ಪ್ರೀತಿ ಮತ್ತು ಸತ್ಯ
ಪ್ರೀತಿಯೂ ಸತ್ಯದಂತೆ
ಅರ್ಧ ಸತ್ಯವಿರಲಸಾಧ್ಯ
ಸತ್ಯವೂ ಪ್ರೀತಿಯಂತೆ
ಅರ್ಧ ಪ್ರೀತಿಯಿರಲಸಾಧ್ಯ
ಈರ್ವರು ನುಡಿದ ಸುಳ್ಳು
ಒಂದು ಸತ್ಯವಾದೀತೆ
ಈರ್ವರೊಳು ಉದಿಸಿದ ಪ್ರೀತಿ
ಒಂದು ಪ್ರೀತಿಯಾದೀತೆ
ಸತತ ನುಡಿದರೆ ಸತ್ಯ
ಪ್ರಮಾಣೀಕರಿಸುವುದೆ ಮಿಥ್ಯ
ಅನವರತ ಹಂಚಿಕೊಂಡರೆ ಪ್ರೀತಿ
ತೋರಿಕೆ ಬೇಕೆ ನಿತ್ಯ
ಸತ್ಯವನು ಕಣ್ಣಾರೆ ಕಂಡವನುಂಟೆ
ಪ್ರೀತಿಯನು ಜಗದಲಿ ಕಾಣದವನುಂಟೆ
ಸತ್ಯವನು ಪಾಲಿಸದ, ಪ್ರೀತಿ ಗಳಿಸದ
ಸ್ವಾರ್ಥಪರ ಜೀವಕೆ ಉಳಿವುಂಟೆ
ಪ್ರೀತಿಯೇ ಅಭೇಧ್ಯವೆಂದರಿಯದೆ
ಅಭೇಧ್ಯವೇ ಸತ್ಯವೆಂದರಿಯೆ
ವರ್ಣಾತೀತ ಪ್ರೀತಿಯೆಂದರಿಯದೆ
ಕಾಲಾತೀತ ಸತ್ಯವೆಂದರಿಯೆ, ಮನುಜ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ