನೆಯಲ್ಲಿ ಆನಂದದ  

__________________

ಟೈಪೋ ಟೈಪೋ.ಎಲ್ಲ ತಪ್ಪು. 

ನೀವಾದರೂ ಸರಿ ಮಾಡಿ ಈ ಹಾಡುಗಳನ್ನ ಗುನಿಗಿಕೊಳ್ಳಿ. 

(#) ಎಷ್ಟು ಪದವೆಂದು ಕೊಟ್ಟಿದೆ.

-ರವಿ ಗೋಪಾಲರಾವ್ 


1. ಗೆ ಲೆನೀಮಾ ಮುನದ ವಿಮಹೂ ಲ್ಲಿಡಿ (5) 


2.ಕುನ ಬೇಗ ಬೇಸಗಿ ಕುನ (4)


3.ರನ ಗಮ್ಮಸಂ ದರಸಾ ಸಾಆನಂ (4)


4.ಮಾಕ ಯನಾಯಿನೇತಾ ರಾಡಜ ನ್ನಕುರ  (4)


5.ದವಿಂ ಇಂಗೋಎ ದುಗೆನ (3)


6.ತುಹೂ ದಿವುಚೆವೆ ನಂಲುದೆಂಲ್ಲ (3)


7.ಳೆಗುಕ್ಕ ದುವೆಹೇ ಪುಟ್ಟೊಂಮ ಣಿಳುಟಾ (4)


8.ಪೂದ ಜಜಾಲ ಫಹು ನ್ನಬ (4)


9.ಆಆ ಡಿಡೂ ಆನೋ ಟಡು ಡಿಆ (5)


10.ಮನ್ನ ಹಾನ ದುಹಾಯಂವೆನ ಆಆ ತೆನ್ನ (5) 


11.ಲ್ಲಿಂರು ದಬಂ ರು ದೆರು ಯಾಬಂಯಾ ನೀಯಾ (6)


12. ನಿನಾಆಮೇ ವೇಲಿನೆಂ ಬೀಶ ಶನಕಾ ಳದುನ್ನಲಿ (5)


ಉತ್ತರ

1.ನೀ ಮುಡಿದ ಮಲ್ಲಿಗೆ ಹೂವಿನ ಮಾಲೆ 

1. ಗೆ ಲೆನೀಮಾ ಮುನದ ವಿಮಹೂ ಲ್ಲಿಡಿ (5) 


2.ನಗ ಬೇಕು ನಗಿಸ ಬೇಕು

2.ಕುನ ಬೇಗ ಬೇಸಗಿ ಕುನ (4)


3.ನಮ್ಮ ಸಂಸಾರ ಆನಂದ ಸಾಗರ

3.ರನ ಗಮ್ಮಸಂ ದರಸಾ ಸಾಆನಂ (4)


4.ನಾನೇ ರಾಜಕುಮಾರ ಕನ್ನಡ ತಾಯಿಯ 

4.ಮಾಕ ಯನಾಯಿನೇತಾ ರಾಡಜ ನ್ನಕುರ  (4)


5.ಇಂದು ಎನಗೆ ಗೋವಿಂದ 

5.ದವಿಂ ಇಂಗೋಎ ದುಗೆನ (3)


6.ಹೂವು ಚೆಲುವೆಲ್ಲ ನಂದೆಂದಿತು 

6.ತುಹೂ ದಿವುಚೆವೆ ನಂಲುದೆಂಲ್ಲ (3)


7.ಗುಟ್ಟೊಂದು ಹೇಳುವೆ ಪುಟಾಣಿ ಮಕ್ಕಳೆ 

7.ಳೆಗುಕ್ಕ ದುವೆಹೇ ಪುಟ್ಟೊಂಮ ಣಿಳುಟಾ (4)


8.ಬಹು ಜನ್ಮದ ಪೂಜಾ ಫಲ     

8.ಪೂದ ಜಜಾಲ ಫಹು ನ್ನಬ (4)


9.ಆಡೂ ಆಟ ಆಡು ಆಡಿ ನೋಡು 

9.ಆಆ ಡಿಡೂ ಆನೋ ಟಡು ಡಿಆ (5)


10.ಆಹಾ ನನ್ನ ಮದುವೆಯಂತೆ ಆಹಾ ನನ್ನ 

10.ಮನ್ನ ಹಾನ ದುಹಾಯಂವೆನ ಆಆ ತೆನ್ನ (5) 


11.ಯಾರು ಯಾರು ನೀ ಯಾರು ಎಲ್ಲಿಂದ ಬಂದೆ 

11.ಲ್ಲಿಂರು ದಬಂ ರು ದೆರು ಯಾಬಂಯಾ ನೀಯಾ (6)


12.ಆಕಾಶವೇ ಬೀಳಲಿ ಮೇಲೆ ನಾನೆಂದು ನಿನ್ನವನೆ

12. ನಿನಾಆಮೇ ವೇಲಿನೆಂ ಬೀಶ ಶನಕಾ ಳದುನ್ನಲಿ (5)


__________________

ಮೊದಲ ದೃಶ್ಯ, ಮೊದಲ ಸಂಭಾಷಣೆ , ಕೊನೆ ದೃಶ್ಯ , ಕೊನೆ ಸಂಭಾಷಣೆ 

ಜುಲೈ 4 ಲಾಂಗ್ ವೀಕೆಂಡ್ ರಸಪ್ರಶ್ನೆ. 

- ರವಿ ಗೋಪಾಲರಾವ್ 


ಕೆಳಗೆ 12 ಕನ್ನಡ ಚಿತ್ರಗಳ  ಮೊದಲ ದೃಶ್ಯ, ಮೊದಲ ಸಂಭಾಷಣೆ , ಕೊನೆ ದೃಶ್ಯ , ಕೊನೆ ಸಂಭಾಷಣೆ ಕೊಟ್ಟಿದೆ. ಆದರೆ ಎಲ್ಲ  ಬೆರೆತು ಹೋಗಿದೆ.  ಅವುಗಳನ್ನು ಬೇರ್ಪಡಿಸಿ, ಚಿತ್ರದ ಹೆಸರನ್ನು ತಿಳಿಸಿ. 

ನಿಮ್ಮ ಉತ್ತರ ಈ ರೀತಿ ಇರಲಿ. 

A. ಮೊದಲ ದೃಶ್ಯ (#) -- ಕೊನೆ ದೃಶ್ಯ(#)

B. ಮೊದಲ ಸಂಭಾಷಣೆ (#) -- ಕೊನೆ ಸಂಭಾಷಣೆ (#)

C. ಚಿತ್ರದ ಹೆಸರು  


1.ಒಂದು ಋಷ್ಯಾಶ್ರಮ. ಯತಿಗಳೆಲ್ಲ ಸೇರಿ ಯಜ್ಞ ಮಾಡುತ್ತಿರುತ್ತಾರೆ. ಆದರೆ ಗೋಶಾಲೆಯಿಂದ ಹಸುಗಳನ್ನು ಕದ್ದು ಓಡಿಸಿಕೊಂಡು ಹೋಗುತ್ತಾರೆ ಕಳ್ಳರು.. ಆಗ ನಾಯಕ ನಟ ತನ್ನ ಬಾಣಗಳಿಂದ ಒಂದು ಗೋಡೆಯನ್ನೇ ನಿರ್ಮಿಸಿ ಹಸುಗಳನ್ನು ಬಿಡಿಸುತ್ತಾನೆ

2. ಜನ ನೆರದಿದ್ದಾರೆ. ಒಂದು ಪ್ರತಿಮೆಗೆ ಹಾರ ಹಾಕಿ ಒಬ್ಬ ಭಾಷಣ ಕೊಡುತ್ತಿದ್ದಾನೆ.

3.ಒಣಗಿದ ಮರ, ಸೂರ್ಯಾಸ್ತಮದ ಸಮಯ. ಒಬ್ಬನೇ ಏಕಾಂಗಿಯಾಗಿ ಹೋಗುತ್ತಿರುವ ನಟ

4. ಯುದ್ಧ ಎಲ್ಲ ಮುಗಿದಿದೆ. ತಂದೆ ಮಕ್ಕಳಿಬ್ಬರು ಒಬ್ಬರನ್ನ ಒಬ್ಬರು ತಬ್ಬಿಕೊಂಡು ಎಲ್ಲರೂ ಹರ್ಷದಲ್ಲಿ ಇದ್ದಾರೆ.

5. ಹಳ್ಳಿ ಮನೆ.  ಒಳಗಿಂದ ಪಾತ್ರೆ ಪಡಗಗಳನ್ನು ತೆಗೆದು ಹೊರಕ್ಕೆಸೆಯುತ್ತಿರುವ ಸದ್ದು . ದಷ್ಟಪುಷ್ಟನಾದ ಬ್ರಾಹ್ಮಣ ಸಾಲ ವಸೂಲಿಗಾಗಿ ನಿಂತಿದ್ದಾನೆ. ಹೆಣ್ಣು ಮಗಳೂ ಅಂತ ಲೆಕ್ಕಿಸದೆ ಬಯ್ಯುತ್ತಿದ್ದಾನೆ.

6.“ನೀವೇ ಮೊದಲು ಉಪಹಾರ ಮಾಡಬೇಕಿತ್ತು. ಬೇರೊಂದು ಮದವೆ ಆಗಬೇಕಿತ್ತು ”  ನಕ್ಕು ಯತಿ ಉತ್ತರಿಸುತ್ತಾನೆ: “ಹದಿನೈದು ವರ್ಷಗಳಿಂದ ನೀನು ಇದನ್ನೇ ಹೇಳುತ್ತಿದ್ದಿ.”

7. “ಮನೆಯಲ್ಲಿ ಗಂಡಸರಿಲ್ಲದ ಸಮಯದಲ್ಲಿ ಬಂದು ಹೀಗೆಲ್ಲ ಮಾಡಬಹುದೇ ಬುದ್ಧಿ?”“ಇವತ್ತು ಕೊಟ್ಟಾನು ನಾಳೆ ಕೊಟ್ಟಾನು ಅಂತ ನಾನು ಕಾಯ್ತಾಯಿದ್ದರೆ ನಿನ್ನ ಗಂಡ…” 

8..ತುಂಬಾ ಖುಷಿಯಾಗಿ ಹಾಡು ಹೇಳಿಕೊಂಡು ಹಳ್ಳಿಗೆ ಬರುತ್ತಿದ್ದಾನೆ ಒಬ್ಬ ಸ್ಪುರದ್ರೂಪಿ ಪುರುಷ. 

9. ದೊಡ್ಡ ಬಂಗಲೆ. ಸೂಟುಬೂಟುಧಾರಿ ನಟ ಮಾಡಿ ಮೆಟ್ಟಿಲು ಇಳಿದು ಬರುತ್ತಾನೆ. ಡ್ರೈವರ್ ಕಾರಿನ ಬಾಗಿಲು ತೆಗೆದು ಕೂಡಿಸಿ ಆಫಿಸ್ ನಲ್ಲಿ ಬಿಡುತ್ತಾನೆ. 

10. ಬೆಳಗಿನ ಜಾವ.  ಹಳ್ಳಿಯಲ್ಲಿ ಯತಿ ಒಬ್ಬ ನದಿಯಲ್ಲಿ ಸ್ನಾನ ಮಾಡಿ ಮನೆಗೆ ಬಂದು ಪೂಜೆ ಪುನಾಸ್ಕಾರಗಳನ್ನು ಮುಗಿಸುತ್ತಾನೆ. ಹಳ್ಳಿಯ ಮನೆಯ ಒಂದು ಕೋಣೆಯಲ್ಲಿ ಮಲಗಿರುವ ರೋಗಿ ಹೆಂಡತಿಗೆ ತೀರ್ಥ ಕೊಟ್ಟು ಬೆಳಗಿನ ಉಪಹಾರಕ್ಕೆ ಒಲೆ ಹಚ್ಚುತ್ತಾನೆ.

11.  “ನಿಮ್ಮಂತವರ ಆಶೀರ್ವಾದ ಎಂದು ಹುಸಿಯಾಗಲ್ಲ. ಊರೂ ಸುಭಿಕ್ಷವಾಗಿ ಇರುತ್ತೆ “ 

12. “ಮಗ ಅಪ್ಪನ್ನ ಮೀರಿಸಿದರೆ ಅಹಂಕಾರ ಪಡುವುದರಲ್ಲಿ ಏನು ತಪ್ಪಿಲ್ಲ.”   

13.“ದೇವಪುರದಲ್ಲೂ ಪ್ಲೇಗ್ ಅಂತ ಕೇಳಿದೆ. ನೀವು ಅಲ್ಲಿಗೆ ಏಕೆ ಹೋಗ್ತಾ ಇದಿರಿ?”“ನನ್ನ ಪರಿಚಯದವರೊಬ್ಬರನ್ನ ನೋಡ ಬೇಕಿತ್ತು.”  

14. “ಗುಡ್ಮಾರ್ನಿಂಗ್ ಸಾರ್”

15. ಒಂದು ಸಣ್ಣ ಎತ್ತಿನಗಾಡಿ.  ಇತರರೊಡನೆ ನಟ ಗಾಡಿಯಲ್ಲಿ ಕುಳಿತುಕೊಂಡು ಹೊಳೆ ದಾಟುವ  ದೃಶ್ಯ.

16. ಗಂಡು ಹೆಣ್ಣು ಆಕಸ್ಮಿಕವಾಗಿ ಒಂದೇ ಬಸ್ಸಿನಲ್ಲಿ ಕುಳಿತು ಕೊಡಗಿನಲ್ಲಿ ನೆಡೆಯುವ ಮದುವೆ ಮನೆಗೆ ಆಗಮಿಸುತ್ತಾರೆ.

17. “ಪ್ರಜಾಸೇವೆಯೆಂದರೆ ಎಷ್ಟು ಶ್ರದ್ಧೆ. ಸ್ವತಃ ನೀವುಗಳೇ ಬಂದು ನಮ್ಮನ್ನು ಕಾಪಾಡಿದ್ದಕ್ಕಾಗಿ ಧನ್ಯರು ನಾವು”  

18. “ಲೋ ಇದೇ ಕಣೋ ನೀನು ಇಳಿಯಬೇಕಾಗಿರುವ  ಬಸ್ ಸ್ಟಾಂಡ್”  

19. ಮಾನಸಿಕ ಯಾತನೆಯಿಂದ ಬಳಲಿ ಬೆಂಡಾದ ಹೆಣ್ಣನ್ನು ಆಳುಗಳು ಬಲವಂತಾಗಿ ಕಾರಿನಲ್ಲಿ ಕೂಡಿಸಿಕೊಂಡು ಆಸ್ಪತ್ರೆಗೆ ಹೋಗುತ್ತಾರೆ.

20. “ಅಕ್ಕ ಅಕ್ಕ” “ನನ್ನ ಸೌಭಾಗ್ಯ ಹೊರಟು ಹೋಯಿತಪ್ಪ”

21. “ನೋಡಿ ಚಂದ್ರಪ್ಪ ಈಗಲೂ ಭೂಮಿನೇ ನೋಡ್ತಾಯಿದೆ. ಆಕಾಶ ನೋಡ್ತಾಯಿಲ್ಲ.”  

22.“ಬಿಡು ಮಾವ. ತಪ್ಪು ಮಾಡದ ಮನುಷ್ಯಾ ಯಾರಿದ್ದಾನೆ.”“ನಿನ್ನ ಮನಸ್ಸು ಇಷ್ಟು ವಿಶಾಲ ಆಯಿತು ಅಂತ ತಿಳಿಲಿಲ್ಲ ಕಣೋ”“ಕೂಡಿ ಬಾಳಿದರೇನೇ ಸ್ವರ್ಗ ಸುಖ.”  

23.“ನಾಬಂದೆ ನಾನೋಡ್ದೆ ನಾಗೆದ್ದೆ”  

24.ಸುಟ್ಟು ಹೋದ ಹಳ್ಳಿ ಮನೆ. ಹಳ್ಳಿ ಜನ ಎಲ್ಲ ಬಂದು ನಿಂತಿದ್ದಾರೆ. ಪೊಲೀಸರು ಬಂದು ಹೋಗುತ್ತಾರೆ. 


ಉತ್ತರ


ಬಂಗಾರದ ಮನುಷ್ಯ

ಮೊದಲ ದೃಶ್ಯ, ಸಂಭಾಷಣೆ: 

ನಟ ತುಂಬಾ ಖುಷಿಯಾಗಿ ಹಾಡು ಹೇಳಿಕೊಂಡು ಹಳ್ಳಿಗೆ ಬರುತ್ತಿದ್ದಾನೆ. 

“ಅಕ್ಕ ಅಕ್ಕ” “ನನ್ನ ಸೌಭಾಗ್ಯ ಹೊರಟು ಹೋಯಿತಪ್ಪ”


ಕೊನೆಯ ಸಂಭಾಷಣೆ, ದೃಶ್ಯ:

“ನಿಮ್ಮಂತವರ ಆಶೀರ್ವಾದ ಎಂದು ಹುಸಿಯಾಗಲ್ಲ. ಊರೂ ಸುಭಿಕ್ಷವಾಗಿ ಇರುತ್ತೆ. “ 

ಒಣಗಿದ ಮರ, ಸೂರ್ಯಾಸ್ತಮದ ಸಮಯ. ಒಬ್ಬನೇ ಏಕಾಂಗಿಯಾಗಿ ಹೋಗುತ್ತಿರುವ ನಟ “


ಕಸ್ತೂರಿ ನಿವಾಸ

ಮೊದಲ ದೃಶ್ಯ:

ದೊಡ್ಡ ಬಂಗಲೆ. ಸೂಟು ಭೊಟು ಧಾರಿ ನಟ ಮಾಡಿ ಮೆಟ್ಟಿಲು ಇಳಿದು ಬರುತ್ತಾನೆ. ಡ್ರೈವರ್ ಕಾರಿನ ಬಾಗಿಲು ತೆಗೆದು ಕೂಡಿಸಿ ಆಫಿಸ್ ನಲ್ಲಿ ಬಿಡುತ್ತಾನೆ. ಆಫಿಸಿನಲ್ಲಿ ಎಲ್ಲರು ಗುಡ್ಮಾರ್ನಿಂಗ್ ಹೇಳುತ್ತಾರೆ. 


ಕೊನೆಯ ಸಂಭಾಷಣೆ, ದೃಶ್ಯ:

“ನೋಡಿ ಚಂದ್ರಪ್ಪ ಈಗಲೂ ಭೂಮಿನೇ ನೋಡ್ತಾಯಿದೆ. ಆಕಾಶ ನೋಡ್ತಾಯಿಲ್ಲ.”  

ಜನ ನೆರದಿದ್ದಾರೆ. ಒಂದು ಪ್ರತಿಮೆಗೆ ಹಾರ ಹಾಕಿ ಒಬ್ಬ ಭಾಷಣ ಕೊಡುತ್ತಿದ್ದಾನೆ.


ಬಬ್ರುವಾಹನ

ಮೊದಲ ದೃಶ್ಯ:

ಒಂದು ಋಷ್ಯಾಶ್ರಮ. ಯತಿಗಳೆಲ್ಲ ಸೇರಿ ಯಜ್ಞ ಮಾಡುತ್ತಿರುತ್ತಾರೆ. ಆದರೆ ಗೋಶಾಲೆಯಿಂದ ಹಸುಗಳನ್ನು ಕದ್ದು ಓಡಿಸಿಕೊಂಡು ಹೋಗುತ್ತಾರೆ ಕಳ್ಳರು.. ಆಗ ನಾಯಕ ನಟ ತನ್ನ ಬಾಣಗಳಿಂದ ಒಂದು ಗೋಡೆಯನ್ನೇ ನಿರ್ಮಿಸಿ ಹಸುಗಳನ್ನು ಬಿಡಿಸುತ್ತಾನೆ


ಕೊನೆಯ ದೃಶ್ಯ, ಸಂಭಾಷಣೆ:

ಯುದ್ಧ ಎಲ್ಲ ಮುಗಿದಿದೆ. ತಂದೆ ಮಕ್ಕಳಿಬ್ಬರು ಒಬ್ಬರನ್ನ ಒಬ್ಬರು ತಬ್ಬಿಕೊಂಡು ಎಲ್ಲರೂ ಹರ್ಷದಲ್ಲಿ ಇದ್ದಾರೆ.

“ಮಗ ಅಪ್ಪನ್ನ ಮೀರಿಸಿದರೆ ಅಹಂಕಾರ ಪಡುವುದರಲ್ಲಿ ಏನು ತಪ್ಪಿಲ್ಲ.”   

 

ಸಂಸ್ಕಾರ

ಮೊದಲ ದೃಶ್ಯ, ಸಂಭಾಷಣೆ 

ಬೆಳಗಿನ ಜಾವ.  ಹಳ್ಳಿಯಲ್ಲಿ ಯತಿ ಒಬ್ಬ ನದಿಯಲ್ಲಿ ಸ್ನಾನ ಮಾಡಿ ಮನೆಗೆ ಬಂದು ಪೂಜೆ ಪುನಾಸ್ಕಾರಗಳನ್ನು ಮುಗಿಸುತ್ತಾನೆ.  ಹಳ್ಳಿಯ ಮನೆಯ ಒಂದು ಕೋಣೆಯಲ್ಲಿ ಮಲಗಿರುವ ರೋಗಿ ಹೆಂಡತಿಗೆ ತೀರ್ಥ ಕೊಟ್ಟು ಬೆಳಗಿನ ಉಪಹಾರಕ್ಕೆ ಓಲೆ ಹಚ್ಚುತ್ತಾನೆ. 

“ನೀವೇ ಮೊದಲು ಉಪಹಾರ ಮಾಡಬೇಕಿತ್ತು. ಬೇರೊಂದು ಮದವೆ ಆಗಬೇಕಿತ್ತು ”  

ನಕ್ಕು ಯತಿ ಉತ್ತರಿಸುತ್ತಾನೆ: “ಹದಿನೈದು ವರ್ಷಗಳಿಂದ ನೀನು ಇದನ್ನೇ ಹೇಳುತ್ತಿದ್ದಿ.”


ಕೊನೆಯ ದೃಶ್ಯ :

ಒಂದು ಸಣ್ಣ ಎತ್ತಿನಗಾಡಿ.  ಇತರರೊಡನೆ ನಟ ಗಾಡಿಯಲ್ಲಿ ಕುಳಿತುಕೊಂಡು ಹೊಳೆ ದಾಟುವ  ದೃಶ್ಯ.

“ದೇವಪುರದಲ್ಲೂ ಪ್ಲೇಗ್ ಅಂತ ಕೇಳಿದೆ. ನೀವು ಅಲ್ಲಿಗೆ ಏಕೆ ಹೋಗ್ತಾ ಇದಿರಿ?”

“ನನ್ನ ಪರಿಚಯದವರೊಬ್ಬರನ್ನ ನೋಡ ಬೇಕಿತ್ತು.”  


ಭೂತಯ್ಯನ ಮಗ ಅಯ್ಯು   

ಮೊದಲ ದೃಶ್ಯ, ಸಂಭಾಷಣೆ 

ಹಳ್ಳಿ ಮನೆ.  ಒಳಗಿಂದ ಪಾತ್ರೆ ಪಡಗಗಳನ್ನು ತೆಗೆದು ಹೊರಕ್ಕೆಸೆಯುತ್ತಿರುವ ಸದ್ದು . ದಷ್ಟಪುಷ್ಟನಾದ ಬ್ರಾಹ್ಮಣ ಸಾಲ ವಸೂಲಿಗಾಗಿ ನಿಂತಿದ್ದಾನೆ. ಹೆಣ್ಣು ಮಗಳೂ ಅಂತ ಲೆಕ್ಕಿಸದೆ ಬಯ್ಯುತ್ತಿದ್ದಾನೆ.

“ಮನೆಯಲ್ಲಿ ಗಂಡಸರಿಲ್ಲದ ಸಮಯದಲ್ಲಿ ಬಂದು ಹೀಗೆಲ್ಲ ಮಾಡಬಹುದೇ ಬುದ್ಧಿ?”

“ಇವತ್ತು ಕೊಟ್ಟಾನು ನಾಳೆ ಕೊಟ್ಟಾನು ಅಂತ ನಾನು ಕಾಯ್ತಾಯಿದ್ದರೆ ನಿನ್ನ ಗಂಡ…” 


ಕೊನೆಯ ದೃಶ್ಯ, ಸಂಭಾಷಣೆ

ಸುಟ್ಟು ಹೋದ ಹಳ್ಳಿ ಮನೆ. ಹಳ್ಳಿ ಜನ ಎಲ್ಲ ಬಂದು ನಿಂತಿದ್ದಾರೆ. ಪೊಲೀಸರು ಬಂದು ಹೋಗುತ್ತಾರೆ. 

“ಬಿಡು ಮಾವ. ತಪ್ಪು ಮಾಡದ ಮನುಷ್ಯಾ ಯಾರಿದ್ದಾನೆ.”

“ನಿನ್ನ ಮನಸ್ಸು ಇಷ್ಟು ವಿಶಾಲ ಆಯಿತು ಅಂತ ತಿಳಿಲಿಲ್ಲ ಕಣೋ”

“ಕೂಡಿ ಬಾಳಿದರೇನೇ ಸ್ವರ್ಗ ಸುಖ.”  


ಶರಪಂಜರ

ಮೊದಲ ದೃಶ್ಯ, ಸಂಭಾಷಣೆ 

ಗಂಡು ಹೆಣ್ಣು ಆಕಸ್ಮಿಕವಾಗಿ ಒಂದೇ ಬಸ್ಸಿನಲ್ಲಿ ಕುಳಿತು ಕೊಡಗಿನಲ್ಲಿ ನೆಡೆಯುವ ಮದುವೆ ಮನೆಗೆ ಆಗಮಿಸುತ್ತಾರೆ.

__________________

ಶುಕ್ರವಾರದ ಸಂಜೆಗೆ ರಸಪ್ರಶ್ನೆ 

-ರವಿ ಗೋಪಾಲರಾವ್ 

1. Cyclones ನ ಕನ್ನಡದಲ್ಲಿ  ಚಂಡಮಾರುತ ಅಂತ ಕರೀತೀವಿ.  ಆದರೆ ಚಂಡಮಾರುತ ಅಂದರೆ ಏನು ಮತ್ತು ಅದು  ಕನ್ನಡಕ್ಕೆ ಬಂದ ಹಿನ್ನೆಲೆಯೇನು? 

2. ದೇವರುಗಳಿಗೆ ಪ್ರಿಯವಾದ ಪಾನೀಯ ಸೋಮ ರಸ ಅಂತ ನಾವೆಲ್ಲಾ ಕೇಳಿದ್ದೇವೆ.  ಸೋಮ ಅಂದರೇನು ಅದರ ಮೂಲ ಹಿನ್ನೆಲೆಯೇನು ?  ಸೋಮ ರಸ ಮಾಡಲು ಬೇಕಾಗುತ್ತಿದ್ದ ಸಾಮಗ್ರಿಗಳೇನು?

2A.  ಸೋಮ ವಿಚಾರಕ್ಕೆ ಸಂಭಂದಿಸಿದಂತೆ, ಶಿವನಿಗೆ ಸೋಮಶೇಖರ ಅಂತ  ಹೆಸರು ಬರಲು ಕಾರಣವೇನು?  

3. ಸೂರ್ಯನನ್ನು ಹೊಗಳಿ ಬರೆದ ಸಂಸ್ಕೃತ ಶ್ಲೋಕಗಳು ನೂರಾರು.  ಆದರೆ ಅದರಲ್ಲಿ  “ಸೂರ್ಯಾಷ್ಠಕ”  ಬಹಳ  ಮುಖ್ಯ. ಸೂರ್ಯಷ್ಟಕಕ್ಕೂ ಕುಷ್ಠ ರೋಗಕ್ಕೂ ಏನು ಸಂಭಂದ? 

4.  ನಮ್ಮಲ್ಲಿ ಕೋಟ್ಯಾನು ಕೋಟಿ ದೇವದೇವತೆಗಳು.  ಆದರೆ ಅವರಲ್ಲಿ ಅತಿ ಹೆಚ್ಚಿನ ಸಂಖ್ಯೆಯ “ತಲೆ” ಇರುವುದು ಯಾರಿಗೆ? 

5. ಮಹಾಭಾರತದಲ್ಲಿ ಶ್ರೀ ಕೃಷ್ಣ ಪಾಂಡವರನ್ನು ಮೊದಲ ಬಾರಿಗೆ ಭೇಟಿಯಾದದ್ದು ಯಾವ ಸನ್ನಿವೇಶದಲ್ಲಿ? 

6. ನೀವು ಹುಟ್ಟಿದ್ದು  ಮತ್ತು ನಿಮ್ಮ  ಅಜ್ಜ ಹುಟ್ಟಿದ್ದು  ಒಂದೇ  ಸಂವತ್ಸರದಲ್ಲಿ.  ನಿಮ್ಮ ತಂದೆ ಮತ್ತು  ನಿಮ್ಮ ಮುತ್ತಜ್ಜ ಹುಟ್ಟಿದ್ದು ನಿಮ್ಮಿಬ್ಬರ ಮಧ್ಯದ ಸಂವತ್ಸರದಲ್ಲಿ.  ಹಾಗಾದರೆ ಈಗ ನಿಮ್ಮ ವಯಸ್ಸೆಷ್ಟು?  ನಿಮ್ಮ ತಂದೆ ವಯಸ್ಸೆಷ್ಟು?  ನಿಮ್ಮ ಅಜ್ಜನ ವಯಸ್ಸೆಷ್ಟು? ನಿಮ್ಮ ಮುತ್ತಜ್ಜನ ವಯಸ್ಸೆಷ್ಟು?  

7.  ತೊದಲು ನುಡಿಯುವುದಕ್ಕೂ ಕನ್ನಡ ಬರವಣಿಗೆಯಲ್ಲಿರುವ ಒತ್ತಕ್ಷರಗಳಿಗೂ ಏನು ಸಂಬಂಧ ಹುಡುಕ ಬಹುದು?  ಉದಾಹರಣೆಗಳೊಂದಿಗೆ ವಿವರಿಸಿ.  


ಉತ್ತರ

1. ವೇದದಲ್ಲಿ ಬರುವ ಇಬ್ಬರು, ಅಷ್ಟೊಂದು ಪ್ರಾಮುಖ್ಯತೆ ಇಲ್ಲದ ದೇವರುಗಳು “ಮಾರುತ “ ಎನ್ನುವವರು  ಇದ್ದಾರೆ. ಈ ಅಣ್ಣ ತಮ್ಮಂದಿರನ್ನು ರುದ್ರನ ಮಕ್ಕಳು ಅಥವಾ ಸಹೋದರರೆಂದು ಪರಿಗಣಿಸುತ್ತಾರೆ. ಈ ಮಾರುತರು ಮೋಡ, ಬಿರುಗಾಳಿ, ಮತ್ತು ಮಳೆ ಬರಿಸುವ  ದೇವತೆಗಳು. ಅವರಿಬ್ಬರೂ ಮಿಂಚಿನ ನಗುವಿನಿಂದ ಹುಟ್ಟಿದವರಂತೆ, ಒಂದೇವಯಸ್ಸಿನವರು ಕೂಡ, ಒಂದೇ ಮನಸ್ಸಿನವರು ಕೂಡ, ಸರಸ ಮತ್ತು ತಮಾಷೆಯಲ್ಲಿ ಕೂಡ ಒಂದಂತೆ ಮತ್ತು ಮಿಂಚಿನಂತೆ ಹೊಳೆಯುವ ರಥದಲ್ಲಿ ಸಂಚರಿಸುತ್ತಾರಂತೆ. ಕೆಲವೊಮ್ಮೆ ಕೇಡಿಗರ ಹಾಗೆ ಕೆಲವೊಮ್ಮೆ ದಯಾಪರರಾಗಿ  ವರ್ತಿಸುತ್ತಾರಂತೆ. ಚಂಡಮಾರುತ ಕನ್ನಡಕ್ಕೆ ಬಂದದ್ದು ಇವರಿಂದ.  

2. ಸೋಮ ಎನ್ನುವುದು ಒಂದು ವ್ಯಾದಿಗಳನ್ನು ಗುಣಪಡಿಸುವ ದೇವರ ಹೆಸರು.  ಸೂರ್ಯ ಮತ್ತು ಆಕಾಶದ ಪುತ್ರನೆಂದೂ, ಇಂದ್ರಲೋಕದ ಗರುಡನೆಂದೂ, ಗಿಡಮೂಲಿಕೆಗಳ ದೇವನೆಂದೂ,  ಕರೆಯುತ್ತಿದ್ದರು. ಸೋಮ ಎಂದರೆ ಕಿವುಚಿ ಮಾಡಿದ  ರಸವೆಂದು ಅರ್ಥ. ಇದು ಬಂದದ್ದು ಒಮ್ಮೆ ಈ ಸೋಮ ದೇವರು ಯಾರಿಗೂ ಗೊತ್ತಿರದ ಒಂದು ಗಿಡವನ್ನು, ಯಾರಿಗೂ ಗೊತ್ತಿರದ ಪರ್ವತದಿಂದ ತಂದು ಇಂದ್ರನಿಗೆ ಕೊಟ್ಟನಂತೆ. ಮತ್ತೇರುವ ಈ ರಸದ ಜೊತೆ ಹಾಲು, ಹುಳಿ ಹಿಂಡಿದಹಾಲು,  ಜೇನುತುಪ್ಪ ಮತ್ತು ಬಾರ್ಲಿ ಅಥವಾ ಯವೆ ಇಂದ ಮಾಡಿದ ನೀರನ್ನು ಬೆರಸಿ ಮಾಡಿದ ಈ ಪಾನೀಯಕ್ಕೆ ಸೋಮ ರಸವೆಂದು  ಕರೆದರು. 

2A. ಈ ಸೋಮ ದೇವ ಹುಟ್ಟಿದ್ದು  ಸೂರ್ಯ ವಂಶದಲ್ಲಾದರೂ ಬರುಬರುತ್ತ ಅವನನ್ನು ಚಂದ್ರ ಬರಿಸುವ ಮತ್ತಿಗೆ ಹೋಲಿಸಿ, ಕೊನೆಗೆ ಅವನನ್ನು ಚಂದ್ರ ವಂಶದವನೆಂದು ಗುರುತಿಸಿದ ಕಾರಣ ಸೋಮ ಮತ್ತು ಚಂದ್ರನಿಗೆ ವ್ಯತ್ಯಾಸ ಕಡಿಮೆ  ಆಯಿತು. ಚಂದ್ರನನ್ನೇ  ಧರಿಸಿದ ಶಿವನಿಗೆ  ಸೋಮಶೇಖರ  ಅಂದರು.

3. ಸೂರ್ಯಾಷ್ಟಕ ಬರೆದವನು ಏಳನೇ ಶತಮಾನದಲ್ಲಿದ್ದ ಸಂಸ್ಕೃತ ಕವಿ ಮಯೂರ  ಎನ್ನುವನು. ಮಯೂರ ಕುಷ್ಠರೋಗದಿಂದ  ಬಳಲುತ್ತಿದ್ದನಂತೆ. ಆದರೆ ಆಗಿನ  ನಂಬಿಕೆಯಂತೆ ಕುಷ್ಠರೋಗ ಸೂರ್ಯ ಮಾನವನಿಗೆ  ಕೊಡುವ  ಶಿಕ್ಷೆಯಂತೆ. ಆದ್ದರಿಂದ ಮಯೂರ ಸೂರ್ಯನ ಮೊರೆ ಹೋದಮೇಲೆ ಅವನಿಗೆ ಕುಷ್ಠ ನಿವಾರಣೆ  ಆಯಿತಂತೆ. ಅದರಿಂದ ಪ್ರಭಾವಿತನಾಗಿ ಈ  ಸೂರ್ಯಾಷ್ಟಕವನ್ನು ಬರೆದನಂತೆ.

4. ಸ್ಕಂದ ಅಥವಾ ಷಣ್ಮುಖ, ಆರು  ತಲೆ.  

5.ಗೊತ್ತಿಲ್ಲ. ಕನ್ಫರ್ಮ್ ಮಾಡಿ ತಿಳಿಸುತ್ತೇನೆ. 

6. ನಿಮಗಿನ್ನೂ ಒಂದು ವರ್ಷ ಆಗಿಲ್ಲ.  ನಿಮ್ಮ ತಂದೆಗೆ ಮೂವತ್ತು ವರ್ಷ.  ನಿಮ್ಮ ಅಜ್ಜನಿಗೆ ಅರವತ್ತು ವರ್ಷ.  ನಿಮ್ಮ ಮುತ್ತಜ್ಜನಿಗೆ ತೊಂಬತ್ತು ವರ್ಷ.  

7. ಕನ್ನಡದ ಬರವಣಿಗೆಯಲ್ಲಿ ಒತ್ತಕ್ಷರಗಳಿಲ್ಲದಿದ್ದರೆ ಬಹುಶಃ ತೊದಲು ನುಡಿದಂತೆ ಬರೆಯಬೇಕಾಗುತ್ತಿತ್ತು.  ಉದಾ: ಕ ನ್ ನ್ ಡ,  ಕನ್ನಡ.  ವಯ ಸ್ ಸ್ ಎ ಶ್ ಟ್ ಟ್ ಉ , ವಯಸ್ಸೆಷ್ಟು 



__________________

ಭರ್ತಿ ಮಾಡಿ  

- ರವಿ ಗೋಪಾಲರಾವ್ 


ಕೆಳಗೆ ಕನ್ನಡದ ಚಲನಚಿತ್ರಗಳ ಹೆಸರನ್ನು  ಭರ್ತಿ ಮಾಡಿ. 37 ಚಿತ್ರಗಳಿದ್ದರೂ ನಿಮಗೆ ಬೇಕಾಗಿರುವುದು ಆರಕ್ಕಿಂತ ಕಡಿಮೆ  ಕನ್ನಡ ಪದಗಳು. ಯಾರು ಕಡಿಮೆ ಪದಗಳಲ್ಲಿ ಎಲ್ಲದಕ್ಕೂ ಉತ್ತರ ಭರ್ತಿ ಮಾಡುತ್ತಾರೋ ಅವರು ಗೆದ್ದಂತೆ.

ನಿಮ್ಮ ಉತ್ತರ ಹೀಗೆ ಬರೆಯಿರಿ:

“ನಾನು ಕೇವಲ ____ ಪದಗಳಲ್ಲಿ ಎಲ್ಲದಕ್ಕೂ ಉತ್ತರ ಹುಡುಕಿದೆ.  ಅವು ಯಾವುವು ಎಂದರೆ ಪದ A=, B=, C=, D=, E= , F=” 

   

1.  ________ ಅಳಿಯ

2.  ________ ಇತಿಹಾಸ

3.  ________ ಕಟ್ಟಿ ನೋಡು 

4.  ________ ಕಣ್ಣು

5.  ________ ಕಾವ್ಯ

6.  ________ ಗುಡಿ

7.  ________ ಗೆದ್ದ ಮಾನವ

8.  ________ ಜೀವ ನಿನಗಾಗಿ

9.  ________ ತೀರ್ಪು

10. ________ ದಾರಿ ತಪ್ಪಿತು

11. ________ ದುಡ್ಡು

12. ________ ದೇವತೆ

13. ________ ದೇವರು

14. ________ ನಾಡಲ್ಲಿ

15. ________ ಪತ್ನಿ

16. ________ ಪೀಠ

17. ________ ಪುರ

18. ________ ಬಂಧನ

19. ________ ಬದುಕು

20. ________ ಬೆಳಕು

21. ________ ಬೆಳಕು 

22. ________ ಬೆಳಗಿದ ಸೊಸೆ

23. ________ ಭೂಮಿ ಆ ಭಾನು 

24. ________ ಮಕ್ಕಳು

25. ________ ಮಗ

26. ________ ಮಗಳು

27. ________ ಮನೆ ಕಥೆ

28. ________ ಮೇಡಂ 

29. ________ ಯುದ್ಧ

30. ________ ಯೋಧರು

31. ________ ವಿಜಯ

32. ________ ಸಂಜೆ

33. ________ ಸಂಭಾಷಣೆ

34. ________ ಸೆರೆ

35. ________ ಹೃದಯ ನಿನಗಾಗಿ 

36. ________ ತುಂಬಾ ಬರಿ ಜಂಬ 

37. ________ ಮಾರಾಟಕ್ಕಿದೆ


ಉತ್ತರ: 

A= ಮನೆ, B= ಹೊಸ, C= ಧರ್ಮ, D= ಈ, E=ದೇವರ

ಕೇವಲ 5 ಪದಗಳು ಸಾಕು  

 

ಉತ್ತರ: 

A= ಮನೆ, B= ಹೊಸ, C= ಧರ್ಮ, D= ಈ, E=ದೇವರ

ಕೇವಲ 5 ಪದಗಳು ಸಾಕು  

 

1. ಮನೆ ಅಳಿಯ

2. ಹೊಸ ಇತಿಹಾಸ

3. ಮನೆ ಕಟ್ಟಿ ನೋಡು 

4. ದೇವರ ಕಣ್ಣು

5. ಹೊಸ ಕಾವ್ಯ

6. ದೇವರ ಗುಡಿ

7. ದೇವರ ಗೆದ್ದ ಮಾನವ

8. ಈ ಜೀವ ನಿನಗಾಗಿ

9. ದೇವರ ತೀರ್ಪು

10. ಧರ್ಮ ದಾರಿ ತಪ್ಪಿತು

11. ದೇವರ ದುಡ್ಡು

12. ಧರ್ಮ ದೇವತೆ

13. ಮನೆ ದೇವರು

14. ದೇವರ ನಾಡಲ್ಲಿ

15. ಧರ್ಮ ಪತ್ನಿ

16. ಧರ್ಮ ಪೀಠ

17. ಧರ್ಮ ಪುರ

18. ಈ ಬಂಧನ

19. ಹೊಸ ಬದುಕು

20. ಮನೆ ಬೆಳಕು

21. ಹೊಸ ಬೆಳಕು 

22. ಮನೆ ಬೆಳಗಿದ ಸೊಸೆ

23. ಈ ಭೂಮಿ ಆ ಭಾನು 

24. ದೇವರ ಮಕ್ಕಳು

25. ದೇವರ ಮಗ

26. ಮನೆ ಮಗಳು

27. ಮನೆ ಮನೆ ಕಥೆ

28. ಹೊಸ ಮೇಡಂ 

29. ಧರ್ಮ ಯುದ್ಧ

30. ಧರ್ಮ ಯೋಧರು

31. ಧರ್ಮ ವಿಜಯ

32. ಈ ಸಂಜೆ

33. ಈ ಸಂಭಾಷಣೆ

34. ಧರ್ಮ ಸೆರೆ

35. ಈ ಹೃದಯ ನಿನಗಾಗಿ 

36. ಮನೆ ತುಂಬಾ ಬರಿ ಜಂಬ 

37. ಮನೆ ಮಾರಾಟಕ್ಕಿದೆ  

__________________

ಶುಕ್ರವಾರದ ಸಂಜೆ ಎರಡು ಪ್ರಶ್ನೆ, ಇಪ್ಪತ್ತು ಉತ್ತರ!

-ರವಿ ಗೋಪಾಲರಾವ್


1. ಇವರೆಲ್ಲರೂ ನಮಗೆ ಚಿರಪರಿಚಿತರು. ಇಬ್ಬಿಬ್ಬರನ್ನು ಜೊತೆ ಗೂಡಿಸಿ ಅವರುಗಳ ಮಧ್ಯೆ ಇರುವ ಸಮಾನ ಅಂಶವನ್ನು ತಿಳಿಸಿ.

ರಾಮ ಶಿವ ಅಗ್ನಿ ಕಾಳಿದಾಸ ಅರ್ಜುನ ಕುಬೇರ ದುರ್ಯೋಧನ ಭೋಜರಾಜ ಹನುಮಂತ ಕೃಷ್ಣ ವಾಯು ಕರ್ಣ 


2. ಇವರೂ ಕೂಡ ಪರಿಚಿತರು.  ಆದರೆ ಕನ್ನಡ ಚಿತ್ರಗಳಿಂದಲೇ ನಮಗೆ ಚಿರಪರಿಚಿತರು.  ಈ ಪರಿಚಿತರ ಹೆಸರಿರುವ ಚಿರಪರಿತ ಕನ್ನಡ ಚಿತ್ರಗಳನ್ನು ತಿಳಿಸಿ. 

a. ಗಂಗೆ, b. ಅರ್ಜುನ, c. ಶ್ರೀಮನ್ನಾರಾಯಣ , d. ಕೃಷ್ಣ, e. ಲಕ್ಷ್ಮಿ, f. ಪ್ರಹಲ್ಲಾದ, g. ಯಮ, h. ಭಗವಂತ, i. ವಿಷ್ಣು, j. ಭೀಮ, k. ಸೀತೆ, l. ಅರುಂಧತಿ, m. ಸಾವಿತ್ರಿ, n. ಶನಿ


1. ಉತ್ತರ

ರಾಮ - ಹನುಮಂತ

ಶಿವ - ಕುಬೇರ

ಅಗ್ನಿ - ವಾಯು 

ಅರ್ಜುನ - ಕೃಷ್ಣ

ದುರ್ಯೋಧನ - ಕರ್ಣ 

ಕಾಳಿದಾಸ - ಭೋಜರಾಜ


ಸಮಾನ ಅಂಶ:  ಈ ಜೋಡಿಗಳು ಆಪ್ತ ಮಿತ್ರರು


2. ಉತ್ತರ

a. ಆಕಾಶ ಗಂಗೆ, ಗಂಗೆ ಬಾರೆ ತುಂಗೆ ಬಾರೆ 

b. ಅರ್ಜುನ 

c.ಅವನೇ ಶ್ರೀಮನ್ನಾರಾಯಣ 

d.ಬೇಡ ಕೃಷ್ಣ ರಂಗಿನಾಟ, ಶ್ರೀ ಕೃಷ್ಣ ಗಾರುಡಿ, ಶ್ರೀ ಕೃಷ್ಣ ರುಕ್ಮಿಣಿ ಸತ್ಯಭಾಮ

e.ಭಾಗ್ಯದ ಲಕ್ಷ್ಮಿಬಾರಮ್ಮ 

f.ಭಕ್ತ ಪ್ರಹಲ್ಲಾದ 

g.ಭೂಲೋಕದಲ್ಲಿ ಯಮರಾಜ 

h.ಭೂಮಿಗೆ  ಬಂದ ಭಗವಂತ

i.ಬ್ರಹ್ಮ ವಿಷ್ಣು ಮಹೇಶ್ವರ 

j.ಕಲಿಯುಗ ಭೀಮ 

k.ಕಲಿಯುಗ ಸೀತೆ 

l.ಮಹಾಸತಿ ಅರುಂಧತಿ

m.ಸೀತೆಯಲ್ಲ ಸಾವಿತ್ರಿ 

n. ಶನಿ ಪ್ರಭಾವ 

__________________

ತಿಮ್ಮನಿಗೆ ಕನ್ನಡ ಹಾಡು ಬರೆಯುವುದನ್ನು ಕಲಿತು ಕೊಳ್ಳಲು ಇಷ್ಟ.  ಆದರೆ ಅವನಿಗೆ ಗೊತ್ತಿರುವ ಪದಗಳು ತೀರಾ ಕಡಿಮೆ. ನೀವಾದರೂ ಈ ಪದಗಳನ್ನು ಉದಾಹರಣೆಗೆ ಬಳಸಿ ಹಾಡುಗಳ ಮೊದಲ ಸಾಲುಗಳನ್ನಾದರೂ ಬರೆದು ಕೊಡಿ. ಅದನ್ನು ನೋಡಿ ಕಲಿತುಕೊಳ್ಳುತ್ತಾನಂತೆ.  

ಯಾರ 

ಮೇಲೆ

ಮನಸಲೂ 

ಬೀಳಲಿ 

ಬಾಳ 

ಹೂವು 

ಯಾವ

ಬಾನಿಗೊಂದು 

ಬಂದು 

ಮುಡಿಗೋ 

ಬಂಗಾರ 

ನೋಡಲಿ 

ನೀನೆ 

ನೀನು 

ನೀ 

ನಿನ್ನನ್ನೇ 

ನಿಂತಾಗ  

ಕನಸಲೂ 

ಆಕಾಶವೇ

ಎಲ್ಲೇ 

ಎಲ್ಲೆಲ್ಲಿ 

ಎಲ್ಲಿದೆ 


ಉತ್ತರ 

ಬಾನಿಗೊಂದು ಎಲ್ಲೇ ಎಲ್ಲಿದೆ 

ಕನಸಲೂ ನೀನೆ ಮನಸಲೂ 

ಎಲ್ಲೆಲ್ಲಿ ನೋಡಲಿ ನಿನ್ನನ್ನೇ 

ಯಾವ ಹೂವು ಯಾರ ಮುಡಿಗೋ 

ನೀ ಬಂದು ನಿಂತಾಗ  

ಬಾಳ ಬಂಗಾರ ನೀನು 

ಆಕಾಶವೇ ಬೀಳಲಿ ಮೇಲೆ



__________________

ಲಕ್ಷ್ಮಿಗೆ ಕನ್ನಡ ಬರೋಲ್ಲ.

-ರವಿ ಗೋಪಾಲರಾವ್  

ಲಕ್ಷ್ಮಿಗೆ ಕನ್ನಡ ಬರೋಲ್ಲ.  ಅವಳ ಈ ಗುಣಗಳನ್ನು ಸಂಸ್ಕೃತದಲ್ಲಿ ಹೇಳಿದಿರೋ ನೀವು, ಖಂಡಿತ ಅವಳ ಕಟಾಕ್ಷಕ್ಕೆ ಪಾತ್ರರಾಗುವಿರಿ.  

1.ಚಂಚಲೆ

2. ಸೂರ್ಯನಂತೆ ತೇಜಸ್ವಿ

3. ಚಿನ್ನದಂತ ಬಣ್ಣದವಳು

4. ಕಮಲದಲ್ಲಿ ನೆಲೆಸಿರುವಳು

5. ನೈರ್ಮಲ್ಯದ ಸಂಕೇತ

6. ಐಶ್ವರ್ಯದ ದೇವತೆ 

7. ಸುಂದರ ಕಣ್ಣುಳ್ಳವಳು

8. ಪಾಪರಹಿತಳು

9. ಸದಾ ಉಲ್ಲಾಸದಿಂದಿರುವಳು

10. ಚಂದ್ರನ ಜೊತೆ ಹುಟ್ಟಿದವಳು

11. ಬಡತನ ಹೋಗಲಾಡಿಸುವಳು

12. ಸಮುದ್ರರಾಜನ ಮೆಚ್ಚಿನ ಮಗಳು

13. ಶ್ರೀ ಹರಿಯ ಹೆಂಡತಿ

14. ಮರಳುಮಾಡುವಳು 

15. ಸಂಜೆ ಹೊತ್ತಿಗೆ ಮನೆಗೆ ಬರುವವಳು 

ರಸಪ್ರಶ್ನೆ 

16.  ಲಕ್ಷ್ಮಿ ವಾಹನ ಯಾವುದು? 

17.  ಲಕ್ಷ್ಮಿ ಯಾವ ಮರದಲ್ಲಿರುತ್ತಾಳೆ?  

18. ಲಕ್ಷ್ಮಿ ಯಾವ ನದಿಯಲ್ಲಿರುತ್ತಾಳೆ? 

19. ಲಕ್ಷ್ಮಿ ಪಾರ್ವತಿಯಂತೆ ಒಬ್ಬ ರಾಕ್ಷಸನನ್ನು ಕೊಂದಳಂತೆ.  ಯಾರದು?

20. ಲಕ್ಷ್ಮಿಗು ಶಬ್ದ ಕ್ಕೂ ಏನು ಸಂಭಂದ? 

ಉತ್ತರ 

1.-ವಿಕೃತಿ

2. -ಭಾಸ್ಕರಿ

3. - ಹಿರಣ್ಮಯಿ

4. -ಪದ್ಮಾಲಯ

5. -ಶುಚಿ 

6. -ಲಕ್ಷ್ಮಿ

7. -ಕಾಮಾಕ್ಷಿ

8. -ಅನಘ

9. -ಸುಪ್ರಸನ್ನೇ

10.  -ಚಂದ್ರಸಹೋದರಿ

11. -ದಾರಿದ್ರನಾಶಿನಿ

12. -ಸಮುದ್ರತನಯೇ

13. -ಹರಿವಲ್ಲಭೆ 

14. ಮೋಹಿನಿ 

15. ಸಂಧ್ಯಾ  

 16. ಹಂಸ 

17. ಬಿಲ್ವ ಮರ 

18.  ಗೋಮತಿ  

19. ಜಂಭಾಸುರ ಎನ್ನುವ ರಾಕ್ಷಸ.  ಇಂದ್ರ ಜಂಭಾಸುರನ ರೂಪ ತಾಳಿದ್ದಂತೆ. 

20.  ಲಕ್ಷ್ಮಿ ಶಬ್ದದ ಆಕೃತಿಯಲ್ಲಿ ಕಾಣಿಸಿಕೊಳ್ಳುತ್ತಾಳಂತೆ.  ಅದರಿಂದಅವಳನ್ನು ನಾದರೂಪಿಣಿ ಎಂದು ಕರೆಯುತ್ತಾರೆ

__________________
ನಿಮ್ಮ ದೇಶ ಭಕ್ತಿಗೊಂದು ರಸಪ್ರಶ್ನೆ.

-ರವಿ ಗೋಪಾಲರಾವ್

*ಎಲ್ಲ ಪ್ರಶ್ನೆಗಳು ಭಾರತದ ಬಾವುಟದ ಬಗ್ಗೆ.*

1.  ಬಾವುಟದ ಉದ್ದಕ್ಕೂ ಅಗಲಕ್ಕೂ ಹೊಂದಿಕೆಯಾಗುವ ಅಳತೆಯ ಪ್ರಮಾಣ ಎಷ್ಟು?

2. ಈಗಿನ ತ್ರಿವರ್ಣಬಾವುಟ ಹಳೆಯದೋ ನಮ್ಮ ಸ್ವಾತಂತ್ರ್ಯ ಹಳೆಯದೋ? 

3. ಕೇಸರಿ ಬಿಳಿಪು ಮತ್ತು ಹಸಿರು ಎಲ್ಲರಿಗು  ಕಾಣುತ್ತೆ. ಆದರೆ ಮಧ್ಯದಲ್ಲಿರುವ ಚಕ್ರ ಯಾವ ಬಣ್ಣದ್ದು ?

4. ಈ ಮಧ್ಯದ ಚಕ್ರ ಯಾವ ರಾಜನದು ಮತ್ತು ಯಾವ ಊರಿನದು?

5. ಸ್ವಾತಂತ್ರ್ಯ ಬಂದ ಮೇಲೆ ಜನವರಿ ೨೬, ೨೦೦೨ ನೇ ದಿನಾಂಕದ ತನಕ ಬಾವುಟ ಉಪಯೋಗಿಸುವ ನಿಯಮದಲ್ಲಿ ಯಾವ ಬದಲಾವಣೆ ಇರಲಿಲ್ಲ.  ಆದರೆ ಅಂದು ಯಾವ ನಿಯಮ ಬದಲಾಯಿತು?

6. “ಸಾಮಾನ್ಯ ಪ್ರಜೆಯೊಬ್ಬ ತನ್ನ ಕಾರಿನ ನೋಂದಣಿ ಫಲಕದ ಮೇಲೆ ಭಾರತದ ಒಂದು ಸಣ್ಣ ಬಾವುಟ ಅಂಟಿಸಿದ್ದ.”  ಅವನು ಕಾನೂನು ಸರಿಯಾಗಿ ಪಾಲಿಸುತ್ತಿದ್ದಾನೆಯೇ? 

7. ಸ್ವಾತಂತ್ರ್ಯ ಬರುವುದಕ್ಕೆ 40 ವರ್ಷಗಳ ಮುಂಚೆಯೇ, ಅಂದರೆ ೧೯೦೭ರಲ್ಲಿ ಕ್ರಾಂತಿಕಾರಿ ಮಹಿಳೆಯೊಬ್ಬಳು ಬಾವುಟದ ಮೊದಲ ರೂಪಾಂತರ ರಚನೆ ಮಾಡಿ ಬಾವುಟವನ್ನು ಹಾರಿಸಿದ್ದಳು. ಆಕೆ ಯಾರು? ಮತ್ತು ಆ ಬಾವುಟದ ವಿಶೇಷ ಏನು?

8. ತ್ರಿವರ್ಣದ ಮುಂಚೆ ಭಾರತದ ಬಾವುಟ ಎರಡೇ ಬಣ್ಣದಾಗಿತ್ತಂತೆ. ಬಿಳಿಯ ಬಣ್ಣ ಸೇರಿಸಲು ಹೇಳಿದವರ್ಯಾರು? ಯಾವಾಗ?

9. ಮಧ್ಯ ಚಕ್ರದ ಪ್ರಾಮುಖ್ಯತೆ ಮತ್ತು ಸಂಕೇತವೇನು?  

10. ಆನಿ ಬೆಸಂಟ್ ಮತ್ತು ಲೋಕಮಾನ್ಯ ತಿಲಕರು 1917ರಲ್ಲೇ ಉಪಯೋಗಿಸಿದ ಬಾವುಟ ನೋಡಲು ಹೀಗಿತ್ತಂತೆ.  ಇಲ್ಲಿ ಕಾಣುವ ನಕ್ಷತ್ರಗಳ  ವಿಶೇಷವೇನು? 

  


ಉತ್ತರ

1. ಎರಡು ಅಗಲಕ್ಕೆ ಮೂರು ಉದ್ದ (೨x ೩)  

2. ತ್ರಿವರ್ಣ ಬಾವುಟ ಹಳೆಯದು.  ಜೂಲೈ 22, 1947 ರಲ್ಲೇ ಈ ತ್ರಿವರ್ಣ ಬಾವುಟವನ್ನು ನ್ಯಾಷನಲ್ ಕಾಂಗ್ರೆಸ್ ಪಾರ್ಟಿ ತಮ್ಮ ಸಂಸ್ಥೆಯ ಬಾವುಟವೆಂದು ತೀರ್ಮಾನಿಸಿ ಸ್ವಾತಂತ್ರ್ಯ ನಂತರ ದೇಶದ ಬಾವುಟವಾಗಿ ಅಳವಡಿಸಿಕೊಂಡರು. 

3. ನೇವಿ ಬ್ಲೂ (ನೇರಿಳೆ ಬಣ್ಣ ಗಾಢ ನೀಲಿ)

4. ಅಶೋಕ ಚಕ್ರವರ್ತಿ.  ಅವನ ರಾಜಧಾನಿಯಾದ ಸಾರಾನಾಥ್ ಊರಿನಲ್ಲಿ ದೊರೆತ ಅಶೋಕ ಸ್ಥಂಭದಿಂದ ಅಳವಡಿಸಿಕೊಂಡಿರುವುದು. 

5. ಅಲ್ಲಿಯವರೆಗೆ ಜನ ಸಾಮಾನ್ಯರು ತಮ್ಮ ಖಾಸಗಿ ಉಪಯೋಗಕ್ಕೆ ಬಾವುಟವನ್ನು ಬಳಸಲು ಅನುಮತಿ ಇರಲಿಲ್ಲ.  ೨೦೦೨ರಲ್ಲಿ ಮನೆಗಳ ಮೇಲೆ ಮತ್ತು ವಾಣಿಜ್ಯ ಕಟ್ಟಡಗಳ ಮೇಲೆ ಬಾವುಟವನ್ನು ಹಾರಿಸಲು ಅನುಮತಿ ನೀಡಲಾಯಿತು. 

6. ಈ ಸಾಮಾನ್ಯ ಪ್ರಜೆ ಕಾನೂನು ಪಾಲಿಸುತ್ತಿಲ್ಲ.  ನಿಯಮದ ಪ್ರಕಾರ ಬಾವುಟವನ್ನು ಯಾವುದೇ ರೂಪಾಂತರದಲ್ಲಿ ಖಾಸಗಿ ವಾಹನಗಳ ಮೇಲೆ ಬಳಸಲು ಅನುಮತಿ ಇಲ್ಲ.  

7. ಬಿಕಲ್ಜಿ ಕಾಮ ಎನ್ನುವ ಕ್ರಾಂತಿಕಾರಿ ಮಹಿಳೆ ಪ್ಯಾರಿಸ್ ನಗರದಲ್ಲಿ ೧೯೦೭ ರಲ್ಲೇ ಬಾವುಟ ಹಾರಿಸಿದ್ದಳು. ಬಾವುಟದ ಮಧ್ಯದಲ್ಲಿ ವಂದೇ ಮಾತರಂ ಎಂದು ಸಂಸ್ಕೃತದಲ್ಲಿ ಬರೆಯಲಾಗಿತ್ತು ಎನ್ನುವುದೇ ವಿಶೇಷ. 

8. 1921 ರಲ್ಲಿ ವಿಜಯವಾಡ ನಗರದಲ್ಲಿ ನೆಡೆದ ಕಾಂಗ್ರೆಸ್ ಅಧಿವೇಶನದಲ್ಲಿ ಒಬ್ಬ ಆಂಧ್ರದ ಹುಡುಗ ಎರಡು ಬಣ್ಣದ ಬಾವುಟ (ಹಸಿರು ಮತ್ತು ಕೆಂಪು) ಮತ್ತು ಗಾಂಧೀ ಚರಕವನ್ನು ಮಧ್ಯದಲ್ಲಿ ರಚಿಸಿ ಗಾಂಧೀಜಿಗೆ ತೋರಿಸಿದನಂತೆ. ಅವರುಬಿಳಿಯ ಬಣ್ಣವನ್ನು ಸೇರಿಸಲು ಆದೇಶಿದರು.

9. ಧರ್ಮದ ಚಕ್ರ ಎಂದು ಅದಕ್ಕೆ ಪ್ರಾಮುಖ್ಯತೆಯಾದರೆ, ನಿರಂತರ ಜೀವನದಲ್ಲಿ ಚಲನೆ ಇದೆ ಎನ್ನುವುದು ಅದರ ಸಂಕೇತ. 

10. ಚಂದ್ರ ನಕ್ಷತ್ರ ಮತ್ತು ಬ್ರಿಟನ್ನಿನ ಯೂನಿಯನ್ ಜ್ಯಾಕ್ ಜೊತೆಗೆ ಸಪ್ತರ್ಷಿ ಮಂಡಲವನ್ನು ಏಳು ನಕ್ಷತ್ರಗಳ ಮೂಲಕ ಆಕಾಶದಲ್ಲಿ ಕಾಣುವ ಮಂಡಲವನ್ನು ಅದೇ ಆಕೃತಿಯನ್ನೇ  ತೋರಿಸಲಾಗಿತ್ತು.


_________________

1. ರಾಜ, ಕಳ್ಳ, ಅಗ್ನಿ, ನೀರು, ಬಂಧು-ಬಾಂಧವರು:  

ಇವುಗಳಲ್ಲಿ ಸಮಾನ ಅಂಶವೇನು


2. ರವಿ, ದಿವಾಕರ, ದಿನಕರ, ಇವೆಲ್ಲವೂ ನಮಗೆ ಸಾಮಾನ್ಯವಾಗಿ ಗೊತ್ತಿರುವ ಸೂರ್ಯನ ಹೆಸರುಗಳು.  ಸೂರ್ಯನ ನೂರಾರು ಬೇರೆ ಹೆಸರುಗಳಲ್ಲಿ ನಿಮಗೆ ಗೊತ್ತಿರುವ 7-10 ಹೆಸರಿಸಿ. 


3. ಮಹಾಭಾರತದಲ್ಲಿ ಪರಿಚಯವಿರುವ ಒಂದು ಸನ್ನಿವೇಶ ಅಕ್ಷಯಪಾತ್ರೆಯಿಂದ ಪಾಂಡವರಿಗೆ ಆಹಾರ ಸಿಗುತ್ತಿತ್ತು ಎನ್ನುವದು.  ಎರಡು ಪ್ರಶ್ನೆಗಳು:  ಒಂದು, ಅಕ್ಷಯಪಾತ್ರೆ ಪಾಂಡವರಿಗೆ ಹೇಗೆ ದೊರಕಿತು? ಎರಡು, ಅಕ್ಷಯಪಾತ್ರೆಯಲ್ಲಿ ಅವರಿಗೆ ಸಿಗುತ್ತಿದ್ದ ನಾಲ್ಕು ವಿಧವಾದ ಆಹಾರಗಳು ಯಾವುವು?  


4.  ರಾಮಾಯಣದಲ್ಲಿ ಬರುವ ಪರ್ಣಕುಟೀರ ಎಲ್ಲರಿಗು ಪರಿಚಯವಿದೆ.  ಅದೇ ರೀತಿ ಮಹಾಭಾರತದಲ್ಲಿ ಪಾಂಡವರು ಹನ್ನೆರಡು ವರ್ಷ ವನವಾಸ ಮಾಡುವಾಗ ಒಂದು ವನದಲ್ಲಿ ಹೆಚ್ಚಿನ ಭಾಗವನ್ನು ಕಳೆಯುತ್ತಾರೆ.  ಆ ವನದ ಹೆಸರೇನು?


5.  ಶ್ರೀರಾಮನ ಅಯೋಧ್ಯೆಯಲ್ಲಿ ಮತ್ತು ಅರಮನೆಯ ಅಂಗಳದಲ್ಲಿ ದೇವಾಲಯಗಳು ಮತ್ತು ಮಂದಿರಗಳು ಇದ್ದವೆಂದು ವಾಲ್ಮೀಕಿ ವರ್ಣಿಸುತ್ತಾನೆ.  ಹಾಗಾದರೆ ಅಯೋಧ್ಯಾವಾಸಿಗಳು ಮತ್ತು ಶ್ರೀರಾಮ ಈ ದೇವಸ್ಥಾನಗಳಲ್ಲಿ ಯಾವ ದೇವರನ್ನು ಪೂಜಿಸುತ್ತಿದ್ದರು?  


6. ಗರುಡವಾಹನ ವಿಷ್ಣುವಿಗೆ ಜಗನ್ನಾಥ, ರಂಗನಾಥ ಅಂತ ಒಂದೇ ಭಾವನೆ ಬರಿಸುವ ಹೆಸರುಗಳಿವೆ.  ಹಾಗಾದರೆ ಜಗನ್ನಾಥನಿಗೂ ರಂಗನಾಥನಿಗೂ ಅರ್ಥದಲ್ಲಿ ಏನು ವ್ಯತ್ಯಾಸ?  


7.  ದೇವರ ಐದು ತಾತ್ವಿಕ ರೂಪಗಳು ಯಾವುವು? ಈ ಪ್ರಶ್ನೆಗೆ ಉದಾಹರಣೆ ಕೊಡತ್ತೇನೆ.  ಶ್ರೀಮನ್ನಾರಾಯಣ, ಕ್ಷೀರಾಬ್ದಿಯಲ್ಲಿ ಶೇಷಶಯನ, ಶ್ರೀ ರಾಮ, ಶ್ರೀರಂಗಂ ಪಟ್ಟಣದ ಶ್ರೀರಂಗ, ಹೃದಯದಿ ನೆಲಸಿರುವ ನಾರಾಯಣ.  ಹಾಗಾದರೆ ವಿಷ್ಣುವಿನ ಐದು ತಾತ್ವಿಕ ರೂಪಗಳು ಯಾವುವು?


8. ಹೊಸ ವರ್ಷದ ಅಥವಾ ಯುಗಾದಿ ಸಮಯದಲ್ಲೋ ಯಾವಾಗಲಾದರೂ ನಾವೆಲ್ಲ “ಚತುರ್ಮಾಸ್ಯ” ಅಂತ ಕೇಳಿರುತ್ತೀವಿ.  ಅಂದರೆ ಒಂದು ವರ್ಷವನ್ನು ತ್ರೈಮಾಸಿಕವಾಗಿ ವಿಭಾಗಿಸಿ ಪ್ರತಿಯೊಂದು ಋತುವಿಗೆ ನಾಲ್ಕು ತಿಂಗಳುಗಳೆಂದು ವರ್ಗಿಕರಿಸುತ್ತಾರೆ.  ಅಂದರೆ ವಸಂತಕಾಲ, ಬೇಸಿಗೆ ಮತ್ತು ಮಳೆ/ಚಳಿಗಾಲವೆಂದು ಮೂರು ಋತುಗಳು ಮಾತ್ರ ಇರುತ್ತವೆ. ಪ್ರತಿಯೊಂದು ಋತುವನ್ನು ಒಂದು ದೇವರಿಗೆ ಮುಡುಪಾಗಿಡುತ್ತಾರೆ.  ಈ ಮೂರು  ದೇವರುಗಳು ಯಾರು?


9.  ದುರ್ಯೋಧನ ಹುಟ್ಟುವ ಸಮಯದಲ್ಲಿ ಒಂದು ಪ್ರಾಣಿಯಂತೆ ಕೆಟ್ಟದಾಗಿ ಕಿರುಚಿಕೊಂಡನಂತೆ.  ಅದು ಯಾವ ಪ್ರಾಣಿ ಮತ್ತು ಅದರ ವಿಶೇಷವೇನು?


10.  ಹಳೆ ಪುಸ್ತಕಗಳನ್ನು ನೀವು ಓದಿದಾಗ ಅದರಲ್ಲಿ ಬಹುಷಃ “ಅದೊಂದು ಮಣ ಭಾರವಿದ್ದ ಅಕ್ಕಿ ಮೂಟೆಯನ್ನು ತನ್ನ ಎತ್ತಿನ ಗಾಡಿಯಲ್ಲಿ ಅನಾಯಾಸವಾಗಿ ಹಾಕಿದನು,” ಅಂತ ಓದಿ ಈ ಮಣ ಅಂದರೆ ಏನು ಅಂತ ಅಚ್ಚರಿಪಟ್ಟಿರಬಹುದು.  ಹಾಗಾದರೆ ಈ ಮಣ ಭಾರ ಈಗಿನ ಅಂದಾಜಿನಲ್ಲಿ ಎಷ್ಟಿದೆ? 



11. ಸುಮಾರು ವರ್ಷಗಳ ಕೆಳಗೆ ಗೌರಿ ಗಣೇಶ ಹಬ್ಬದಲ್ಲಿ ಎರಡು ಗೌರಿಯರ ಹೆಸರು ಕೇಳಿಬರುತ್ತಿತ್ತು.  ಜ್ಯೇಷ್ಠ ಗೌರಿ ಮತ್ತು ಕನಿಷ್ಟ ಗೌರಿ.  ಯಾರಿವರು ಮತ್ತು ಆ ದಿನದ ವಿಶೇಷವೇನು? 

 

12. ಕಳೆದ ವಾರ ಪೃಥ್ವಿ ದಿವಸವನ್ನು ಆಚರಿಸಿದೆವು.  ಭೂಮಿತಾಯಿಯನ್ನು ಪೃಥ್ವಿ ಅಂತ ಕರೆಯಲು ಕಾರಣವನ್ನು ಈಗಿನ ಸ್ತ್ರೀವಾದಿಗಳು ತಿಳಿದುಕೊಂಡರೆ ಖಂಡಿತಾ ಪೃಥ್ವಿಯ ಎಲ್ಲ ಕಡೆ ಆಂದೋಲವನೇ ಶುರು ಮಾಡಬಹದು.  ಕಾರಣವೇನಿರಬಹುದು?  


13.  ದೇವಸ್ಥಾನದ ಅಂಗಳದಲ್ಲಿ ಗರುಡಸ್ಥಂಭ ಸಾಮಾನ್ಯವಾಗಿ ಕಾಣುತ್ತದೆ.  ಆದರೆ ಹಳ್ಳಿಗರಿಗೆ ಮೇಟಿಕಂಬ ಎನ್ನುವ ಮತ್ತೊಂದು ಕಂಬವೇ ಮುಖ್ಯ.  ಹಾಗಾದರೆ ಈ ಮೇಟಿಕಂಬ ಅಂದರೆ ಏನು ಮತ್ತು ಅದರ ವಿಶೇಷವೇನು?


14. ಹಿಂದೂ ಅಥವಾ ಸನಾತನ ಧರ್ಮ ಸಾವಿರಾರು ವರ್ಷ ಹಳೆಯದು.  ಆದರೆ ಹಿಂದುತ್ವ ಎನ್ನುವ ಪದ ತುಂಬಾ ಇತ್ತೀಚಿನದು ಅಂತಲೇ ಹೇಳಬೇಕು.  ಹಾಗಾದರೆ ಹಿಂದುತ್ವ ಎನ್ನುವ ಭಾವನೆಯನ್ನು ಮೊದಲು ಯಾರು ಉಪಯೋಗಿಸಿದರು ಮತ್ತು ಕಾರಣವೇನಿರಬಹುದು?   


15.  ಶಿವ ಪಾರ್ವತಿ ಗಣೇಶ ಮತ್ತು ಸ್ಕಂದ ಒಟ್ಟಿಗೆ ಇರುವ ಚಿತ್ರ ನಮ್ಮ ಕಣ್ಮುಂದೆ ಒಂದು ಆದರ್ಶ ಸಂಸಾರವೇ ಸರಿ.  ಆದರೆ ಭಾರತದ ಒಂದು ಪ್ರಮುಖ ಧಾರ್ಮಿಕಸ್ಥಳದಲ್ಲಿ ಪಾರ್ವತಿ ಶಿವನ ಎದೆಯ ಮೇಲೆ ನಿಂತು ಭಯಂಕರವಾಗಿ ಕಾಣುತ್ತಾಳೆ.  ಆ ಜಾಗ ಯಾವುದು ಮತ್ತು ಅದರ ಹಿನ್ನಲೆ ಏನು?


16.  ಮಹಾಭಾರತ ಓದಿದ ಎಲ್ಲರಿಗು ಯುಧಿಷ್ಠರ, ಭೀಮ, ಅರ್ಜುನ, ನಕುಲ, ಸಹದೇವ ಚಿರಪರಿಚಿತ.  ಅವರ ಮಕ್ಕಳಾದ ಐದು ಜನ ಉಪಪಾಂಡವರ ಹೆಸರೇನು? 

 

17.  ಋಷಿಗಳನ್ನು, ಮುನಿಗಳನ್ನು ಮತ್ತು ಸನ್ಯಾಸಿಗಳನ್ನು ‘ಯಾತ್ರಾಸಾಯಂಗೃಹರು’ ಎಂದು ಕರೆಯುತ್ತಾರಂತೆ.  ಏಕಿರಬಹುದು?


18.  ವಿಷ್ಣುವಿನ ಅವತಾರವಾದ ಪರುಷರಾಮನಿಗೂ ಕರ್ನಾಟಕದ ಕರಾವಳಿ ಪ್ರದೇಶಕ್ಕೂ ಏನಾದರೂ ಸಂಬಂಧವಿದೆಯೇ? 


19.  ಭರತ ಮತ್ತು ಬಾಹುಬಲಿಯ ಕತೆ ಶ್ರವಣಬೆಳಗೊಳದ ಒಂದು ಸುಂದರ ಇತಿಹಾಸ. ನಗ್ನನಾಗಿ ಕದಲದೆ ನಿಂತ ಬಾಹುಬಲಿಯ ಕೈಕಾಲುಗಳಿಗೆ ಸುತ್ತಿಕೊಂಡ ಬಳ್ಳಿಗಳು, ಅವನ ತಪಸ್ಸು ಎಲ್ಲ ಪರಿಚಿತ.  ಆದರೆ ಇದರಲ್ಲಿ ಭರತ ಮತ್ತು ಬಾಹುಬಲಿಯ ಇಬ್ಬರು ತಂಗಿಯರನ್ನು ಅಷ್ಟು ನೆನಯುವುದಿಲ್ಲ.  ಈ ಇಬ್ಬರು ತಂಗಿಯರ ಹೆಸರೇನು ಮತ್ತು  ಇದರಲ್ಲಿ ಅವರ ಪಾತ್ರವೇನು? 


20.  ಮದುರೈ ದೇವಸ್ಥಾನದಲ್ಲಿ ಮೀನಾಕ್ಷಿ ಮತ್ತು ಸೋಮಸುಂದರನನ್ನು ಶಿವ ಮತ್ತು ಪಾರ್ವತಿಯೆಂದು ಆರಾಧಿಸುತ್ತಾರೆ.  ಚೈತ್ರ ಮಾಸದಲ್ಲಿ ಪ್ರತಿವರ್ಷ ಭಕ್ತರು ಅವರಿಬ್ಬರ ಮದುವೆಯನ್ನು ವೈಭವದಿಂದ ಆಚರಿಸುತ್ತಾರೆ.  ಆದರೆ ವಿಷ್ಣುವಿಗೇಕೆ ಕೋಪಬರಬೇಕು? ಪಾಪ ಶಿವ ಭಕ್ತರು ವಿಷ್ಣುವನ್ನು ಹೇಗೆ ಸಂತೈಸುತ್ತಾರೆ ಎನ್ನುವದೇ ನೀವು ಉತ್ತರಿಸಬೇಕಾದ ಪ್ರಶ್ನೆ. 


 

21.  ವಿಜಯನಗರದ ಅರಸು ಮನೆತನ ಅಂದರೆ ನಮಗೆ ಹೆಚ್ಚಾಗಿ ಗೊತ್ತಿರುವುದು ಕೃಷ್ಣ ದೇವರಾಯನ ಹೆಸರು.  ಅಚ್ಯುತ ರಾಯನ ಹೆಸರು ನೀವು ಕೇಳಿಲ್ಲದಿರಬಹುದು.  ಆದರೆ ಅವನು ಚಿನ್ನದ ಮತ್ತು ತಾಮ್ರದ ನಾಣ್ಯಗಳನ್ನು ಮುದ್ರಿಸಿ ಆಗಿನ ಆರ್ಥಿಕ ಆಡಳಿತದಲ್ಲಿ ಹೆಸರುವಾಸಿಯಾಗಿದ್ದ.  ಆ ತಾಮ್ರದ ನಾಣ್ಯಗಳ ಮೇಲೆ ಯಾವ ಪಕ್ಷಿಯನ್ನು ಮುದ್ರಿಸಲಾಗಿತ್ತು ಮತ್ತು ಅದರ ವಿಶೇಷ ಏನು?


22.  ಹೊಯ್ಸಳರ ಕಾಲದಲ್ಲಿ ಕರ್ನಾಟಕದ ಆರ್ಥಿಕ ಸ್ಥಿತಿ ತುಂಬಾ ಸುರಕ್ಷಿತವಾಗಿತ್ತು.  ಆ ಸುಭಿಕ್ಷ ಆರ್ಥಿಕ ಸ್ಥಿತಿಯನ್ನು ನಡೆಸಲು ಆಗಿನ ಅತಿ ಹೆಚ್ಚು ಬೇಡಿಕೆಯಲ್ಲಿದ್ದವರು ವೀರಪಂಚಾಲರು ಮತ್ತು ಬಣಜಿಗರು.  ಯಾರಿವರು ಮತ್ತು ಅವರಿಗೇಕೆ ಸಮಾಜದಲ್ಲಿ ಉನ್ನತ ಸ್ಥಾನ ದೊರಕಿತ್ತು? 


23.  ರಾಮಾಯಣದ ಲಂಕೆಯಲ್ಲಿ ಮತ್ತು ಮಹಾಭಾರತದ ಕುರುಕ್ಷೇತ್ರದಲ್ಲಿ ತುಂಬಾ ಘೋರ ಯುದ್ಧವಾಯಿತು ಅಂತ ಚಿಕ್ಕ ಮಕ್ಕಳಿಗೂ ಗೊತ್ತು.  ಆದರೆ ಈ ಎರಡೂ ಕಾಳಗಗಳಿಗೆ ಇರುವ ಮುಖ್ಯ ವ್ಯತ್ಯಾಸವೇನು?


24, ಹೊಯ್ಸಳ ದೊರೆ ವಿಷ್ಣುವರ್ಧನ ತಾನು ಜೈನ ಮತದಿಂದ ವೈಷ್ಣವ ಮತಕ್ಕೆ ಬದಲಿಸಿಕೊಂಡಾಗ ಅಥವಾ ಯುದ್ಧದಲ್ಲಿ ಗೆದ್ದಾಗ ವಿಜೃಂಭಣೆಯ ದಿನ ತುಲಾಪುರುಷ ಮತ್ತು ಹಿರಣ್ಯಗರ್ಭ ಎನ್ನುವ ಎರಡು ಸಮಾರಂಭ ಏರ್ಪಡಿಸುತ್ತಿದ್ದನಂತೆ,  ಹಾಗಾದರೆ ಈ ತುಲಾಪುರುಷ ಮತ್ತು ಹಿರಣ್ಯಗರ್ಭದ ವಿಶೇಷವೇನು?


25.  ಇವಳು ಕರ್ನಾಟಕದ ಚರಿತ್ರೆಯಲ್ಲೇ ಅತಿ ಸುಂದರ ರಾಣಿ, ನಾಟ್ಯದಲ್ಲಿ, ರಾಜ್ಯನೀತಿಯಲ್ಲಿ ಪರಿಣಿತಳು, ಮಹಾ ದಾನಿ, ದಯಾಪರಳು, ಮತಶ್ರದ್ಧೆಯುಳ್ಳವಳು, ಎಂದೆಲ್ಲ ಹೆಸರುವಾಸಿ.  ಆದರೂ ಕೊನೆಯಲ್ಲಿ ವ್ರತಬದ್ಧಳಾಗಿ ಹಸಿವೆಯಿಂದ ಪ್ರಾಣ ತೊರೆದಳಂತೆ.  ಈ ರಾಣಿ ಯಾರು ಮತ್ತು ಈ ವ್ರತ ಯಾವುದು?


26.  ಬೆಂಗಳೂರು ಈಗಲೂ ಭಾರತದ ಒಂದು ಅತಿ ಸುಂದರ ನಗರ. ಆದರೆ ಹದಿನೆಂಟನೇ ಶತಮಾನದಲ್ಲಿ ಇನ್ನು ಚೆನ್ನಾಗಿತ್ತೋ ಏನೋ.  ಒಂದು ವೇಳೆ ನೀವು ಆ ಕಾಲದಲ್ಲಿ ಬೆಂಗಳೂರಿನಲ್ಲಿ ವಾಸಿಸಬೇಕೆಂದು ಹವಣಿಸಿದ್ದರೆ  ‘ಮನೆವಣ’ ವನ್ನುಕೊಡಬೇಕಿತ್ತಂತೆ.  ಮನೆವಣ ಅಂದರೆ ಏನು ಇದನ್ನು ಯಾರಿಗೆ ಕೊಡಬೇಕಿತ್ತು?


27. ಶಿವನಿಗೆ 64 ರೂಪಗಳಿವೆಯಂತೆ.  ಗಂಗಾಧರ, ಅರ್ಧನಾರೀಶ್ವರ, ನಟರಾಜ, ಇತ್ಯಾದಿ ಎಲ್ಲರಿಗು ಕಣ್ಣುಮುಂದೆ ಬರುವ ರೂಪಗಳು. ನಟರಾಜ ಕಾಲನನ್ನು ತುಳಿದು ನೃತ್ಯ ಮಾಡುತ್ತಿರುವ ಭಂಗಿ, ಕೈಯಲ್ಲಿ ಹಿಡಿದ ಡಮರುಗ ಎಲ್ಲವೂ ಪರಿಚಿತ.  ಈ ಎಲ್ಲ ರೂಪಗಳ ಹಿಂದೆ ಒಂದು ವಿಶೇಷತೆ ಇದೆ ಮತ್ತು ಒಂದಲ್ಲ ಒಂದು ಕತೆಯ ಹಿನ್ನಲೆ ಇರುತ್ತವೆ.  ಹಾಗಾದರೆ ನಿಮಗೆ ಗೊತ್ತಿರುವ ಶಿವನ ಮತ್ತೊಂದು ರೂಪವನ್ನು ಹೆಸರಿಸಿ ಮತ್ತು ಸಂಕ್ಷಿಪ್ತವಾಗಿ ವರ್ಣಿಸಿ.


28.  ನಮಃ ಶಿವಾಯ ಎನ್ನುವುದನ್ನು ಬಿಡಿಸಿ ಹೇಳಿದಾಗ ನ ಮಃ ಶಿ ವಾ ಯ ವಾದ್ದರಿಂದ ಅದನ್ನು ಪಂಚಾಕ್ಷರ ಮಂತ್ರವೆಂದು ಕರೆಯುತ್ತೇವೆ.  ಹಾಗಾದರೆ ಶಿವ ಅಂದರೆ ಏನರ್ಥ ಮತ್ತು ಈ ಪಂಚಾಕ್ಷರ ಮಂತ್ರದ ಒಳಮರ್ಮವೇನು?


29.  ಭೂಮಿ, ನೀರು, ಅಗ್ನಿ, ವಾಯು ಮತ್ತು ಆಕಾಶ ಇವು ಪಂಚಭೂತಗಳು.  ಇವುಗಳ ನೈಜಗುಣಗಳನ್ನು ವರ್ಣಿಸುವಾಗ ಇವುಗಳನ್ನು ಅದೇ ಕ್ರಮದಲ್ಲಿ ಬರೆಯುವ ಪದ್ಧತಿ. ಹಾಗಾದರೆ ಇವುಗಳ ನೈಜಗುಣ ಬೇರೆ ಬೇರೆಯೇ ಇದ್ದರೂ ಅವುಗಳನ್ನು ಒಟ್ಟಾರೆ ಪಂಚಭೂತಗಳೆಂದು ಏಕೆ ಕರೆಯುತ್ತಾರೆ?  ಅವುಗಳ ಮಧ್ಯೆ ಇರುವ ಗುಣ ವಿಶೇಷತೆ ಏನು?    


30.  ನಮ್ಮ ಪುರಾಣಗಳಲ್ಲಿ, ರಾಮಾಯಣ, ಮಹಾಭಾರತಗಳಲ್ಲಿ ಕಾಡು ಮತ್ತು ವನಗಳಿಗೆ ವಿಶೇಷ ಸ್ಥಾನವಿದೆ.  ಜೊತೆಗೆ ದೇವರುಗಳಿಗೂ ಒಂದೊಂದು ವಿಶಿಷ್ಟ ರೀತಿಯ ಕಾಡು ಅಥವಾ ವನಗಳನ್ನು ಜೋಡಿಸಿದ್ದಾರೆ.  ಹಾಗಾದರೆ ಶಿವ, ಕೃಷ್ಣ, ಹನುಮಂತ, ಗಣೇಶ ಮತ್ತು ದೇವಿಗೆ ಯಾವ ಯಾವ ಕಾಡು/ವನಗಳನ್ನು ಹೊಂದಿಸಬಹುದು?


31.  ಉತ್ತರ ಭಾರತದ ಹೋಲಿ ಹಬ್ಬ ಮತ್ತು ದಕ್ಷಿಣ ಭಾರತದ ಹೋಳಿ ಹಬ್ಬದ ಹಿನ್ನಲೆ ತುಂಬಾ ವಿಭಿನ್ನ.  ದಕ್ಷಿಣ ಭಾರತದಲ್ಲಿ ಅದು ಶಿವನನ್ನು ಕೊಂಡಾಡುವ ಕಾಮದಹನ.  ಆದರೆ ಉತ್ತರ ಭಾರತದಲ್ಲಿ ಅದು ಶ್ರೀ ಕೃಷ್ಣನ ರಾಸಲೀಲೆ.  ಅದಕ್ಕೂ ಮುಂಚೆ ಈ ಹಬ್ಬದ ಹಿನ್ನೆಲೆ ಇಡೀ ಭಾರತದಲ್ಲಿ ಬೇರೆಯೇ ಇತ್ತು.  ಅದು ದಕ್ಷಿಣ ಭಾರತದ ಹಬ್ಬವನ್ನು ಹೋಲುತ್ತಿತ್ತು.  ಹಾಗಾದರೆ ಈ ಹೋಲಿ (ಳಿ) ಹಬ್ಬ ಪ್ರಾರಂಭವಾದದ್ದು ಹೇಗೆ?


32.  ಹದಿನಾಲ್ಕು ಲೋಕಗಳಿವೆಯಂತೆ.  ಪಾತಾಳ,  ರಸಾತಳ, ಮಹಾತಳ, ತಳಾತಳ, ಸುತಳ, ಅತಳ ಮುಂತಾದವು. ಆದರೆ ಈ ಆರು ಲೋಕಗಳ ನಡುವೆ ಏನೋ ಒಂದು ಸಾಮಾನ್ಯ ಅಂಶವಿದೆ. ಏನಿರಬಹುದು? 


33.  ಶ್ರವಣ ಬೆಳಗೊಳ ನಮ್ಮ ಕರ್ನಾಟಕದ ಅತಿ ಪ್ರಾಚೀನ ಪಟ್ಟಣಗಳಲ್ಲಿ ಒಂದು.  ಅಲ್ಲಿರುವುದು ಗೊಮ್ಮಟೇಶ್ವರನ ಮೂರ್ತಿ.  ಆದರೆ ಈ ಪಟ್ಟಣಕ್ಕೆ ಶ್ರವಣ ಬೆಳಗೊಳ ಅಂತ ಹೆಸರು ಏಕೆ ಬಂತು?  


34.  ಇಸ್ಲಾಂ ಧರ್ಮ ಶುರು ಆದದ್ದು ಮೊಹಮ್ಮದ್ ಪೈಗಂಬರನ ಅನುಯಾಯಿಗಳಿಂದ ಸುಮಾರು ಆರನೇ ಶತಮಾನದಲ್ಲಿ.  .  ಹದಿನೇಳನೇ ಶತಮಾನದ ಹೊತ್ತಿಗೆ ಮುಸ್ಲಿಂರು ಭಾರತದಲ್ಲಿ ಎಲ್ಲ ಕಡೆ ರಾಜ್ಯಬಾರ ಮಾಡುತ್ತಿದ್ದರು.  ಬಿಜಾಪುರದಲ್ಲೂ ಆದಿಲ್ ಷಾ ದಕ್ಷಿಣ ಭಾರತದ ಅತ್ಯಂತ ಬಲಶಾಲಿ ರಾಜನಾಗಿದ್ದ.  ಆದರೆ ಇಸ್ಲಾಂ ಸ್ಥಾಪಕ ಮೊಹಮದನಿಗೂ ನಮ್ಮ ಬಿಜಾಪುರಕ್ಕೂ ಏನೋ ಒಂದು ಸಂಭಂದವನ್ನು ನಮ್ಮ ಇತಿಹಾಸಕಾರರು ಹೆಣೆದಿದ್ದಾರೆ.  ಅದು ಏನಿರಬಹುದು?


35.  ಹಿಂದೂ ಧರ್ಮದಲ್ಲಿ ಅಗಲಿದ ಪಿತೃಗಳಿಗೆ ಶ್ರಾದ್ಧ ಮಾಡುವುದು ಒಂದು ಕರ್ತ್ಯವ್ಯ.  ಶ್ರಾದ್ಧ ಮಾಡುವ ಪದ್ಧತಿಯಲ್ಲಿ ಮೂರು ಜನ ಬ್ರಾಹ್ಮಣರನ್ನು ಸತ್ಕರಸಿ, ಮಡಿಯಲ್ಲಿ ಬಗೆಬಗೆಯ ಅಡಿಗೆ ಮಾಡಿ ಅವರಿಗೆ ಊಟ ಬಡಿಸುತ್ತಾರೆ. ಹಾಗಿದ್ದಲ್ಲಿ ಮೂರು ಜನ ಬ್ರಾಹ್ಮಣರನ್ನು ಕರೆಯುವುದರ ಕಾರಣ ಏನಿರಬಹುದು?


36.  ಹದಿನಾರನೇ ಶತಮಾನದಲ್ಲಿ ವ್ಯಾಸರಾಯರು ಸೋಸಲೆ ಮಠವನ್ನು ಸ್ಥಾಪಿಸಿದರು.  ಮಾಧ್ವರ ಈ ಸೋಸಲೆ ಮಠ ಇರುವುದು ತಲಕಾಡಿನ ಬಳಿ ಇರುವ ಒಂದು ಪವಿತ್ರ ಕ್ಷೇತ್ರವಾದ ತಿರುಮಕೂಡಲು ಎನ್ನುವ ಹತ್ತಿರದ ಜಾಗದಲ್ಲಿ.  ತಿರುಮಕೂಡಲು ಯಾವ ಕಾರಣಕ್ಕೆ ಪ್ರಖ್ಯಾತಿ ಪಡೆದಿದೆ?  


37.   ಸಾತ್ಯಕಿ, ಕೃಪಾಚಾರ್ಯ, ಕೃತವರ್ಮ, ಪಾಂಡವರು, ಕೃಷ್ಣ, ಮತ್ತು ಅಶ್ವತ್ತಾಮ, ಇವರುಗಳ ಮಧ್ಯೆ ಸಮಾನ ಅಂಶವೇನು?


38,  ನಮ್ಮ ಹಲವಾರು ದೇವಸ್ಥಾನಗಳಲ್ಲಿ ಪಚ್ಛೆ, ಹವಳ, ಚಿನ್ನದ ಕಿರೀಟ, ವಜ್ರದ ಆಭರಣ ಎಲ್ಲವು ಸರ್ವೇಸಾಮಾನ್ಯ. ಮೇಲುಕೋಟೆಯಲ್ಲಿ ವರ್ಷಕ್ಕೊಮ್ಮೆ ವಜ್ರದ ಕಿರೀಟವನ್ನೇ ತಂದು ದೇವರಿಗೆ ಅಲಂಕರಿಸುತ್ತಾರೆ.  ಈ ಕಿರೀಟಕ್ಕೂ ಒಂದು ಪುರಾಣದ ಕತೆಯನ್ನು ಜೋಡಿಸಿದ್ದಾರೆ ನಮ್ಮ ಹಿರಿಯರು.  ಎರಡು ಪ್ರಶ್ನೆಗಳು: ಒಂದು, ಈ ಕಿರೀಟ/ ವಜ್ರದ ಹೆಸರೇನು ಮತ್ತು ಸಂಕ್ಷಿಪ್ತವಾಗಿ ಅದರ ಪುರಾಣವೇನು?  ಎರಡು, ಆ ಕಿರೀಟ ಸಂಜೆಯ ದೀಪಾಲಂಕಾರದ ಬೆಳಕಿನಲ್ಲಿ ಮಾತ್ರ ಭಕ್ತರಿಗೆ ದರ್ಶನ ಸಿಗುತ್ತದೆ.  ಏಕಿರಬಹುದು?    


39. ನೂರಾರು ವರ್ಷಗಳಿಂದಲೂ ಪಶ್ಚಿಮ ಕರಾವಳಿಯ ಬಂದರುಗಳಿಂದ ಅರಬ್ ದೇಶ, ಪರ್ಷಿಯಾ, ಈಜಿಪ್ಟ್, ಗ್ರೀಸ್, ಮುಂತಾದ ದೇಶಗಳಿಗೆ ಭಾರತ ವಾಣಿಜ್ಯದ ಮೂಲಕ ಸಂಭಂದ ಬೆಳೆಸಿಕೊಂಡಿದೆ.  ಆ ದೇಶಗಳಿಂದ ಆಮದು/ ರಫ್ತು ನಡೆಯುವುದರ ಜೊತೆಗೆ ಎರಡೂ ಜನಾಂಗದವರ ಮಧ್ಯೆ ಮದುವೆ ಮತ್ತು ಸಂಬಂಧಗಳು ಮಿಶ್ರಣವಾಗಿದೆ. ಕೇರಳದ ಮಾಪಿಳ್ಳೈ ಜನರನ್ನು ಇಲ್ಲಿ ಹೆಸರಿಸಲೇಬೇಕು.  ಈ ಮಾಪಿಳ್ಳೆ ಜನರು ಯಾರು ಮತ್ತು ಅವರ ಹಿನ್ನೆಲೆಯೇನು?  

 

40.  ರೋಮನ್ ಕಾಲದಲ್ಲೂ ಭಾರತದಿಂದ ರಫ್ತು ಆಗುತ್ತಿದ್ದ ಧಾನ್ಯಗಳಲ್ಲಿ ಅಕ್ಕಿ ಅಥವಾ ಭತ್ತ ಅತಿ ಮುಖ್ಯವಾದದ್ದು.  ದಕ್ಷಿಣ ಭಾರತದಲ್ಲಿ ಮಾತ್ರ ಇದನ್ನು ಬೆಳೆಯುತ್ತಿದ್ದರು.  ಭತ್ತವನ್ನು ಪರಿಷ್ಕರಿಸಿಯೇ ರಫ್ತು ಮಾಡುತ್ತಿದ್ದ ಕಾರಣ ಆಗಲು ತಮಿಳು ನಾಡಿನ ಅಕ್ಕಿಗೆ ತುಂಬಾ ಬೇಡಿಕೆ ಇತ್ತಂತೆ.  ಅಷ್ಟೇ ಅಲ್ಲ ರೋಮನರು ಕೂಡ ಅಕ್ಕಿ ಬಣ್ಣಿಸಲು ತಮಿಳು ಭಾಷೆಗೆ ಹತ್ತಿರವಾದ ಪದವನ್ನು ಉಪಯೋಗಿಸುತ್ತಿದ್ದರಂತೆ.  ಆ ಪದ ಏನಿರಬಹುದು?          

___________________


ಉತ್ತರ  

1. ಇವರೆಲ್ಲರೂ ಧನಾಪಹಾರಿಗಳೆಂದು ಕರೆಯಲ್ಪಡುತ್ತಾರೆ.

2. ಸವಿತಾ, ಭಾನು, ಅಂಶುಮಾಲಿ, ವೃಷಾಕಪಿ, ವಿವಸ್ವಂತ, ಮಿಹಿರ, ಮಾರ್ತಾಂಡ, ಆಕ್ರ, ಶರಣ್ಯ, ದಿನಕೃತ್, ಧಾಮಕೇಶಿ, ವಿರೋಚನ, ತಮೋಘ್ನ, ಹರಿತಾಶ್ವ, ಅಶುಗಾಮೀ, ಸಪ್ತಸಪ್ತಿ.  

3. ಒಂದು, ತದೇಕಚಿತ್ತನಾಗಿ ಸ್ತೋತ್ರ ಮಾಡಿದ ಧರ್ಮರಾಯನ ಭಕ್ತಿಗೆ ಸೂರ್ಯದೇವ ಅವನಿಗೆ ಪ್ರತ್ಯಕ್ಷನಾಗಿ ಅಕ್ಷಯಪಾತ್ರೆಯನ್ನು ಕೊಟ್ಟನು.  ಎರಡು, ಭಕ್ಷ್ಯ, ಭೋಜ್ಯ, ಲೇಹ್ಯ, ಚೋಷ್ಯಗಳು ಎನ್ನುವ ನಾಲ್ಕು ವಿಧವಾದ ಆಹಾರಗಳು ಅಕ್ಷಯವಾಗುತ್ತಿತ್ತು. 

4. ಕಾಮ್ಯಕವನ 

5. ವಿಷ್ಣು 

6. ಎರಡು ಹೆಸರಗಳಲ್ಲೂ ನಾಥ ಅಂದರೆ ಒಡೆಯ ಎಂದು ಅರ್ಥ ಬರುತ್ತದೆ.  ಜಗನ್ನಾಥ ಎಂದರೆ ಜಗದ ಒಡೆಯ ಎಂದು.  ಆದರೆ ರಂಗನಾಥ ಅಂದರೆ, ಇಲ್ಲಿ ಜಗತ್ತನ್ನು ಒಂದು ರಂಗ (ಸ್ಟೇಜ್) ಗೆ ಹೋಲಿಸಲಾಗಿದೆ.  ಜಗವೇ ಒಂದು ರಂಗ ಮಂದಿರ, ಅದಕ್ಕೆ ಒಡೆಯ ರಂಗನಾಥ ಎನ್ನುವ ಅರ್ಥ ಕೊಡುತ್ತದೆ. ದೇವಾಲಯಗಳಲ್ಲಿ ಶೇಷಶಯನ ಭಂಗಿಯಲ್ಲಿ ಮಲಗಿರುವ ವಿಷ್ಣುವಿನ ಗರ್ಭಗುಡಿಗೂ ರಂಗ ಎಂದು  ಕರೆಯುತ್ತಾರೆ. ಶೇಷಶಯನವನ್ನು ಜಗತ್ತಿನ ಚಿಕ್ಕಪ್ರತಿರೂಪವೆಂದು ಹಾಗೆ ಕರೆಯುತ್ತಾರೆ

7. ಪರಾ, ವ್ಯೂಹ, ವಿಭವ, ಅರ್ಚ ಮತ್ತು ಅಂತರ್ಯಾಮಿ.  ಈ ಉದಾಹರಣೆಯಲ್ಲಿ, ವಿಷ್ಣುವಿನ ತಾತ್ವಿಕ ರೂಪ ಪರಾ ಅಂದರೆ ಎಲ್ಲವನ್ನು ಒಳಗೊಂಡವನು ಎಂದಾಗುತ್ತದೆ.   ಕ್ಷೀರಾಬ್ದಿಯಲ್ಲಿ ನಮಗೆ ಕಾಣುವ ಶೇಷಶಯನ ತಾತ್ವಿಕ ರೂಪ ವ್ಯೂಹ.  ಹಾಗೆಯೇ ಶ್ರೀ ರಾಮನ ಅವತಾರದಲ್ಲಿ ಸುಪ್ತ ಶಕ್ತಿ ಹುದುಗಿರುವ ಸಾಮರ್ಥ್ಯವುಳ್ಳವನಾಗಿ ವಿಭವ ಎನ್ನುವ ತಾತ್ವಿಕ ರೂಪವನ್ನು ಪಡೆಯುತ್ತಾನೆ. ಪವಿತ್ರತೆ ಅಥವಾ ಪೂಜನೀಯ ಭಾವದಲ್ಲಿ ಎಲ್ಲಿ ಪೂಜಿಸಲ್ಪಡುತ್ತಾನೋ ಆಗ ಅರ್ಚ ತಾತ್ವಿಕ ರೂಪದಲ್ಲಿ ಗೋಚರಿಸುತ್ತಾನೆ.  ಹೃದಯದಲಿ ನೆಲಸಿ ಅಂತರ್ಯಾಮಿಯಾಗಿ ಕೂಡ ನಾರಾಯಣ ಅರಿವಿಗೆ ಬರುತ್ತಾನೆ.

8. ವಸಂತ ಕಾಲ ವಿಶ್ವದೇವನಿಗೆ, ಬೇಸಿಗೆಯನ್ನು ವರುಣನಿಗೆ ಮತ್ತು ಮಳೆಗಾಲವನ್ನು ಇಂದ್ರನಿಗೆ ಮುಡಿಪಿಡುತ್ತಾರೆ.

9. ದುರ್ಯೋಧನ ಕತ್ತೆಯಂತೆ ಅರಚಿಕೊಂಡನಂತೆ.  ಅದು ಮೂರು ಕಾಲಿನ ಕತ್ತೆ ಎನ್ನುವುದು ಒಂದು ವಿಶೇಷವಾದರೆ, ಆ ಮೂರುಕಾಲಿನ ಕತ್ತೆಯ ಮಗನಂತೆ ದುರ್ಯೋಧನ ಎನ್ನುವುದು ಮತ್ತೊಂದು ವಿಶೇಷ.  ಅದು ಅಲ್ಲದೆ ಆ ಮೂರುಕಾಲಿನ ಕತ್ತೆ ಆ ವರ್ಷದ ಸಂಕೇತವಾಗಿತ್ತಂತೆ. 

10. ಹಳೆಕಾಲದ 40 ಸೇರು ಒಂದು ಮಣ ಆಗುತ್ತದೆ. ಒಂದು ಸೇರು = 0.9 kilogram (kg). ಅಂದರೆ ಒಂದು ಮಣ = 37 ಕಿಲೋಗ್ರಾಮ್ ಆಗುತ್ತದೆ.   ಅಥವಾ 82 ಪೌನ್ಡ.  ನೋಡಿದ್ರ ಆಗಿನ ಕಾಲದವರು ಎಷ್ಟು ಶಕ್ತಿಶಾಲಿಗಳು ಅಂತ.  ಒಬ್ಬರೇ  ಒಂದು ಮಣ ಭಾರ ಎತ್ತುತ್ತಿದ್ದರು!

11. ಗೌರಿ ಹಬ್ಬದ ಒಂದು ಸಂಪ್ರದಾಯದ ಪ್ರಕಾರ ಜ್ಯೇಷ್ಠ ಗೌರಿ ಮತ್ತು ಕನಿಷ್ಠ ಗೌರಿ ಅಕ್ಕತಂಗಿಯರು.  ಹಬ್ಬದ ಹಿಂದಿನ ದಿನ ಮನೆಗೆ ಗೌರಿಯರನ್ನು ತರುತ್ತಾರೆ.  ಕನಿಷ್ಠ ಗೌರಿಯನ್ನು ಮುಂಬಾಗಿಲಿನಿಂದಲೂ ಜೇಷ್ಠ ಗೌರಿಯನ್ನು ಹಿಂಬಾಗಿಲಿನಿಂದಲೂ ತಂದು ಗಣೇಶನ ಅಕ್ಕಪಕ್ಕದಲ್ಲಿ ಕೂರಿಸುತ್ತಾರೆ. 

12. ಪ್ರಿಥು ಎನ್ನುವ ಒಬ್ಬ ಭಾಗವತ ಪುರಾಣದಲ್ಲಿ ಬರುವ ಮಹಾರಾಜ ತನ್ನ ಹೆಸರು ಶಾಶ್ವತವಾಗಿರಲಿ ಎಂದು ಭೂಮಿಯನ್ನು ಪ್ರಿಥ್ವಿ ಎಂದು ನಾಮಕರಣ ಮಾಡಿದನಂತೆ.  ಗಂಡನ ಹೆಸರನ್ನು ತನ್ನ ಹೆಸರಿಗೆ ಸೇರಿಸಿಕೊಳ್ಳುವುದೇ ಇಂದಿನ ಮಹಿಳೆಯರಿಗೆ ಕಷ್ಟ ಇನ್ನು ಪರ ಪುರುಷನ ಹೆಸರನ್ನು ತನ್ನ ಮೇಲೆ ಹೊರಸಿದರೆ ಹೇಗೆ?  ಇನ್ನೊಂದು ಸ್ವಲ್ಪ ಹೆಚ್ಚಿನ ಪುರಾಣ ತಿಳಿಯಬೇಕೆನಿಸಿದರೆ, ಪ್ರಿ ಥು ರಾಜನಿಗೆ ಮುಂಚೆ ವೇನ ಎನ್ನುವ ರಾಜ ಭೂಮಿಯನ್ನು ಸೂರೆ ಹೊಡದಿದ್ದನಂತೆ.  ಅದನ್ನು ತಡೆಗಟ್ಟಲು ರಿಷಿಗಳು ಹುಲ್ಲಿನ ಗರಿಕೆಗಳಿಂದ ಆಯುಧಮಾಡಿ ಅವನನ್ನು ಕೊಂದು ಪ್ರಿಥುವನ್ನು ರಾಜನ್ನಾಗಿ ಮಾಡಿದ್ದರಂತೆ.   

13. ಧಾನ್ಯವನ್ನು ಬೇರ್ಪಡಿಸಲು ಕಣದಲ್ಲಿ ನಡುವೆ ನೆಟ್ಟಿರುವ ಕಂಬವನ್ನು ಮೇಟಿಕಂಬವೆಂದು ಕರೆಯುತ್ತಾರೆ.  ಮೇಟಿಯ ಸುತ್ತಲೂ ಎತ್ತುಗಳು ತಿರುಗುವಂತೆ ಮಾಡಿ ಫಸಲಿನಿಂದ ಧಾನ್ಯವನ್ನು ಬೇರ್ಪಡಿಸುತ್ತಾರೆ.  

14.  ಪಶ್ಚಿಮ ಬಂಗಾಳದ ಬುದ್ದಿಜೀವಿ ಚಂದ್ರನಾಥ್ ಬಾಸು ಎನ್ನುವರು 1894 ರಲ್ಲಿ ಮೊದಲಬಾರಿಗೆ ಹಿಂದುತ್ವ ಎನ್ನುವ ಪದವನ್ನು ಉಪಯೋಗಿಸಿದರು.  ಬಾಲ್ಯವಿವಾಹ, ಸತಿ, ತಂತ್ರ ಮುಂತಾದ ಹಿಂದೂ ಸುಧಾರಣೆಯ ಮುಂಚೂಣಿಯಲ್ಲಿ ಇದ್ದ ಪಶ್ಚಿಮ ಬಂಗಾಳದ ಬುದ್ದಿಜೀವಿಗಳಿಗಳ ವಿರುದ್ಧ ಪ್ರತಿಭಟನೆ ಹೆಚ್ಚಾದಾಗ ಚಂದ್ರನಾಥ್ ಹಿಂದುತ್ವ ಎನ್ನುವುದನ್ನು ಬಳಕೆ ತಂದರು.  

15.  ಪಶ್ಚಿಮ ಬಂಗಾಳದಲ್ಲಿ ಇರುವ ಧಕ್ಷಿಣೇಶ್ವರ ದೇವಸ್ಥಾನ. ರಾಮಕೃಷ್ಣ ಪರಮಹಂಸ, ವಿವೇಕಾನಂದ ಮತ್ತಿತರರೊಡನೆ ಜೊತೆಗೂಡಿರುವ ಈ ದೇವಸ್ಥಾನವನ್ನು ರಾಣಿ ರಶೋಮಣಿ ಎನ್ನುವ ವಿಧವೆ ಕಟ್ಟಿಸಿದ್ದು. ಆಕೆ ಸ್ತ್ರಿವಾದಿ.  ಈ ದೇವಾಲಯದಲ್ಲಿ ಪಾರ್ವತಿಗೆ ತಂತ್ರ ಆರಾಧನಾ ಪದ್ದತಿಯಂತೆ ಪ್ರಾಮುಖ್ಯತೆ ಕೊಟ್ಟು ಶಿವನನ್ನೇ ಅವಳ ಕಾಲ ಕೆಳಗೆ ಬೀಳಿಸಿ ಕಾಳಿ ಎಂದು ಪೂಜಿಸುತ್ತಾರೆ. ರಾಣಿ ರಶೋಮಣಿಯೇ ಆ ಪ್ರತಿಮೆ ಮಾಡಲು ಮುತುವರ್ಜಿವಹಿಸಿದ್ದು  

16.  ಧರ್ಮರಾಯನಿಂದ ಪ್ರತಿವಿಂಧ್ಯನೂ, ಭೀಮನಿಂದ ಸುತಸೋಮನೂ, ಅರ್ಜುನನಿಂದ ಶ್ರುತಕೀರ್ತಿಯೂ, ನಕುಲಂನಿಂದ ಶತಾನೀಕನೂ ಮತ್ತು ಸಹದೇವನಿಂದ ಶ್ರುತಕರ್ಮನೂ ದೌಪದಿಯ ಗರ್ಭದಲ್ಲಿ ಜನಿಸಿದ ಉಪಪಾಂಡವರ ಹೆಸರುಗಳು 

17.  ಸನ್ಯಾಸಿಗಳು ನಿಂತೆಡೆಯಲ್ಲಿ ನಿಲುವುದಿಲ್ಲ.  ಯಾವಾಗಲೂ ಸಂಚಾರಮಾಡುತ್ತಲೇ ಇರುತ್ತಾರೆ.  ಸಾಯಂಕಾಲವಾಗುತ್ತಲೇ ಸಂಚಾರವನ್ನು ನಿಲ್ಲಿಸಿದ ವೇಳೆಗೆ ಊರಾದರು ಸಿಕ್ಕಬಹದು; ಕಾಡಾದರೂ ಸಿಕ್ಕಬಹುದು, ಅದೇ ಅವರ ನಿವಾಸಸ್ಥಾನವಾಗಿರುತ್ತದೆ.  ಇಂತಹವರನ್ನು ಯಾತ್ರಾಸಾಯಂಗೃಹರು ಎಂದು ಕರೆಯುತ್ತಾರೆ.

18.  ಪರುಶುರಾಮ ಅಧರ್ಮಿಷ್ಠ ಕ್ಷತ್ರಿಯರನ್ನು ಕೊಂದು, ತನ್ನ ರಕ್ತಸಿಕ್ತವಾದ ಕೊಡಲಿಯನ್ನು ನಮ್ಮ ಕರ್ನಾಟಕದ ಕರಾವಳಿಯಲ್ಲಿ ಸಮುದ್ರಕ್ಕೆ ಎಸದನೆಂದು ಪ್ರತೀತಿ.  ರಕ್ತವನ್ನು ನೋಡಿ ಅಸಹ್ಯ ಪಟ್ಟ ಸಮುದ್ರ ಭಯದಿಂದ ಹಿಂದಕ್ಕೆ ಸರಿದನಂತೆ.  ಆಗ ಕಡಲ ತೀರ ಬಹಿರಂಗವಾಯಿತಂತೆ.  ಪರುಷರಾಮನಿಗೆ ಕಟ್ಟಿರುವ ದೇವಸ್ಥಾನಗಳನ್ನು ಹೆಚ್ಚಾಗಿ ಕರಾವಳಿಯ ಪ್ರದೇಶಗಳಲ್ಲಿ ಕಾಣಬಹುದು.  

19,  ಬ್ರಹ್ಮೀ ಮತ್ತು ಸುಂದರಿ.  ಸಹೋದರ ನಡುವೆ ಆದ ಕಾಳಗದಲ್ಲಿ ಬಾಹುಬಲಿ ಎಲ್ಲವನ್ನು ತೊರೆದು ನಿಂತಲ್ಲೇ ನಿಂತು  ವರ್ಷಗಟ್ಟಲೆ ತಪಸ್ಸು ಮಾಡಿದರೂ, ಗಿಡಬಳ್ಳಿಗಳು ಸರ್ಪಗಳು ಅವನ ಮೈ ಆವರಿಸಿದರೂ ಅವನಲ್ಲಿದ್ದ ಅಹಂಕಾರ ಅವನನ್ನು ಒಬ್ಬ ಯತಿ ಮತ್ತು ಜ್ಞಾನಿಯಾಗಲು ಬಿಡಲಿಲ್ಲ. ಆಗ ಈ ಬ್ರಹ್ಮೀ ಮತ್ತು ಸುಂದರಿ “ಅಹಂಕಾರದ ಆನೆಯ ಮೇಲಿಂದ ಕೆಳಗಿಳಿ” ಎಂದು ಉಪದೇಶ ಹೇಳಿದ ಮೇಲೆಯೇ ಅವನಿಗೆ ಜ್ಞಾನೋದಯವಾಯಿತಂತೆ. ಎಂತಹ ವಿಪರ್ಯಾಸ ನಾವು ಬಾಹುಬಲಿ ಜ್ಞಾನಿ ಎನಿಸಿಕೊಳ್ಳುವ ಮುಂಚಿನ ದೃಶ್ಯವನ್ನು ಕಲ್ಲಿನಲ್ಲಿ ಕೆತ್ತಿ ನಿಲ್ಲಿಸಿದ್ದೇವೆ ಅಂದು ಕೊಂಡರೆ ಅದನ್ನು ಮಾನಸಿಕವಾಗಿ ದಾಟಲು ಇಬ್ಬರು ಸ್ತ್ರಿಯರ ಸಹಾಯ ದೊರಕಿತಲ್ಲ ಅವನಿಗೆ ಎಂದು ನಾವು ಸಮಾಧಾನ ಪಡಬಹುದು. 

20.  ವಿಷ್ಣು ಈ ಕತೆಯಲ್ಲಿ ಮೀನಾಕ್ಷಿಯ ಅಣ್ಣ.  ಮೀನಾಕ್ಷಿ ಮತ್ತು ಸೋಮಸುಂದರನ ಮದುವೆಗೆ ಅಣ್ಣ ಅಳಗರ್ (ವಿಷ್ಣು) ವೈಗೈ ನದಿಯನ್ನು ದಾಟಿ ಬರುವಾಗ ತುಂಬಾ ನಿಧಾನವಾಗುತ್ತದೆ. ಮದುವೆ ಎಲ್ಲ ಮುಗಿದು ಹೋದದ್ದನ್ನು ಕಂಡು ಕುಪಿತನಾಗಿ ತಾನು ತಂದಿದ್ದ ಉಡುಗೊರೆಯನ್ನು ಕೊಡದೆ ವಾಪಸ್ಸು ಹೊರಟುಹೋಗುತ್ತಾನೆ.  ಶಿವ ಪಾರ್ವತೀ ಉರೂಫ್ ಮೀನಾಕ್ಷಿ ಮತ್ತು ಸೋಮಸುಂದರ ಮತ್ತೆ ವೈಗೈ ನದಿಯವರೆಗೂ ಹೋಗಿ ಅವನನ್ನು ಭೇಟಿಯಾಗಿ ಉಡುಗೊರೆಗಳನ್ನು ಸ್ವೀಕರಿಸುತ್ತಾರೆ.  ಶಿವ ಭಕ್ತರು ಈಗಲೂ ಮೀನಾಕ್ಷಿಯ ಮದುವೆಯ ನಂತರ ವಿಷ್ಣುವಿಗೆ ಸಲಾಮು ಹೊಡೆದು ಬರುತ್ತಾರೆ!  

21,  ಆ ತಾಮ್ರದ ನಾಣ್ಯಗಳ ಮೇಲೆ ಮೊದಲ ಬಾರಿಗೆ ಕರ್ನಾಟಕದಲ್ಲಿ ಹೆಸರುವಾಸಿಯಾದ ಗಂಡುಭೇರುಂಡ ಮುದ್ರಿಸಲಾಗಿತ್ತು.  ಈ ಎರಡು ತಲೆಯ ಗಂಡುಭೇರುಂಡ ತನ್ನ ಕೊಕ್ಕಿನಲ್ಲಿ ಎರಡು ಆನೆಗಳನ್ನು ಕಚ್ಚಿಕೊಂಡು ಹಾರುತ್ತಿದ್ದಂತೆಯೂ ಮತ್ತು ಕಾಲುಗಳಲ್ಲಿ ಹಂದಿ/ ವರಾಹವನ್ನುಹಿಡಿದಂತೆ ಮುದ್ರಿಸಲಾಗಿತ್ತು.  ಮತ್ತೊಂದು ಬದಿಯಲ್ಲಿ ಅವನ ಬಿರುದು “ರಾಯ ಗಜ ಗಂಡುಭೇರುಂಡ” ಎಂದು ಮುದ್ರಿಸಲಾಗಿತ್ತು.    

22.  ಬಡಗಿಗಳು, ಕಮ್ಮಾರರು, ಶಿಲ್ಪಿಗಳು, ಆಭರಣ ಮಾಡುವವರು, ಮತ್ತು ಕುಲುಮೆ ಕೆಲಸಗಾರರನ್ನು ವೀರಪಾಂಚಾಲರು ಎಂದು ಕರೆಯುತ್ತಿದ್ದರು.  ಹೊಯ್ಸಳರ ಕಾಲದಲ್ಲಿ ಕಟ್ಟಿದ ನೂರಾರು ದೇವಸ್ಥಾನಗಳಿಗೆ ಮತ್ತು ಅದನ್ನು ಕಟ್ಟಲು ಬೇಕಾಗುತ್ತಿದ್ದ ಉಪಕರಣಗಳನ್ನು ಮಾಡಲು ಈ ಕೆಲಸಗಾರರಿಗೆ ಅತಿ ಹೆಚ್ಚು ಬೇಡಿಕೆಯಿತ್ತು.  ಹಾಗೆಯೆ, ವಾಣಿಜ್ಯದಲ್ಲಿ ನಿರತರಾದ ಬಣಜಿಗರು  ಅಥವಾ ನಮಗೆಲ್ಲ ಪರಿಚಯವಿರುವ ಶೆಟ್ಟರಿಗೆ ಬೇಡಿಕೆಇತ್ತು.  ಅವರು ಸ್ಥಳೀಯ ಬೇಸಾಯದ ಅಕ್ಕಿ ಬೆಲ್ಲ ಮಾತ್ರವಲ್ಲ, ಹೊರದೇಶಗಳಿಂದ ಆನೆ, ಕುದುರೆ, ಮುತ್ತು ರತ್ನಗಳನ್ನು ಆಮದು/ ರಫ್ತ್ತು ಮಾಡುವುದರಲ್ಲಿ ಎತ್ತಿದ ಕೈ ಆದರಿಂದ ಅವರಿಗೆ ಸಮಾಜದಲ್ಲಿ ಮನ್ನಣೆ ಸಿಗುತ್ತಿತ್ತು.  ಎರಡನೇ ಬಲ್ಲಾಳನ ಕಾಲದಲ್ಲಿ ಕಮ್ಮಟ ಶೆಟ್ಟಿ ಎನ್ನುವ ವ್ಯಾಪಾರಿ ಅರಸನಿಗೆ ಕುದುರೆಗಳನ್ನೂ ಮಾರುತ್ತಿದ್ದನಂತೆ.  

23.  ರಾಮಾಯಣದಲ್ಲಿ ಯುದ್ಧ ರಕ್ಕಸರ ಐಂದ್ರಜಾಲಿಕ ಶಕ್ತಿಯ ಪ್ರದರ್ಶನ ಮತ್ತು ಶಶ್ತ್ರವೇ ಇಲ್ಲದ ಕಪಿಸೈನ್ಯದ ನಡುವೆ ಯಾವ ಯುದ್ಧ ತಂತ್ರಗಳನ್ನು ಬಳಸದೆ ಆಗುವ ಕ್ರಮವಿರದ ಕಾಳಗ.  ಆದರೆ ಕುರುಕ್ಷೇತ್ರದಲ್ಲಿ ಯುದ್ಧದ ತಂತ್ರ ಮತ್ತು ಕೌಶಲವೇ ಬೇರೆಯದು.  ಪ್ರತಿ ದಿನವು ಕೌರವರ ಮತ್ತು ಪಾಂಡವರ ನಡುವೆ ವಿಧವಿಧದ ವ್ಯೂಹಗಳನ್ನು ರಚಿಸಿ ಆ ವ್ಯೂಹಗಳನ್ನು ಬೇಧಿಸಲು ರಥ, ಕಾಲಾಳು, ಕುದುರೆ, ಆನೆ, ಶಸ್ತ್ರಾಸ್ತ್ರಗಳ ಬಳಕೆ ಮಾಡಿ ಗೆಲ್ಲುವ ಯೋಜನೆಯನ್ನು ಮಾಡುತ್ತಿದ್ದರು.

24. ತುಲಾಭಾರದಲ್ಲಿ ಕುಳಿತು ವಿಷ್ಣುವರ್ಧನ ತನ್ನ ತೂಕದಷ್ಟು ಚಿನ್ನವನ್ನು ಅಳೆದು ದಾನ ಮಾಡ್ತಿದ್ದನಂತೆ.  ಅದನ್ನು ತುಲಾಪುರುಷ ಎಂದು ಕರೆದು ಈ ಸಮಾರಂಭ ನಡೆಯುತ್ತಿತ್ತು.  ಹಿರಣ್ಯಗರ್ಭ ಸಮಾರಂಭದಲ್ಲಿ ಹಾಳೆಯಂತೆ ಇರುವ ತೆಳ್ಳೆನೆಯ ಚಿನ್ನದ ದೊಡ್ಡ ಪರದೆಗಳ ಮೇಲೆ ಗೋವಿನ ಆಕೃತಿ ಬಿಡಿಸಿ ಅದರ ಹಿಂದೆ ಕಾಣದೆ ನಿಂತಿರುತ್ತಿದ್ದನಂತೆ ವಿಷ್ಣುವರ್ಧನ. ನಂತರ ಚಿನ್ನದ ಹಾಳೆಗಳನ್ನು ಭೇದಿಸಿ ಹೊರಬಂದು ಅಲ್ಲಿ ನೆರದಿದ್ದ ಬ್ರಾಹ್ಮಣರಿಗೆ ಆ ಚಿನ್ನವನ್ನು ದಾನ ಮಾಡುತ್ತಿದ್ದನಂತೆ.

25.  ಹೊಯ್ಸಳ ದೊರೆ ವಿಷ್ಣುವರ್ಧನನ ಪತ್ನಿ ಶಾಂತಲಾದೇವಿ.  ಈಕೆ ಜೈನ ಮತದವಳು.  ಬಡಬಗ್ಗರಿಗೆ ದಾನ ಮಾಡುವುದರಲ್ಲಿ ಎತ್ತಿದ ಕೈ.  ಕಪ್ಪೆ ಚೆನ್ನಿಗರಾಯನ ದೇವಸ್ಥಾನವನ್ನು ಕಟ್ಟಿಸಿದ ರಾಣಿ.  ಜೈನರ ಮತಶ್ರದ್ಧೆಯ ಪ್ರತೀಕವಾದ ಇಚ್ಚಾಮರಣದಲ್ಲಿ ತನ್ನ ದೇಹವನ್ನಗಲುತ್ತಾಳೆ.  ಆ ವ್ರತವನ್ನು ಸಲ್ಲೇಖನ ವ್ರತ ಎಂದು ಕರೆಯುತ್ತಾರೆ. ಉಪವಾಸ ಮಾಡಿ ದೇಹವನ್ನ ತೊರೆಯಲು ಬೇಲೂರಿನಿಂದ ಶಿವಗಂಗೆಗೆ ಪ್ರಯಾಣ ಮಾಡಿ ಬೆಟ್ಟದ ಮೇಲಿಂದ ಹಾರಿ ಅಸುನೀಗಿದಳು. ಆತ್ಮಹತ್ಯೆಯೋ ಅಥವಾ ಆಕಸ್ಮಿಕವೋ. ಇತಿಹಾಸ ಸ್ಪಷ್ಟ ಪಡಿಸಿಲ್ಲ.  

26. ಮನೆವಣ ಅಂದರೆ ಆಸ್ತಿ ಅಥವಾ ಮನೆಯ ಮೇಲಿನ ತೆರಿಗೆ.  ಮನೆಕಟ್ಟಲು ಮತ್ತು ಕಟ್ಟಿ ವಾಸಿಸಲು ಈ ತೆರಿಗೆಯನ್ನು ಆಗಲು ಕೊಡಬೇಕಿತ್ತು.  ಇದನ್ನು ವಸೂಲಿ ಮಾಡುತ್ತಿದ್ದವರು ಆಗಿನ ಪಟ್ಟಣಶೆಟ್ಟಿ ಅಥವಾ ಪಟ್ಟಣಸ್ವಾಮಿ ಎನ್ನುವ ಒಂದು ವರ್ತಕ ಗುಂಪು..  ಪಟ್ಟಣಶೆಟ್ಟಿ ಸುಂಕ ಅಲ್ಲದೆ ಮನೆವಣ ತೆರಿಗೆಯನ್ನು ವಸೂಲಿ ಮಾಡಲು ಅವರಿಗೆ ನಗರ ಮಹಾಜನ ಸಂಸ್ಥೆ ಆ ಕೆಲಸವನ್ನು ವಹಿಸುತ್ತಿತ್ತು. ಅಂದಹಾಗೆ, ಪಟ್ಟಣಶೆಟ್ಟಿ ಮನೆವಣ ಕೊಡಬೇಕಿರಲಿಲ್ಲ!         

27.  ವೃಷಭಾರೂಡ ಮೂರ್ತಿ, ಚಂದ್ರಶೇಖರ ಮೂರ್ತಿ, ಚಂಡತಾಂಡವ ಮೂರ್ತಿ, ಪಾಶುಪತ ಮೂರ್ತಿ, ಬಿಕ್ಷಾಟನ ಮೂರ್ತಿ, ಯೋಗ ದಕ್ಷಿಣಾ ಮೂರ್ತಿ, ಕ್ಷೇತ್ರಪಾಲ ಮೂರ್ತಿ, ವೀರಭದ್ರ ಮೂರ್ತಿ, ಹೀಗೆ ಹಲವಾರು ರೂಪಗಳಲ್ಲಿ ಕಾಣಿಸಿಕೊಳ್ಳುತ್ತಾನೆ. ಪ್ರತಿಯೊಂದು ರೂಪದಲ್ಲೂ ನಿಲುವು, ಆಯುಧ, ಉಡುಪು, ಎಲ್ಲವು ಬೇರೆಬೇರೆ.  ಉದಾಹರಣೆಗೆ ವೀರಭದ್ರ ಶಿವ ತನ್ನ ಏಳು  ಕೈಗಳಲ್ಲಿ ಬಿಲ್ಲು, ಬಾಣ, ತ್ರಿಶೂಲ ಮತ್ತಿತರ ಆಯುಧಗಳನ್ನು ಮತ್ತು ಎಂಟನೇ ಕೈಯಲ್ಲಿ ಅಗ್ನಿಯನ್ನು ಹಿಡಿದು ನಿಂತಿರುವ ಭಂಗಿ.    

28.  ಶಿವ ಅಂದರೆ ಪವಿತ್ರ ಮತ್ತು ದೋಷರಹಿತವಾದ ನಿರಾಕಾರ ಎಂದರ್ಥ.  ಪಂಚಾಕ್ಷರದಲ್ಲಿ ನಮಃ ಅಂದರೆ ಯಾವುದು ನನ್ನದ್ದಲ್ಲೊವೋ ಅದು ಶಿವಾಯ ಅಂದರೆ ಶಿವನದು ಎಂದರ್ಥ.  ನನ್ನದು ಏನು ಇಲ್ಲ ಎಲ್ಲವು ಶಿವನದೇ, ಆ ಪವಿತ್ರ ಮತ್ತು ದೋಷರಹಿತನದು ಎಂದರ್ಥ. 

29.  ಭೂಮಿ, ನೀರು, ಅಗ್ನಿ, ವಾಯು ಮತ್ತು ಆಕಾಶ ಇವುಗಳು ತಮ್ಮ ನೈಜಗುಣದೊಂದಿಗೆ ಮುಂದಿನ ಭೂತಗಳ ಗುಣವನ್ನೂ ಹೊಂದಿರುತ್ತವೆ.  ಭೂಮಿಯು ಐದು ಗುಣ (ಶಬ್ಧ, ಸ್ಪರ್ಶ, ರೂಪ, ರಸ, ಗಂಧ), ನೀರಿಗೆ ನಾಲ್ಕು ಗುಣ (ಶಬ್ಧ, ಸ್ಪರ್ಶ, ರೂಪ, ರಸ), ಅಗ್ನಿಗೆ ಮೂರು ಗುಣ (ಶಬ್ಧ, ಸ್ಪರ್ಶ, ರೂಪ), ವಾಯುವಿಗೆ ಎರಡು ಗುಣ ( ಶಬ್ದ, ಸ್ಪರ್ಶ) ಮತ್ತು ಆಕಾಶಕ್ಕೆ ಒಂದು ಗುಣ (ಶಬ್ಧ) ಇರುವುದರಿಂದ ಇವುಗಳನ್ನು ಒಟ್ಟಾಗಿ ಪಂಚಭೂತಗಳೆಂದು ಕರೆಯುವರು.

30.  ಶಿವನಿಗೆ ದೇವದಾರು ಮರಗಳ ವನ (ದಾರುಕ ವನ), ಗಣೇಶನಿಗೆ ಕಬ್ಬಿನಜಲ್ಲೆಯ ವನ (ಇಕ್ಷು ವನ), ಹನುಮಂತನಿಗೆ ಬಾಳೆಹಣ್ಣಿನ ವನ (ಕದಳಿ ವನ), ಕೃಷ್ಣನಿಗೆ ತುಳಸಿ ವನ (ವೃಂದ ವನ) ಮತ್ತು ದೇವಿಗೆ ಹುಣಿಸೆಗಿಡದ  ವನ (ಆಮ್ಲಿಕ ವನ)  

31.  ದಕ್ಷಿಣ ಭಾರತದಲ್ಲಿ ಹೋಳಿ ಹಬ್ಬದ ದಿನ ಕಾಮದಹನ ಆಚರಿಸುತ್ತೀವಿ.  ಅಂದರೆ ಇದೊಂದು ಶಿವನ ಮಹಿಮೆಯನ್ನು ಕೊಂಡಾಡುವ ಆಚರಣೆ.  ಆದರೆ ಉತ್ತರ ಭಾರತೀಯರು ಆ ದಿನವನ್ನು ರಂಗು ರಂಗಿನ ಬಣ್ಣದಲ್ಲಿ ಆಟವಾಡಿ ಹೋಲಿ ಹಬ್ಬ ಆಚರಿಸುತ್ತಾರೆ. ಕೃಷ್ಣನ ರಾಸಲೀಲೆಯೇ ಇದಕ್ಕೆ ಹಿನ್ನಲೆ ಅಂತ ಆಗಿಬಿಟ್ಟಿದೆ. ಆದರೆ ಅವರೂ ಕೂಡ ನಮ್ಮಂತೆಯೇ ಮೊದಲು ಕಟ್ಟಿಗೆ, ಮರದಿಮ್ಮಿಗಳನ್ನು ಕೂಡಿಸಿ, ಹೋಲಿಕಾ ಎನ್ನುವ ರಾಕ್ಷಸಿಯನ್ನು ದಹನ ಮಾಡುತ್ತಿದ್ದರು.  ನಿಮಗೆ ನೆನಪಿರುವಂತೆ ಈ ಹೋಲಿಕಾ ರಾಕ್ಷಸಿ ಹಿರಣ್ಯಕಶಿಪುವಿನ ಸೋದರಿ, ಪ್ರಹಲ್ಲಾದನ ಸೋದರತ್ತೆ.  ಅವಳಿಗೆ ಒಂದು ವಿಶಿಷ್ಟ ಶಕ್ತಿಯಿತ್ತು.  ಯಾರನ್ನಾದರೂ ಅವಳು ತಬ್ಬಿ ಹಿಡಿದರೆ ಅವರನ್ನು ತನ್ನ ಬಾಹುಗಳಿಂದ ಸುಟ್ಟುಬಿಡುವ ಶಕ್ತಿ.  ಹಿರಣ್ಯಕಶಿಪು ಪ್ರಹಲ್ಲಾದನನ್ನು ಸುಟ್ಟು ಬಿಡಲು ಅವಳನ್ನು ನೇಮಿಸುತ್ತಾನೆ. ಬಾಲಕ ಪ್ರಹಲ್ಲಾದನನ್ನು ತನ್ನ ತೊಡೆಯಮೇಲೆ ಕುಳ್ಳರಿಸಿಕೊಂಡು ಇನ್ನೇನು ಅವನನ್ನು ತಬ್ಬಿಕೊಳ್ಳುವ ಸಮಯಕ್ಕೆ ಪ್ರಹಲ್ಲಾದ ವಿಷ್ಣುವಿನ ನಾಮ ಸ್ಮರಿಸುತ್ತಾನೆ.  ಆಗ ಹೋಲಿಕಾ ತಾನೇ ಸುಟ್ಟು ಭಸ್ಮವಾಗುತ್ತಾಳೆ.  ವಿಷ್ಣು ತನ್ನ ಭಕ್ತರನ್ನು ಕಾಪಾಡಿದ ದಿನವೆಂದು ಹೋಲಿಕಾ ರಕ್ಕಸಿಯ ಹೆಸರಿನಲ್ಲಿ “ಹೋಲಿ” ಹಬ್ಬವೆಂದು ಆಚರಿಸುತ್ತಾರೆ.  ಕಾಲಾನಂತರ ಅದು ಕೃಷ್ಣನ ರಾಸಲೀಲೆಯಲ್ಲಿ ಪರಿವರ್ತನೆಗೊಂಡಿದೆ.  ಆದರೆ ದಕ್ಷಿಣ ಭಾರತದಲ್ಲಿ ಕಾಮದಹನದ ಹಿನ್ನಲೆ ಸೇರಿಸಿದ್ದರೂ ಅದೇ ದಹನದ ಕತೆ ಪ್ರಾಮುಖ್ಯತೆ ಪಡೆದಿದೆ.

32.  ಈ ಆರು ಲೋಕಗಳ ಒಡೆಯ ಶಿವ ಎನ್ನುವುದೇ ಸಮಾನ ಅಂಶ.  ಪಾತಾಳದಲ್ಲಿ ಶಿವ, ರಸಾತಳದಲ್ಲಿ ಶಂಭು, ಮಹಾತಳದಲ್ಲಿ ಶಂಕರ, ತಳಾತಳದಲ್ಲಿ ನೀಲಕಂಠ, ಸುತಾಳದಲ್ಲಿ ಉಮಾಪತಿ, ಅತಳದಲ್ಲಿ ಮಹಾದೇವನೆಂದು ಶಿವನನ್ನು ಈ ಆರು ಲೋಕಗಳಿಗೆ ಒಡೆಯನನ್ನಾಗಿ ಪೂಜಿಸುವರು. 

33.   ಬೆಳ್ + ಕೊಳ = ಬೆಳಗೊಳ ಆಗಿದೆ.  ಹಳೆಗನ್ನಡದಲ್ಲಿ ಬೆಳ್ ಅಂದರೆ ಬಿಳಿ, ಕೊಳ ಅಂದರೆ ಪುಷ್ಕರಣಿ, ಕಲ್ಯಾಣಿ ಮುಂತಾದ ಅರ್ಥ ಕೊಡುತ್ತದೆ.  ಅಂದರೆ, ಅಲ್ಲೊಂದು ಬಿಳಿಯ ಕೊಳವಿತ್ತು ಎಂದಾಯಿತು.  ಅದನ್ನು ಭೂದೇವಿಮಂಗಳಾದರ್ಷ ಕಲ್ಯಾಣಿ ಎಂದು ಕರೆಯುತ್ತಿದ್ದರು.  ಶ್ರವಣ ಅಂದರೆ ಶ್ರಮಣ ಅಥವಾ ಜೈನ ತಪಸ್ವಿ, ಮುನಿ ಎಂದು ಅರ್ಥ.  ಶ್ರವಣ ಬೆಳಗೊಳ ಅಂದರೆ ಬಿಳಿ ಕೊಳದ ಬಳಿಯಿರುವ ಜೈನ ತಪಸ್ವಿಯ ಜಾಗ ಎಂದಾಯಿತು. ಅದರ ಇನ್ನೊಂದು ಹೆಸರು ಗೊಮ್ಮಟಪುರ.

34. ಬಿಜಾಪುರದ ರಾಜ ಆದಿಲ್ ಷಾ ಹಲವಾರು ಸುಂದರ ಕಟ್ಟಡಗಳನ್ನು ಕಟ್ಟಿಸಿದ್ದ.  ಅದರಲ್ಲಿ ಗೋಲ್ ಗುಂಬಜ್ ಮತ್ತು ಅಸರ್ ಮಹಲ್ ಬಹಳ ಪ್ರಖ್ಯಾತಿ ಪಡೆದಿವೆ.  ಈ ಅಸರ್ ಮಹಲ್ ಒಂದು ನ್ಯಾಯಾಲಯದಂತೆ ಉಪಯೋಗಿಸುತ್ತಿದ್ದ ಕಟ್ಟಡ.  ಈ ಕಟ್ಟಡದಲ್ಲಿ ಇಸ್ಲಾಂ ಸ್ಥಾಪಕ ಮೊಹಮದನ ಗಡ್ಡದ ಎರಡು ಕೂದಲಿನ ಅವಶೇಷಗಳನ್ನು ಸಂಗ್ರಹಿಸಿ ಇಡಲಾಗಿದೆ.  ಅದು ಆದಿಲ್ ಷಾ ನ ಕೈಸೇರಿದ್ದು ಹೇಗೆ ಎನ್ನುವುದನ್ನು ಇತಿಹಾಸಕಾರರು ದಾಖಲಿಸದ್ದಾರೆ,

35.  ಇದು ವಿಷ್ಣುವಿಗೆ ಸಂಬಂಧ ಪಟ್ಟಿದ್ದು.  ವಿಷ್ಣು ಮೂರುಲೋಕಗಳನ್ನು (ಭೂಮ್ಯಾಕಾಶಗಳನ್ನು) ಅಳೆದು ತನ್ನ ಇರುವಿಕೆಯನ್ನು ಸ್ಥಾಪಿಸಿದ್ದಾನೆ.  ಅಂದರೆ ಪರಮಾತ್ಮನ ರೂಪದಲ್ಲಿ ಮೂರುಲೋಕದ ಸಕಲ ಜೀವಿಗಳಲ್ಲಿ ಪ್ರವೇಶಿಸಿದ್ದಾನೆ.  ಆದ್ದರಿಂದ ನಾವು ಮಾಡುವ ಎಲ್ಲ ಆಹಾರ ಸೇವನೆಯು ಅವನಿಗಾಗಿಯೇ. ಈ ಮೂರುಲೋಕದ  ಸಾಂಕೇತಿಕವಾಗಿ ಮೂರು  ಜನ ಬ್ರಾಹ್ಮಣರಿಗೆ ಊಟಹಾಕುವುದು ವಿಷ್ಣುವಿನ ತೃಪ್ತಿಗಾಗಿ.  “ಏಕೋ ವಿಷ್ಣುರ್ ಮಹಾಧ್ಭುತಮ್” ಎಂದು ಹೇಳುತ್ತಾ ಬ್ರಾಹ್ಮಣರಿಗೆ ಭೋಜನ ನೀಡುತ್ತಾರೆ.

36.  ಅಗಸ್ತ್ಯ ಮುನಿ ಮರಳಿನ ಲಿಂಗದ ರೂಪದಲ್ಲಿ ಶಿವನನ್ನು ಪೂಜಿಸಿದ ಜಾಗವಂತೆ ಇದು.  ಅಗಸ್ತೀಶ್ವರ ಮತ್ತು ಹನುಮಂತೇಶ್ವರ ದೇವಸ್ಥಾನಗಳನ್ನು ಕಟ್ಟಿದ್ದಾರೆ.  ಆದರೆ ಅವುಗಳಿಗಿಂತ ತಿರುಮಕೂಡಲಿನಲ್ಲಿ ಕಾವೇರಿ, ಕಪಿಲ ಮತ್ತು ಸ್ಫಟಿಕ ಸರೋವರ ಈ ಮೂರೂ ಇಲ್ಲಿ ಸಂಗಮವಾಗುತ್ತವೆ.  ಸ್ಫಟಿಕ ಸರೋವರ ಎನ್ನುವುದು ಕಾವೇರಿ ನದಿಯ ದಂಡೆಗಳಲ್ಲಿ ಇರುವ ಸರೋವರ.

37.  ಮಹಾಭಾರತದ ಯುದ್ಧ  ಮುಗಿದಮೇಲೆ ಹದಿನೆಂಟು ಅಕ್ಪಹೌವಿಣಿ ಸೈನ್ಯದಲ್ಲಿ ಉಳಿದವರು ಈ ಹತ್ತು ಮಂದಿ ಮಾತ್ರ.  ಪಾಂಡವರ ಕಡೆ ಐವರು ಪಾಂಡವರು, ಕೃಷ್ಣ ಮತ್ತು ಸಾತ್ಯಕಿ.  ಕೌರವರ ಕಡೆ ಅಶ್ವತ್ತಾಮ, ಕೃಪಾಚಾರ್ಯ ಮತ್ತು  ಕೃತವರ್ಮ.

38.  ವೈಯರುಮುಡಿ ಎಂದು ಆ ವಜ್ರ /ಕಿರೀಟದ ಹೆಸರು. ನಾರದರು ಬಲಿ ಚಕ್ರವರ್ತಿಯನ್ನು ವಿಷ್ಣುವಿನ ಕಿರೀಟವನ್ನು ಕೃಷ್ಣನಿಗೆ ತಂದು ಕೊಡಲು ಪ್ರೇರೇಪಿಸುತ್ತಾರೆ.  ಕಿರೀಟವನ್ನು ಕಾಣದ ಗರುಡ ಬಲಿಯನ್ನು ತಡೆದು ಅವನೊಡನೆ ಹೋರಾಡಿ ವಜ್ರವನ್ನು ಪಡೆಯುತ್ತಾನೆ.  ಆದರೆ ಗೋವರ್ಧನಗಿರಿಯ/ ಮೇಲುಕೋಟೆಯ ಮೇಲೆ ಇದ್ದ ಕೃಷ್ಣ ವಿಷ್ಣುವಂತೆ ಕಂಡಾಗ ಅವನಿಗೆ  ಅಲಂಕರಿಸಿಬಿಡುತ್ತಾನೆ.

ಎರಡು: ಈ ಅತ್ಯಮೂಲ್ಯ ಕಿರೀಟದಲ್ಲಿರುವ ವಜ್ರಗಳನ್ನು ಈಗಿನಂತೆ ಅತಿಯಾಗಿ ನಯಗೊಳಿಸದ ಕಾರಣ ಅದು ದಿನದ ಸೂರ್ಯನ ಬೆಳಕಲ್ಲಿ ಅಷ್ಟು ಹೊಳೆಯುವುದಿಲ್ಲ.  ಆದರೆ ಸಂಜೆಯ ದೀಪಾಲಂಕಾರದಲ್ಲಿ ಹೆಚ್ಚು ಹೊಳೆಯುವದರಿಂದ ಭಕ್ತಾದಿಗಳನ್ನು ಹೆಚ್ಚು ಬೆರಗುಗೊಳಿಸುತ್ತದೆ.

39.  ಒಂಬತ್ತನೇ ಶತಮಾನದ ಆರಂಭದಲ್ಲಿ ಅರಬ್ ದೇಶದಿಂದ ಮಲಬಾರ್ ತೀರಕ್ಕೆ ಬರುತ್ತಿದ್ದ ಹಡಗೊಂದು ಅನಾಹುತದಲ್ಲಿ ಸಿಕ್ಕುತ್ತದೆ.  ಕ್ಯಾಲಿಕಟ್ ನ ರಾಜ ಪೆರುಮಾಳ್ ಅವರಿಗೆ ಸಹಾಯ ಮಾಡಿ ಆ ಅರಬ್ ಮುಸ್ಲಿಮರಿಗೆ ತನ್ನ ನಾಡಿನಲ್ಲೇ ನೆಲೆನಿಲ್ಲಲು ಅವಕಾಶ ಮಾಡಿಕೊಡುತ್ತಾನೆ.  ಜೊತೆಗೆ ತಾನು ಇಸ್ಲಾಮ್ ಧರ್ಮಕ್ಕೆ ಬದಲಾಗಿ ಮೆಕ್ಕಾ ಗೆ ಕೂಡ ಹೋಗುತ್ತಾನೆ.  ಅವನ ಮುಂದಿನ ರಾಜರು ಅರಬರಿಗೆ ಮಸೀದಿ ಕಟ್ಟುವುದಕ್ಕೆ ಮತ್ತು ಅವರದೇ ನ್ಯಾಯ ನೀತಿಗಳನ್ನು ಪಾಲಿಸುವುದಕ್ಕೆ ಅನುವುಮಾಡಿಕೊಡುತ್ತಾರೆ.  ಕೇರಳದಲ್ಲೇ ನೆಲಸಿ ವಾಣಿಜ್ಯ ಮುಂದುವರೆಸಿದ ಈ ತಲತಲಾಂತರದ ಅರಬ್ಬರನ್ನು ಮಾಪಿಳ್ಳೈ ಎಂದು ಕರೆಯುತ್ತಾರೆ. 

40.  ತಮಿಳಿನಲ್ಲಿ ಪಾಲಿಶ್ ಮಾಡಿದ ಭತ್ತ ಅಥವಾ ಅಕ್ಕಿಗೆ ಅರಿಶೀ ಎನ್ನುತ್ತಾರೆ.  ಲ್ಯಾಟಿನ್ ಭಾಷೆಯಲ್ಲಿ ಅದನ್ನು oruza ಎಂದು ಕರೆಯುತ್ತಿದ್ದರು.  ರೋಮನ್ನರು ಭಾರತಕ್ಕೂ ಅಕ್ಕಿಗೂ ಭಾಂಧವ್ಯ ತೋರುತ್ತಿದ್ದರಂತೆ.  ಮುಂದೆ ಅದು ಇಟಾಲಿಯನ್ ನಲ್ಲಿ ರಿಸೋ ಆಗಿ ನಂತರ ಇಂಗ್ಲಿಷ್ನಲ್ಲಿ ರೈಸ್ ಆಯಿತು.           

_________________


೧.  ಗಂಗೆಗೆ ನೂರಾರು ಹೆಸರುಗಳು.  ಆದರೆ ಒಬ್ಬ ಋಷಿಯಿಂದ ಅವಳಿಗೆ ಬಂದ ಹೆಸರೇನು ಮತ್ತು ಅದರ ವಿಶೇಷವೇನು?

೨.  ಸಾವಿರಾರು ವರ್ಷಗಳ ಇತಿಹಾಸ ಮತ್ತು ಹಿಂದೂ ಸಂಸ್ಕೃತಿಯ ಪ್ರತೀಕವಾಗಿರುವ ಗಂಗೆಗೆ ಮೂರೂ ವರ್ಷಗಳ ಹಿಂದೆ ಉತ್ತರಖಂಡ ರಾಜ್ಯ ಕಾನೂನಿನ ದೃಷ್ಟಿಯಿಂದ ಒಂದು ಹೊಸ ಬಿರುದನ್ನು ಕೊಟ್ಟಿತು.  ಅದು ಏನು ಮತ್ತು ಅದರ ಪ್ರಾಮುಖ್ಯತೆ ಏನು?

೩.  ಗಂಗೆಗೆ ಹತ್ತಾರು ಉಪನದಿಗಳಿವೆ.  ಮೂರು ಉಪನದಿಗಳು ಸೇರುವ ಸ್ಥಳ ಪವಿತ್ರವೆನಿಸಿದೆ.  ಈ ಮೂರು ನದಿಗಳು ಯಾವುವು ಮತ್ತು ಎಲ್ಲಿ ಸೇರುತ್ತವೆ. 

೪.  ಗಂಗೆಯಲ್ಲಿ ಮೀನು, ಮೊಸಳೆ ಎಲ್ಲ ಇವೆ.  ಆದರೆ ಭಾರತದಲ್ಲಿ ಮತ್ತೆಲ್ಲೂ ಸಿಗದ/ ಕಾಣದ ಒಂದು ವಿಶೇಷವಾದ ಜಲಚರಪ್ರಾಣಿ ಯಾವುದು?  

೫.  ಭಗೀರಥ ಪ್ರಯತ್ನದಿಂದ ಧರೆಗಿಳಿದ ಗಂಗೆಗೆ ಭಗೀರತಿ ಎಂದು ಹೆಸರು. ಶಿವನ ಜಟೆಯೊಳಗೆ ಹರಿಯುವ ಮುನ್ನ ಗಂಗೆ ಧರೆಗೆ ಇಳಿದ ಜಾಗ ಯಾವುದು ಮತ್ತು ಯಾವ ರೂಪದಲ್ಲಿ ಕಾಣಿಸಿಕೊಳ್ಳುತ್ತಾಳೆ?   

ಉತ್ತರ:

೧.  ಜಾಹ್ನವಿ.  ಗಂಗೆ ರಭಸದಿಂದ ಪಾತಾಳದ ಕಡೆ ಹರಿಯುವಾಗ ಅರಿಯದೆ ಒಂದು ಋಷಿಯ ಆಶ್ರಮವನ್ನು ಕೊಚ್ಚಿಕೊಂಡುಹೋಗುತ್ತದೆ.  ಜಾಹ್ನ ಎನ್ನುವ ಆ ಋಷಿ ಕೋಪಗೊಂಡು ಗಂಗೆಯನ್ನು ಸಂಪೂರ್ಣ ಕುಡಿದುಬಿಡುತ್ತಾನೆ. ಆದರೆ ಕೊನೆಗೆ ಶಾಂತನಾಗಿ ತನ್ನ ಕಿವಿಯಿಂದ ಗಂಗೆಯನ್ನು ಮತ್ತೆ ಹರಿಯಲು ಬಿಡುತ್ತಾನೆ.  ಮತ್ತೆ ಜನ್ಮತಾಳಿದ ಗಂಗೆಗೆ ಜಾಹ್ನವಿ ಎಂದು ಕರೆಯುತ್ತಾರೆ. 

೨.  ಗಂಗೆಯನ್ನು ಮೊದಲ ಬಾರಿಗೆ “ಜೀವಂತ ಘಟಕ” living entity ಎಂದು ಕರೆದು, ಎಲ್ಲ ಮನುಷ್ಯರಂತೆ ಅವಳಿಗೂ ಕಾನೂನಿನ ಪ್ರಕಾರ ರಕ್ಷಣೆ ಕೊಟ್ಟಿದೆ.  ಅಂದರೆ ನದಿ ಜೀವಂತ ಘಟಕವಾದ್ದರಿಂದ ಅದನ್ನು ಮಲಿನಗೊಳಿಸುವುದು ಅಪರಾಧವು ಹೌದು ಮತ್ತು ಕಾನೂನಿನ ರಕ್ಷಣೆ ಸಿಗುತ್ತದೆ. 

೩.  ಪ್ರಯಾಗ್ ನಲ್ಲಿ ಗಂಗೆ, ಯಮುನೆ ಮತ್ತು ಅಲಕನಂದಾ ನದಿಗಳು ಸೇರುವ ಸಂಗಮ ಪವಿತ್ರವಾಗಿದೆ.

೪.  ಸಿಹಿನೀರಿನ ನದಿಯಲ್ಲಿ ಮತ್ತೆಲ್ಲೂ ಕಾಣದ ಡಾಲ್ಫಿನ್ ಗಂಗೆಯಲ್ಲಿ ಸಿಗುತ್ತದೆ. 

೫.  ೧೩ ಸಾವಿರ ಅಡಿ ಎತ್ತರದ ಗಂಗೋತ್ರಿಯಲ್ಲಿ ಗೌಮುಖ್ ಎನ್ನುವ ದೊಡ್ಡ ಪರ್ವತದ ಮೇಲೆ ಹಿಮ ರೂಪದಲ್ಲಿ ಗಂಗೆ ಮೊದಲು ಧರೆಗಿಳಿದಳು.


______________________

ನರಸಿಂಹ ಜಯಂತಿಯ ಪ್ರಯುಕ್ತ ರಸ ಪ್ರಶ್ನೆ:


೧.  ಹಿರಣ್ಯಕಶಿಪುವನ್ನು ಸಂಹರಿಸಲು ವಿಷ್ಣು ನರಸಿಂಹ ಅವತಾರ ತಾಳಿದ ಮತ್ತು ಬಾಲಕ ಪ್ರಹಲ್ಲಾದನನ್ನು ಉಳಿಸಿದ.  ನರಸಿಂಹಾವತಾರದ ಸಂಕ್ಷಿಪ ಕತೆ.  ಆದರೆ ಈ ಕತೆಯಲ್ಲಿ ಪ್ರಹಲ್ಲಾದನ ಅಜ್ಜ, ಅಜ್ಜಿ, ದೊಡ್ಡಪ್ಪ, ಅಮ್ಮ ಮತ್ತು ಅವನ ಸೋದರತ್ತೆಯ ಹೆಸರುಗಳನ್ನು ಮರೆತುಬಿಡುತ್ತೀವಿ.  ನಿಮಗೆ ಗೊತ್ತಿದೆಯೇ ಅವರುಗಳು ಯಾರೆಂದು ಮತ್ತು ಅವರ ಸಂಕ್ಷಿಪ್ತ ಪಾತ್ರವೇನು ಈ ನರಸಿಂಹಾವತಾರದಲ್ಲಿ?


೨.  ವಿಷ್ಣುವಿನ ಮಿಕ್ಕೆಲ್ಲ ಅವತಾರಗಳ ಜಯಂತಿಯಲ್ಲಿ ಉಪವಾಸ ಮಾಡಿ ಎಂದು ನಮ್ಮ ನಿಮ್ಮ ಪುರೋಹಿತರು ಹೇಳಿದ್ದನ್ನು ನಾನು ಕೇಳಿಲ್ಲ.  ಆದರೆ ನರಸಿಂಹ ಜಯಂತಿಯ ದಿನ ಉಪವಾಸ ಮಾಡಿದವರಿಗೆ ಖಂಡಿತ ಸ್ವರ್ಗವಂತೆ.  ಏಕೆ ಈ ಭೇದ ಎಂದು ನಿಮಗೆ ಗೊತ್ತೇ?  


೩.  ನಮ್ಮ ಎಲ್ಲ ಪುರಾಣಕತೆಗಳಲ್ಲಿ ನಾರದರು ಸ್ವಲ್ಪ ಕಿತಾಪತಿ ಮಾಡುವುದೇ ಹೆಚ್ಚು.  ಅದೇ ರೀತಿ ಇಂದ್ರ ಸ್ವಲ್ಪ ಪರಸ್ತ್ರಿಯರನ್ನು ಕಂಡರೆ ಅಲವರಿಸಿಕೊಳ್ಳುವುದು ಜಾಸ್ತಿ.  ನಾರದರು ಮತ್ತು ಇಂದ್ರ ನರಸಿಂಹಾವತಾರದಲ್ಲಿ ಪಾತ್ರಧಾರಿಗಳು ಅಂತ ನಿಮಗೆ ಮರೆತು ಹೋಗಿದ್ದರೆ, ನೀವು ಪ್ರಹಲ್ಲಾದನ ಭಕ್ತಿಯನ್ನು ಮರೆತಂತೆ.  ಏಕಿರಬಹುದು?


೪.  ಶಿವನಿಗೆ ಹೋಲಿಸಿದರೆ ವಿಷ್ಣು ಪ್ರಜ್ಞಾಪೂರಕವಾಗಿ ಒಳ್ಳೋಳ್ಳೆಯ ಉಡುಗೆತೊಡುಗೆಗಳನ್ನು, ಆಭರಣಗಳನ್ನು ಧರಿಸುತ್ತಿದ್ದ. ಬಹಳ ಫ್ಯಾಶನ್ ಕಾನ್ಷಿಯಸ್.  ಪಾಪ, ನರಸಿಂಹಾವತಾರದಲ್ಲಿ ಅದಕ್ಕೆ ಅವಕಾಶ ಸಿಗಲಿಲ್ಲ.  ಆದರೆ ಉಗ್ರನರಸಿಂಹನಾದರೂ ಶಿವನ ಸ್ಟೈಲ್ ಸ್ವಲ್ಪ ಕಾಪಿ ಹೊಡೆದಿದ್ದ.  ಏನಿರಬಹುದು?


೫. ಉಗ್ರನರಸಿಂಹನಿಗೆ ಉಗ್ರ ಕೋಪ.  ಹಿರಣ್ಯಕಶಿಪನನ್ನು ಬಗೆದು ಕೊಂದ ಮೇಲು ಅವನ ಕೋಪ ಕಡಿಮೆ ಆಗಲಿಲ್ಲವಂತೆ.  ಈ ಡ್ರಾಮ ೯೬ ನಿಮಿಷಕ್ಕಿಂತ ಸ್ವಲ್ಪ ಓವರ್ ಟೈಮ್ ನಡೀತಂತೆ.  ಲಕ್ಷ್ಮಿ, ಶಿವ, ಬ್ರಹ್ಮ ಎಲ್ಲರೂ ಅವನ ಕೋಪ ಕಡಿಮೆ ಮಾಡಲು ವಿಫಲರಾದರು.  ಕೊನೆಗೆ ಯಾರು ಅವನ ಕೋಪವನ್ನು ಶಮನ ಮಾಡಿದ್ದು? ಶಾಂತನಾದ ವಿಷ್ಣು ನೀಡಿದ ವರವಾದರೂ ಏನು?


ಉತ್ತರ:

ನರಸಿಂಹಾವತಾರದ ಪ್ರಶ್ನೆಗಳಿಗೆ ಉತ್ತರಗಳು:


೧.  ಅಜ್ಜ = ಕಶ್ಯಪ, ಅಜ್ಜಿ = ದಿತಿ, ದೊಡ್ಡಪ್ಪ = ಹಿರಣ್ಯಾಕ್ಷ, ಅಮ್ಮ = ಕಯಾದು,  ಸೋದರತ್ತೆ = ಹೋಲಿಕ. ಅಣ್ಣನಾದ ಹಿರಣ್ಯಾಕ್ಷನನ್ನು ವಿಷ್ಣು ಸಂಹರಿಸಿದ ಕಾರಣ ಹಿರಣ್ಯಕಶಿಪು ಸೇಡುತೀರಿಸಿಕೊಳ್ಳಲು ತಪಸ್ಸು ಮಾಡಿ ವರ ಪಡೆಯುತ್ತಾನೆ. ಸೋದರತ್ತೆ ಹೋಕಿಲಾಳ ಆಲಿಂಗನದಿಂದಲೂ ಪ್ರಹಲ್ಲಾದನನ್ನು ಸುಟ್ಟುಬಿಡುವ ಪ್ರಯತ್ನದಲ್ಲಿ ಹಿರಣ್ಯಕಶಿಪು ಸಫಲನಾಗುತ್ತಾನೆ.     

೨.  ನರಸಿಂಹಾವತಾರ ಆದದ್ದು ಏಕಾದಶಿಯಂದು.  ಏಕಾದಶಿಯ ಆಚರಣೆಯಂತೆ ಅಂದು ಉಪವಾಸ ಆಚರಣೆ.  ಎಲ್ಲ ತೊಂದರೆಗಳು ನಿವಾರಣೆ ಆಗುತ್ತದೆ ಅಂದು ಭರವಸೆ.  

೩.  ಹಿರಣ್ಯಕಶಿಪು ಇಲ್ಲದ ಸಮಯದಲ್ಲಿ ಇಂದ್ರಗರ್ಭವತಿಯಾಗಿದ್ದ ಪ್ರಹಲ್ಲಾದನ ತಾಯಿ ಕದಯೂವನ್ನು ಅಪಹರಿಸಿ ಇಂದ್ರಲೋಕಕ್ಕೆ ಕರೆತಂದನಂತೆ.  ಆಗ ನಾರದರು ಅವನಿಗೆ ನೀನು ಮಾಡಿದ್ದು ತಪ್ಪೆಂದು ಬುದ್ಧಿವಾದ ಹೇಳುತ್ತಾರೆ. ಜೊತೆಗೆ ಕದಯು ಗರ್ಭದಲ್ಲಿದ್ದ ಪ್ರಹಲ್ಲಾದನಿಗೆ ನಾರದರು ಹರಿನಾಮ ಉಪದೇಶಿಸಿ ಹರಿಯ ಭಕ್ತನನ್ನಾಗಿ ಮಾಡುತ್ತಾರೆ.

೪.  ಶಿವನಂತೆಯೇ ಜಟಾಧಾರಿಯಾಗಿ ವಿಷ್ಣು ತನ್ನ ಕೂದಲನ್ನು ಕಟ್ಟಿದ್ದನಂತೆ ನರಸಿಂಹಾವತಾರದಲ್ಲಿ.

೫.  ಕೊನೆಗೆ ಪ್ರಹಲ್ಲಾದನೆ ನರಸಿಂಹನ ಕೋಪವನ್ನು ಶಮನಗೊಳಿಸಿದನೆಂದು ಹೇಳುತ್ತಾರೆ.  ತನ್ನ ತಂದೆ ಹಿರಣ್ಯಕಶಿಪುವಿನ ತಪ್ಪುಗಳನ್ನೆಲ್ಲವನ್ನು ಮನ್ನಿಸುವಂತೆಯೂ, ತಾನು ಸದಾ ಹರಿ ಸ್ಮರಣೆಯಲ್ಲಿ ಇರುವಂತೆಯೂ ಮತ್ತು ತನಗೆ ಆಸೆಗಳು ಬರದಂತೆ  ವರಕೊಡಲು ಕೇಳುತ್ತಾನೆ ಪ್ರಹಲ್ಲಾದ.  .


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ