ನಿಜ ಜೀವನ್ದಾಗ ಸಂಧ್ಯಾರಾಗ
ಛಲೋ ಇದಿರೇನ್ರಿ ಪಾಟೀಲ್ ಸಾಹೇಬ್ರ?
ಛಲೋ ಇದೀನ್ರೀ. ನಿಮ್ಮನ್ ಭೇಟಿಯಾಗ್ ಒಂದ್ ಸಂವತ್ಸರ ಆದಂಗ್ ಅನಿಸ್ತದ. ನೀವ್ ಮಸ್ತ್ ಇದಿರೇನ್ರಿ? ಅಂತ ಶುರುವಾತ್ರಿ ನಮ್ಮ್ ಆದಿನದ್ ಸಂಭಾಷಣೆ. ಶಬೊ ಕಾಲೇಜಿನ್ಯಾಗ ಕನ್ನಡೋತ್ಸವ ನಡಿತಿತ್ರಿ ಆ ದಿನ. ಜನಜಂಗುಳಿ ಹೊರಾಂಗಣದ್ಯಾಗ್ ಕುಳಿತು ಕಂಸಾಳೆ, ಫ್ಯಾಶನ್ ಷೋ ಎಲ್ಲ ನೋಡಿದ್ಮ್ಯಾಗ ಸೂರ್ಯ ಮುಳುಗಲಿಕ್ ಹೊತ್ತಾಯ್ತ್ರಿ. ಹೊರಾಂಗಣ ಖಾಲಿಯಾತ್ರ. ಪಾಟೀಲ್ರು ಮತ್ತ್ ನಾ ಹಾಂಗಾ ಮೆಟ್ಟಲುಮ್ಯಾಗ್ ಕುಳಿತ್ ದೇಶಾವರಿ ಮಾತ್ಕತೆ ಆಡ್ಲಿಕ್ ಹತ್ತೀವ್ರಿ. ಸದಾ ಹಾಡೋದು ಇಲ್ಲಂದ್ರ ಗುಣಿಗುಕೊಳ್ಳುದು ಪಾಟೀಲ್ ಸಾಹೇಬ್ರಗೆ ಒಂದು ಖಯಾಲಿ. ಅಲ್ರಿ ನೀವ್ ಅಷ್ಟ್ ಚಲೋ ಹಿಂದುಸ್ತಾನಿ ಹಾಡ್ ಹೇಳ್ತಿರಿ, ಈಗ ಹಂಗ ಒಂದು ಹೇಳ್ರಲ ಅಂತ ನಾ ಒತ್ತಾಯಿಸಿದೆ.
ನೀವ ಕೇಳ್ರ ಪಾಟೀಲ್ರ ಧ್ವನಿಯಾಗ ಅದೆಷ್ಟ್ ಮಾದುರ್ಯ ಅದಾಂತ.
ಸೂರ್ಯಾಸ್ತಮದ ಸುಮಧರ ಗೀತಾನ ಅವರು ಭೀಮ್ ಸೇನ್ ಜೋಶಿಯವರ ಹಂಗ ಹಾಡೋದ್ನ ಕೇಳ್ತಾ ನನ್ನ ಮನಸ್ನಾಗ ಹಳೀ ಲೋಕಕ್ಕ ಕರೆದೊಯಿತ್ರಿ. ನಂಗ್ ಆಗ ೮ ವರ್ಷ ಕೂಡ ಇಲ್ರಿ. ಹಾಸನದ್ದಾಗ ಮೊದಲಬಾರಿ ಬೀಮ್ ಸೇನ್ ಜೋಶಿಯವರ ಸಂಗೀತ್ ಕಚೇರಿಗೆ ನಮ್ಮ್ ಅಪ್ಪನ್ ಕೂಡೆ ಹೋಗಿದ್ದೆ. ಆಗಿನ್ನೂ ಸಂಧ್ಯಾರಾಗ ಅನ್ನೋ ಕನ್ನಡ ಪಿಕ್ಚರ್ನಾಗ ಭೀಮ್ ಸೇನ್ರು ಹಿಂದುಸ್ತಾನಿ ಹಾಡೊಂದನ್ನ ಹಾಡಿದ್ರಿ. ಆ ಕಚೇರಿಯಾಗ ಮಂದಿಯೆಲ್ಲ ನೀವ್ ಸಂಧ್ಯಾರಾಗಾದ್ ಹಾಡ್ ಹೇಳ್ರಲ ಅಂತ ಶಿಳ್ಳೆ ಹೊಡುದ್ ಕೇಳ್ಕೊಂಡ್ಡದ್ ನೆಪೈತ್ರಿ. ಅಂದ್ ಭೀಮ್ ಸೇನ್ರು ಹಾಡಿದ್ದ್ ಹಾಡ ಕೂಡ ಇದೇನ್ರಿ. ನಾ ಅದೆಷ್ಟ್ ಬಾರಿ ಭೀಮ್ ಸೇನ್ರ ಸಂಗೀತ ಕ್ಯಾಸಟ್ನಾಗ ಇಲ್ಲ ಸಿಡಿಯಾಗ ಕೇಳಿನ್ರಿ ಅದ್ರ ಮತ್ತ್ ನಂಗ ಜೀವನ್ ಭರ್ತಿ ಭೀಮ್ ಸೇನ್ರ ಕಛೇರಿಗ್ ಹೋಗ್ಲಿಕ್ ಅವಕಾಶ್ ಸಿಗ್ಲಿಲ್ರಿಯಪ್ಪ. ಅದೊಂದ್ ಆಸಿ ಈಡೇರದ್ ಕನಸನ್ಹ್ಯಾಂಗ ಉಳಿದ್ಇತ್ರಿ. ಅದ್ರ ಪಾಟೀಲ್ರ ಸಂಗೀತ ಆಲಿಸಿ ನಿಜ ಜೀವನ್ದಾಗ ಸಂಧ್ಯಾರಾಗ ಕೇಳ್ದಷ್ಟ ಕುಶಿಯಾತ್ರಿ. ಸಂಧ್ಯಾಕಾಲದಾಗ ಗೆಳಯರ ಸಂಘದಾಗ ಸಂಧ್ಯಾ ರಾಗ ಕೇಳ್ಲಿಕ್ಕ ಪುಣ್ಯ ಮಾಡಿನ್ರಿ ನಾ!
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ