ಬಾನಿಗೊಂದು ಎಲ್ಲೆ ಎಲ್ಲಿದೆ?
ಕೀ ಬೋರ್ಡ್ನಲ್ಲಿ ಹಳೆ ಕನ್ನಡ ಮತ್ತು ಹಿಂದಿ ಚಿತ್ರಗೀತೆಗಳನ್ನು ಬಾರಿಸುವುದು ನನಗೊಂದು ಹವ್ಯಾಸ. ಯಾರಿಗೂ ಕೇಳಿಸದಂತೆ ಹಾಡುವ bath room singers ರೀತಿಯಲ್ಲಿ ನಾನೂ ಕೂಡ ಕೀ ಬೋರ್ಡ್ ಬಾರಿಸಿಕೊಳ್ಳುತ್ತೇನೆಯೇ ಹೊರತು ಎಲ್ಲರ ಮುಂದೆ ಬಾರಿಸುವುದಿಲ್ಲ. ಕರಗತವಾದ ಹಾಡುಗಳು ನೂರಾರು. ಆದರೂ ಎಷ್ಟೋ ಬಾರಿ ತಿಂಗಳುಗಟ್ಟಲೆ ಕೆಲವೊಮ್ಮೆ ವರ್ಷಗಟ್ಟಲೆ ಕೀ ಬೋರ್ಡ್ ಬಾರಿಸದೆ ಮರೆತು ಹೋದ ಹಾಡುಗಳೇ ಹೆಚ್ಚು. ಯಾವಾಗಲಾದರೂ ಒಮ್ಮೊಮ್ಮೆ ಯಾವ ನುಡಿಯನ್ನು ತಪ್ಪದೆ ಬಾರಿಸಿಕೊಂಡಾಗ ಮತ್ತೊಮ್ಮೆ ನಾನೇ ಕೇಳಿಸಿ ಕೊಳ್ಳಲು ಅದನ್ನು ರೆಕಾರ್ಡ್ ಮಾಡಬಹುದಿತ್ತಲ್ಲ ಎಂದು ಅನಿಸಿದರೂ ಅದೇಕೋ ಸೋಮಾರಿತನವೇ ಗೆದ್ದು ಎಂದೂ ರೆಕಾರ್ಡ್ ಮಾಡಿರಲಿಲ್ಲ. ಕೆಲವು ತಿಂಗಳುಗಳ ಹಿಂದೆ ಯಾರು ಮನೆಯಲ್ಲಿಲ್ಲದಿದ್ದಾಗ ಒಂದು ಬಾರಿ ಐಫೋನಿನಲ್ಲಿ ರೆಕಾರ್ಡ್ ಮಾಡಲು ಹೋಗಿ ಎಷ್ಟು ಬಾರಿ ಡಿಲೀಟ್ ಬಟ್ಟನ್ ಒತ್ತಿದ್ದೇನೆಯೋ ಗೊತ್ತಿಲ್ಲ. ಅಷ್ಟು ಬಾರಿಯೂ ಸರಿಯಿಲ್ಲ ಅನಿಸಿ ಅಲ್ಲಿಗೆ ಮುಕ್ತಾಯ ಹೇಳಿದ್ದೆ. ಆದರೆ ಒಂದೇ ಒಂದು ರೆಕಾರ್ಡಿಂಗ್ ಹಾಗೆ ಉಳಿದಿತ್ತು. ನೆನ್ನೆ ಅದೇನೋ ಹುಡುಕುತ್ತಿರುವಾಗ ಅದು ನನ್ನ ಗೂಗಲ್ ಡ್ರೈವ್ನಲ್ಲಿ ಅವಿತು ಕೊಂಡಿರುವುದು ಅರಿವಾಯಿತು. ಹಾಗೆ ಕೇಳಿಸಿಕೊಂಡೆ. ಪರವಾಗಿಲ್ಲ ಅನಿಸಿತು. ಹಾಗಾದರೆ ಇದನ್ನು ನನ್ನ ಬ್ಲಾಗ್ನಲ್ಲಿ ಯಾಕೆ ಅಪ್ಲೋಡ್ ಮಾಡಬಾರದು ಎಂದು ಅನಿಸಿತು. ತಾಂತ್ರಿಕ ತೊಂದರೆಗಳೇ ಕಾಣಿಸಿಕೊಂಡವು. ಏಕೆಂದರೆ ಬ್ಲಾಗ್ನಲ್ಲಿ ನಾವು ವಿಡಿಯೋ ಅಥವಾ ಫೋಟೋಗಳನ್ನು ಕಷ್ಟವಿಲ್ಲದೆ ಅಪ್ಲೋಡ್ ಮಾಡಬಹುದು. ಆದರೆ audio ಅಪ್ಲೋಡ್ ಮಾಡಲು ಅವಕಾಶವೇ ಕೊಡುವುದಿಲ್ಲ. ಆಡಿಯೋ ಫಾರ್ಮ್ಯಾಟ್ ಇರುವುದು .m4a ನಲ್ಲಿ. ಈ ಆಡಿಯೋ ಫೈಲನ್ನು ನನ್ನ ಬ್ಲಾಗಿಗೆ ಲಗತ್ತಿಸಲು ಅದನ್ನು ಮೊದಲು ಎಲ್ಲರೊಂದಿಗೆ ಹಂಚಿಕೊಳ್ಳಬೇಕು. ಅಂದರೆ ಅದನ್ನು ನನ್ನ ಗೂಗಲ್ ಡ್ರೈವಿನಿಂದ share ಮಾಡಿಕೊಂಡು ನಂತರ ಅದರ url ಕೊಂಡಿಯನ್ನು ಬ್ಲಾಗಿನಲ್ಲಿ ಅಂಟಿಸಬೇಕು. ಬ್ಲಾಗ್ ಭೇಟಿ ನೀಡುವವರಿಗೆ ಅಂತಹ ಆಡಿಯೋ ಫೈಲನ್ನು ಕೇಳಿಸಿಕೊಳ್ಳಲು ಸರಿಯಾದ compatible player ಇರಬೇಕು. ಅಂತೂ ಇಂತೂ ಕೊನೆಗೆ ಎಲ್ಲವು ಸರಿ ಕಾಣಿಸಿ ನನ್ನ ಈ ಕೀ ಬೋರ್ಡ ಹಾಡನ್ನು ಅಪ್ಲೋಡ್ ಮಾಡಿದ್ದೇನೆ. ಕೇಳಿಸಿಕೊಳ್ಳಿ. ಅಣ್ಣಾವರ ಹಾಡು. ಬಾನಿಗೊಂದು ಎಲ್ಲೆ ಎಲ್ಲಿದೆ.
ಬಾನಿಗೊಂದು ಎಲ್ಲೆ ಎಲ್ಲಿದೆ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ