ಅಕ್ಕ-೨೦೧೪ರ ಸಮಾರಂಭದ ಫೋಟೋ ಆಲ್ಬಮ್
ಎಷ್ಟೋ ತಿಂಗಳುಗಳಿಂದ ಪ್ರಶ್ನೆ ಒಂದು ಕಾಡುತ್ತಿತ್ತು: ೨೦೧೪ರಲ್ಲಿ ಸ್ಯಾನ್ ಹೋಸೆಯಲ್ಲಿ ನೆಡೆದ ಅಕ್ಕ ಸಮಾರಂಭದಲ್ಲಿ ನಾನು ತೆಗೆದ ನೂರಾರು ಫೋಟೋಗಳನ್ನು ಒಂದು ಆಲ್ಬಮ್ ಮಾಡಿ ಪುಸ್ತಕದಂತೆ ಏಕೆ ಪ್ರಕಟಿಸಬಾರದು ಅಂತ. ಈಗಾಗಲೇ ಸ್ವರ್ಣಸೇತು ಮತ್ತು ಇತರ ಪುಸ್ತಕಗಳ ಜೊತೆಗೆ ಅಕ್ಕ ಪ್ರಕಣೆಗಳಾದ ‘ಕಥಾಸಂಭ್ರಮ’ ಮತ್ತು ‘ಹರಟೆಕಟ್ಟೆ’ ಪುಸ್ತಕಗಳನ್ನು ಗೂಗಲ್ನಲ್ಲಿ / ಇಂಟರ್ನೆಟ್ನಲ್ಲಿ ನಾನಾಗಲೇ ಪ್ರಕಾಶನ ಮಾಡಿದ್ದೆ. ಅದೇ ಹುಮ್ಮಸ್ಸಿನಿಂದ ಅಕ್ಕ ಸಮಾರಂಭದ ಫೋಟೋ ಆಲ್ಬಮ್ ತಯಾರಿಸಲು ಹೋದಾಗ ನೂರೆಂಟು ತಾಂತ್ರಿಕ ಅಡಚಣೆಗಳೇ ಇರುತ್ತಿದ್ದರಿಂದ ಅದನ್ನು ಪ್ರಕಾಶನ ಮಾಡಲು ಆಗಿರಲಿಲ್ಲ.
ಸಾಕಷ್ಟು ಪರಿಶ್ರಮದಿಂದ ಫೋಟೋಗಳನ್ನು PDF formatಗೆ ಬದಲಾಯಿಸಿ ಒಂದು ಪುಸ್ತಕ ರೂಪದಲ್ಲಿ ಹೊರತಂದಿದ್ದೇನೆ. ಹಿಂದಿನಂತೆಯೇ ನನ್ನ ಎಲ್ಲ ಗೂಗಲ್ ಪ್ಲೇ ಪುಸ್ತಕಗಳನ್ನು ನೀವು ಉಚಿತವಾಗಿ ಕೊಳ್ಳಬಹುದು. ನಿಮ್ಮ ಕ್ರೆಡಿಟ್ ಕಾರ್ಡ್ಗೆ $೦.೦೦ ಚಾರ್ಜ್ ಆಗುತ್ತದೆ ಅಷ್ಟೆ. ಆಲ್ಬಮ್ ನೋಡಿ ನಿಮ್ಮ ಅಭಿಪ್ರಾಯ ತಿಳಿಸಿ. ಕೆಳಗಿರುವ ಪುಸ್ತಕದ ಕೊಂಡಿ ಕ್ಲಿಕ್ ಮಾಡಿ. ಅಕ್ಕ-೨೦೧೪, ಫೋಟೋ ಆಲ್ಬಮ್
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ