ಗುರುವಾರ, ಮಾರ್ಚ್ 8, 2018

ಸಪ್ತಪದಿ

ಸಪ್ತಪದಿ

ಬಾಳ ಸಂಗಾತಿ ಸ್ನೇಹದಲಿ
ನಡೆವೆನೆಂದೆ ನಾ  
ದೈಹಿಕ ಮಾನಸಿಕ ಆಧ್ಯಾತ್ಮದಲಿ
ಜೊತೆ ನೀಡುವೆನೆಂದೆ ನೀ  
ಜ್ಞಾನದಲಿ ಸೌಖ್ಯದಲಿ ಸಮರಸದಲಿ
ನೀಸಮಾನಳೆಂದೆ ನಾ
ದೈವಾನುಗ್ರಹ ಸದಾಯಿರಲಿ
ಎಂದು ಹಾರೈಸುವೆನೆಂದೆ ನೀ
ಆರ್ಥಿಕ ಅಭ್ಯುದಯದಲಿ
ದುಡಿವೆನೆಂದೆ ನಾ
ಧೀರ್ಘಾಯುಷ್ಯದಲಿ
ಜೊತೆಗೂಡಿ ಬಾಳ್ವೆನೆಂದೆ ನೀ  
ಎಲ್ಲ ಕನಸುಗಳ ಐಕ್ಯದಲಿ
ಪೂರೈಸುವೆನೆಂದೆ ನಾ

ಏಳುಬೀಳುಗಳ ಜೀವನದಲಿ
ಅಂತರಾರ್ಥ ಹುಡುಕಿದೆ ನೀ
ಸಪ್ತಪದಿಯ ಅಂತರ್ವಾಣಿಯ
ಹೇಳುವೆ ನಾ  
ಸಪ್ತಲೋಕಗಳಲೂ
ನೀ ಎನಗೆ ನಾ ನಿನಗೆ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ