ಕರ್ನಾಟಕ ಸಂಗೀತವನ್ನು ಅತ್ಯುಚ್ಛ್ರಾಯ ಸ್ಥಿತಿಯಿಂದ ಒಂದೆರೆಡು ದರ್ಜೆ ಕೆಳಗಿಳಿಸಿದ ಪರ ದೇಶದ ಪಿಟೀಲು
ಬ್ರಿಟಿಷರು ಭಾರತಕ್ಕೆ ಬರುವ ಮೊದಲೇ ಕರ್ನಾಟಕ ಸಂಗೀತ ಒಂದು ಅತ್ಯುಚ್ಛ್ರಾಯ ಸ್ಥಿತಿಯನ್ನು ತಲುಪಿತ್ತು. ಅಣ್ಣಮಾಚಾರ್ಯ (1425-1503) ಮತ್ತು ಪುರಂದರದಾಸರು (1484-1564) ತಮ್ಮ ಸ್ವರ ಸಂಯೋಜನೆ, ಪಲ್ಲವಿ, ಅನುಪಲ್ಲವಿ ಮತ್ತು ಚರಣ ಎನ್ನುವ ಸಂಗೀತ ಸ್ವರೂಪವನ್ನು ಹೊಸದಾಗಿ ನಿರ್ಮಿಸಿ ಕರ್ನಾಟಕ ಸಂಗೀತಕ್ಕೆ ಆಗಲೇ ದೃಢವಾದ ಅಡಿಪಾಯ ಹಾಕಿದ್ದರು. ವಿಜಯನಗರ ಸಾಮ್ರಾಜ್ಯದ ಆಶ್ರಯದಲ್ಲಿ ಕರ್ನಾಟಕ ಸಂಗೀತದ ಸೈದ್ಧಾಂತಿಕ ಮತ್ತು ವ್ಯಾವಹಾರಿಕ ಕಲೆಯನ್ನು ಸ್ಥಾಪಿಸಿದ ದಿಗ್ಗಜರಿವರು. ಆದರೆ ಇವರ ನಂತರ ನೂರೈವತ್ತು ವರುಷಗಳ ಕಾಲ ಕರ್ನಾಟಕ ಸಂಗೀತದಲ್ಲಿ ಒಂದು ಶೂನ್ಯತೆ ಆವರಿಸಿ ಅಷ್ಟೇನು ಹೊಸ ಆಯಾಮಗಳಾಗಲಿ, ರೂಪಾಂತರಗಳಾಗಲಿ ಅಥವ ಪ್ರಭಾವಶಾಲಿ ಭೋಧಕರಾಗಲಿ ಕಂಡುಬರುವುದಿಲ್ಲ. ಅಷ್ಟು ವರ್ಷಗಳ ನಂತರ ಕರ್ನಾಟಕ ಸಂಗೀತಕ್ಕೆ ಮತ್ತೆ ಪ್ರಾಮುಖ್ಯತೆ ದೊರೆತಿದ್ದು ತಂಜಾವೂರಿನ ಮರಾಠ ರಾಜರ ಅರಮನೆಗಳಲ್ಲಿ. ಬ್ರಿಟಿಷರ ದಬ್ಬಾಳಿಕೆಯ ಕಾಲದಲ್ಲಿ ಕೂಡ, ಈ ಪ್ರಭಾವಶಾಲಿ ರಾಜಮನೆತನ ಕರ್ನಾಟಕ ಸಂಗೀತವನ್ನು ಇಡೀ ದಕ್ಷಿಣ ಭಾರತದಲ್ಲಿ ಪ್ರೋತ್ಸಾಹಿಸಿದ್ದಲ್ಲದೆ ಸಂಗೀತ ಪದ್ದತಿಯನ್ನು ರಕ್ಷಿಸುವುದರಲ್ಲಿ ಪರಿಣಾಮಕಾರಿಯಾದರು. ಕರ್ನಾಟಕ ಸಂಗೀತ ತ್ರಿಮೂರ್ತಿಗಳಾದ ಶ್ಯಾಮ ಶಾಸ್ತ್ರೀ (1762-1827), ತ್ಯಾಗರಾಜ (1767-1847) ಮತ್ತು ಮುತ್ತುಸ್ವಾಮಿ ದೀಕ್ಷಿತರ್ (1776-1835) ಮೂವರೂ ತಂಜಾವೂರಿನ ರಾಜಮನೆತನದ ಬೆಂಬಲದಲ್ಲಿ ಗಾಯನದ ವೃತ್ತಿಯನ್ನು ಗಣ್ಯ ಸ್ಥಾನಕ್ಕೆ ಏರಿಸಿದರು. ಈ ಸಮಯದಲ್ಲಿ ಆದ ಅಮೂಲಾಗ್ರ ಬದಲಾವಣೆಯೆಂದರೆ ಮೊದಲ ಬಾರಿಗೆ ಪರ ದೇಶದ ಪಿಟೀಲು ಕರ್ನಾಟಕ ಸಂಗೀತದಲ್ಲಿ ಪಾದಾರ್ಪಣೆ ಮಾಡಿದ್ದು.
ಮೇಲಿನ ಸಂಕ್ಷಿಪ್ತ ಚಾರಿತ್ರಿಕ ಹಿನ್ನಲೆಯನ್ನು ಅವಲೋಕಿಸಿದ ನಂತರ ಮುಂದೆ ಕರ್ನಾಟಕ ಸಂಗೀತದಲ್ಲಿ ಪಿಟೀಲನ್ನು ಪರಿಚಯಿಸಿದ ಕಲಾವಿದರು, ಆ ಕಾಲದ ಸನ್ನಿವೇಶ ಮತ್ತು ಅದರ ಸ್ವೀಕಾರ/ ಅಸ್ವೀಕಾರಗಳ ಬಗ್ಗೆ ಗಮನ ಹರಿಸೋಣ. ಹದಿನೆಂಟನೇ ಶತಮಾನದ ತಂಜಾವೂರನ್ನು ಮನದಲ್ಲೇ ಊಹಿಸಿಕೊಳ್ಳಿ.
ಹದಿನೆಂಟು ಮತ್ತು ಹತ್ತೊಂಬತ್ತನೇ ಶತಮಾನದ ಮಧ್ಯ ಚಾರಿತ್ರಿಕ ಕಾಲ (1750-1850). ಬ್ರಿಟಿಷ್ ಆಡಳಿತ ಭಾರತದ ಎಲ್ಲಡೆ ಪ್ರಭಾವ ಬೀರಿತ್ತು. ‘ಮಡ್ರಾಸ್ ಪ್ರೆಸಿಡೆನ್ಸಿ’ ಎಂದು ಕರೆಯಲ್ಪಡುತ್ತಿದ್ದ ಈಗಿನ ತಮಿಳು ನಾಡು ಮತ್ತು ಅದರ ಪ್ರಮುಖ ರೇವು ಪಟ್ಟಣ ಇತರ ಹಳ್ಳಿ ಪ್ರದೇಶಗಳಿಗಿಂತ ಹೆಚ್ಚು ನಗರೀಕರಣ ಕಂಡಿತ್ತು. ಈ ಸಮಯದಲ್ಲಿ ರೈಲು ಗಾಡಿ ಮತ್ತು ಕಾರ್ಖಾನೆಗಳು ತಂದ ಆರ್ಥಿಕ ಸಮೃದ್ಧಿ ಅಪಾರವಾದದ್ದು. ಸಾಮಾನ್ಯ ಜನರ ದಿನ ನಿತ್ಯದಲ್ಲಿ ಕಂಡು ಬಂದ ಬದಲಾವಣೆಗಳೂ ಕೂಡ ಅನೇಕ. ಉಡಿಗೆ ತೊಡಿಗೆಯಲ್ಲಿ, ಸಂಪ್ರದಾಯ ಆಚರಣೆಗಳಲ್ಲಿ, ಕಲೆ ಕೌಶಲಗಳಲ್ಲಿ ಮತ್ತು ಸಂಗೀತದಲ್ಲಿ ಪರಿವರ್ತನೆಯ ಕಾಲವೆಂದೇ ಹೇಳಬಹುದು. ಕರ್ನಾಟಕ ಸಂಗೀತ ಕೂಡ ಇದಕ್ಕೆ ಹೊರತಾಗಿರಲಿಲ್ಲ. ಆದರೆ ತಂಜಾವೂರು ಒಂದು ಸುಭಿಕ್ಷ ಕಲಾ ಕೇಂದ್ರವಾಗಿ ಬ್ರಿಟಿಷರ ಪ್ರಭಾವದಿಂದ ದೂರವಾಗಿ ಬೆಳೆದಿತ್ತು. ಸುತ್ತಲೂ ಹಬ್ಬಿರುವ ಮರಳುಗಾಡಿನಲ್ಲಿ ಕಂಡ ಸುಂದರ ತೋಟದಂತೆ ತಂಜಾವೂರು ಹಿಂದೂ ಸಂಸ್ಕೃತಿಯನ್ನು ಉಳಿಸಿಕೊಂಡಿತ್ತು. ಇಂತಹ ವಾತಾವರಣದಲ್ಲಿ ದೀಕ್ಷಿತರ ಸಂಸಾರ ಕರ್ನಾಟಕ ಸಂಗೀತದ ಕೇಂದ್ರ ಬಿಂದುವಾಗಿ ತಂಜಾವೂರಿನ ರಾಜರ ದರ್ಬಾರಿನಲ್ಲಿ ಮನೆಮಾತಾಗಿತ್ತು. ತಲೆಮಾರಿನಿಂದ ಬಂದ ಸಂಗೀತವನ್ನು ತಂದೆ ರಾಮಸ್ವಾಮಿ ದೀಕ್ಷಿತರ್ ಮತ್ತು ಅವರ ಇಬ್ಬರು ಪುತ್ರರಾದ ಬಾಲುಸ್ವಾಮಿ ಮತ್ತು ಮುತ್ತುಸ್ವಾಮಿ ದೀಕ್ಷಿತರು ಪರಿಪಾಲಿಸಿಕೊಂಡು ಬಂದಿದ್ದರು. ಕೊಳಲು, ವೀಣೆ, ಘಟ, ಮೃದಂಗ ನುಡಿಸುವುದರ ಜೊತೆಗೆ ಸ್ವರ ಸಂಯೋಜನೆ, ಕೀರ್ತನೆಗಳ ರಚನೆಯಲ್ಲಿ ಮೇಧಾವಿಯಾಗಿ ಬೆಳೆದ ಮುತ್ತುಸ್ವಾಮಿ ದೀಕ್ಷಿತರು ಕುಲದ ಸಂಗೀತ ಅಧಿಪತಿಯಾಗಿ ತಂದೆಯವರ ಮನಗೆದ್ದರು. ಬಾಲುಸ್ವಾಮಿ ಕರ್ನಾಟಕ ಸಂಗೀತಕ್ಕಿಂತ ಹೆಚ್ಚಾಗಿ ಪಾಶ್ಚಾತ್ಯ ಸಂಗೀತ ಕಲಿಯುವುದರಲ್ಲಿ ಆಸಕ್ತಿ ತೋರಿದ್ದರಿಂದ, ತಂದೆ ರಾಮಸ್ವಾಮಿಯವರು ಪರಿಚಯದವರ ಮೂಲಕ ಆಗಿನ ಬ್ರಿಟಿಷ ವಾದ್ಯವೃಂದದಲ್ಲಿ ಪಾಲ್ಗೊಳ್ಳಲು ಏರ್ಪಾಟುಮಾಡಿದ್ದರು. ಮಡ್ರಾಸ್ ಪ್ರೆಸಿಡೆನ್ಸಿಯ ಆಗಿನ ಗವರ್ನರ್ ಪೈಗುಟ್ ಬಳಿ ವ್ಯಾಖ್ಯಾನಕಾರನಾಗಿ ಕೆಲಸ ಮಾಡುತ್ತಿದ್ದವರು ಮನಕ್ಕಿ ಮುತ್ತುಕೃಷ್ಣ ಮೊದಲಿಯಾರ್ ಎನ್ನುವವರು. ಅವರು ಗವರ್ನರರಿಗೆ ಶಿಫಾರಸ್ಸು ಮಾಡಿದ್ದರಿಂದ ಸುಮಾರು ಮೂರು ವರ್ಷಗಳ ಕಾಲ ಬ್ರಿಟಿಷ್ ವಾದ್ಯವೃಂದಲ್ಲಿ ಪಾಶ್ಚಾತ್ಯ ಸಂಗೀತ ಕಲಿಯಲು ಸಾಧ್ಯವಾಯಿತು ಬಾಲುಸ್ವಾಮಿಗೆ. ಅವರು ಯುರೋಪಿಯನ್ನರ ಪಿಟೀಲು ವಾದನ ಕಲಿತಿದ್ದು ಈ ವಾದ್ಯವೃಂದಗಳಲ್ಲಿ.
ಇದೋ ಇಲ್ಲಿದೆ ಕೇಳಿ ಹದಿನೆಂಟನೇ ಶತಮಾನದ ಬ್ರಿಟಿಷ್ ಸಂಗೀತ. ಗುಂಪಿನಲ್ಲಿ ಪುರುಷರೇ ಪ್ರಧಾನವಾಗಿ ಹಾಡುತ್ತಿದ್ದ ಈ ಸಂಗೀತದಲ್ಲಿ ಪಿಟೀಲು, ಚೆಲ್ಲೋ, ಹಾರ್ಪ್, ಪಿಯಾನೋ ಕೂಡ ಕೇಳಿಬರುತ್ತದೆ. ಸುಮಾರು ೧೦೦ ವರ್ಷಗಳ ಮುಂಚೆಯೇ ಬರೆದ ಈ ಹಾಡು ಹದಿನೆಂಟನೇ ಶತಮಾನದಲ್ಲಿಯೂ ಕೂಡ ಜನಜನಿತವಾಗಿತ್ತು. ಬಾಲುಸ್ವಾಮಿ ದೀಕ್ಷಿತರು ಇಂತಹ ಸಂಗೀತದಲ್ಲಿ ಪರಿಣಿತಿ ಪಡೆದದ್ದು.
ತಂಜಾವೂರಿಗೆ ಮರಳಿ ಬಂದ ಮೇಲೆ, ಬಾಲುಸ್ವಾಮಿ ನುಡಿಸಿದ ಪಿಟೀಲು ವಾದನ ಕೇಳಿ ಎಲ್ಲರಿಗು ಆಶ್ಚರ್ಯವಾದರೂ, ಅರ್ಥವಾಗದ ಪಾಶ್ಚಾತ್ಯ ಸಂಗೀತವಾದ್ದರಿಂದ ಮನೆಯಲ್ಲಿ ಮತ್ತು ಸಂಗೀತ ಸಮುದಾಯಗಳಲ್ಲಿ ಕಿರು ಹೋರಾಟ ಶುರುವಾಯಿತು. ಪ್ರಯೋಗ ರೂಪದಲ್ಲಿ ಬಾಲುಸ್ವಾಮಿ ಪಾಶ್ಚಾತ್ಯ ಪಿಟೀಲನ್ನು ಕರ್ನಾಟಕ ಸಂಗೀತದಲ್ಲಿ ಬಳಕೆ ಮಾಡಿದಾಗ ಸಂಗೀತ ಧರ್ಮ ನಿಂದನೆ ಎಂದರು ಕೆಲವರು. ಹಿಂದೂಸ್ತಾನಿ ಸಂಗೀತದಲ್ಲಿ ಸಾರಂಗಿ ಎನ್ನುವ ತಂತಿ ವಾದ್ಯವನ್ನು ಉಪಯೋಗಿಸುವಂತೆ ಕರ್ನಾಟಕ ಸಂಗೀತದಲ್ಲಿ ಈ ಪಾಶ್ಚಾತ್ಯ ಪಿಟೀಲನ್ನು ಏಕೆ ಉಪಯೋಗಿಸಬಾರದು ಎನ್ನುವ ವಾದ ಮುಂದೂಡಿದಾಗ ಸ್ವರದ ಮಟ್ಟ ಸರಿಹೊಂದಿಸಲು ಈ ಕರ್ಣ ಕಠೋರ ಉಚ್ಚ ಸ್ವರದ ವಾದ್ಯಕ್ಕೆ ಸಾಧ್ಯವಿಲ್ಲ ಎಂದರು ವಿರೋಧಿಗಳು. ಪುರಂದರ ದಾಸರ ಕಾಲದಿಂದಲೂ ತಂಬೂರಿಯ ಏಕನಾದ, ಕೊಳಲಿನ ಮಾಧುರ್ಯತೆ, ವೀಣೆಯ ಅನುರುಣಿಸುವ ಸ್ವರ, ಶಿವನ ಡಮರಿನಂತೆ ಮೃದಂಗದ ವೈಖರಿ ಎಲ್ಲವೂ ಕರ್ನಾಟಕ ಸಂಗೀತದಲ್ಲಿ ಕರಗತವಾಗಿರುವಾಗ ಈ ಪಾಶ್ಚಾತ್ಯ ಪಿಟೀಲು ಬೇಕೇ ಎಂದು ಪ್ರಶ್ನಿಸಿದರು ಹಲವು ವಿದ್ವಾಂಸರು. ಪಿಟೀಲು ಬಾರಿಸುವ ಅಸಹವರ್ತನ ಕ್ರಮವೆಂದರೆ, ತಂತಿಯ ಮೇಲೆ ಬೆರಳನಾಡಿಸುವಾಗ --ವೀಣೆಯಂತೆ ಮನೆಗಳಿರದ ಕಾರಣ -- ಪಾಶ್ಚಾತ್ಯರು ತುದಿ ಬೆರಳಿನಲ್ಲಿ ಪೂರ್ಣವಿರಾಮ ಕೊಟ್ಟು ಮತ್ತೊಂದು ಸ್ವರಕ್ಕೆ ಹೋಗುತ್ತಾರೆ. ಆದರೆ ಕರ್ನಾಟಕ ಸಂಗೀತದಲ್ಲಿ ಸ್ವರಗಳನ್ನು ಜಾರಿಕೆಯ ರೂಪದಲ್ಲಿ ತೇಲಿಸಿ ಮತ್ತು ಕಂಪನದೊಂದಿಗೆ ಹಾಡುವುದರಿಂದ, ಪಾಶ್ಚಾತ್ಯರ ಪದ್ಧತಿಗೆ ಸರಿ ಹೊಂದುವುದಿಲ್ಲ. ಮನುಷ್ಯ ಧ್ವನಿಯನ್ನು ಅನುಕರಿಸಿ ಸ್ವರತರಂಗದಲ್ಲಿ ನುಡಿಸಲು ಯಾವುದೇ ತಂತಿ ವಾದನಕ್ಕೆ ಸಾಧ್ಯವಿಲ್ಲ. ಈ ರೀತಿಯ ನೂರಾರು ವಿರೋಧಗಳನ್ನು ಎದುರಿಸಬೇಕಾಯಿತು ಪಿಟೀಲು ಅಳವಡಿಕೆಯ ಪ್ರಯತ್ನದಲ್ಲಿ. ಆದರೆ ‘ವೈರಿಯನ್ನು ಗೆಲ್ಲಲಾಗದಿದ್ದರೆ ಅವರೊಡನೆ ಸೇರಿ ಗೆಲ್ಲು,’ ಎನ್ನುವಂತೆ ಪಾಶ್ಚಾತ್ಯ ಪದ್ದತಿಯನ್ನು ಪರಿವರ್ತಿಸಿಕೊಂಡು ಪಿಟೀಲು ವಾದ್ಯವನ್ನು ಕರ್ನಾಟಕ ಸಂಗೀತದೊಡನೆ ಬೆಸೆಯುವ ಪ್ರಯತ್ನ ಮುಂದುವರೆಯಿತು. ನಿಂತುಕೊಂಡು ನುಡಿಸುವ ಬದಲು ಚಾಪೆಯ ಮೇಲೆ ಕುಳಿತು ನುಡಿಸುವ ಪದ್ಧತಿ ಜಾರಿಗೆ ಬಂದಿತು. ಗಾಯಕರ ಸ್ವರಗಳಿಗೆ ಹೊಂದಿಸಲು ಉಚ್ಚ ಸ್ವರದ ಬದಲು ತಗ್ಗಾದ ಸ್ವರಗಳಿಗೆ ಪಿಟೀಲನ್ನು ಶ್ರುತಿ ಮಾಡಲಾಯಿತು. ಬೇಡದ ಅಥವಾ ಉಪಯೋಗಕ್ಕೆ ಬಾರದ ಪಾಶ್ಚಾತ್ಯ ಪದ್ದತಿಗಳನ್ನು ಕೈಬಿಡಲಾಯಿತು. ಆರೋಹಣ ಅವರೋಹಣ ಮತ್ತು ಕೀರ್ತನೆಗಳಿಗೆ ಹೊಂದುವಂತೆ ನುಡಿಸುವುದನ್ನು ಕಾರ್ಯರೂಪಕ್ಕೆ ತರಲಾಯಿತು. ಇದೇ ಸಮಯದಲ್ಲಿ ಪಾಶ್ಚಾತ್ಯ ಸಂಗೀತದ ಸ್ವರಸಂಕೇತಗಳನ್ನು ನಕಲಿ ಮಾಡಿ, ಅವುಗಳನ್ನು ಕರ್ನಾಟಕ ಸಂಗೀತದ ವ್ಯವಹಾರಿಕ ಪದ್ದತಿಯಲ್ಲಿ ಅಳವಡಿಸಿಕೊಂಡು ಸಂಗೀತ ಕಲಿಸುವ ಮತ್ತು ಶಾಸ್ತ್ರಗ್ರಂಥಗಳ ಪುಸ್ತಕಗಳು ಹೊರಬಂದವು. ಕೆಲವು ಹೊಸತನ, ಕೆಲವು ಸ್ವಂತಿಕೆ, ಕೆಲವು ಅಸಲು-ನಕಲು, ಹೀಗೆ ವಿವಿಧ ಮಾರ್ಪಾಟುಗಳನ್ನು ಮಾಡಿಕೊಂಡು ಪಿಟೀಲು ಕರ್ನಾಟಕ ಸಂಗೀತದಲ್ಲಿ ಪಾದಾರ್ಪಣೆ ಮಾಡಿತು. ಬಾಲುಸ್ವಾಮಿ ದೀಕ್ಷಿತರ ನಿರಂತರ ಪ್ರಯತ್ನ ಫಲ ಕೊಟ್ಟಿತ್ತಾದರೂ ತಂದೆ ರಾಮಸ್ವಾಮಿ ಮತ್ತು ಅಣ್ಣ ಮುತ್ತುಸ್ವಾಮಿ ದೀಕ್ಷಿತರ ಒಪ್ಪಿಗೆ ದೊರಕಿತ್ತು ಎಂದು ಹೇಳಲು ಸಾಧ್ಯವಿಲ್ಲ. ಮುಂದೆ ಹಲವಾರು ವರ್ಷಗಳಲ್ಲಿ ಮುತ್ತುಸ್ವಾಮಿ ದೀಕ್ಷಿತರ ಶಿಷ್ಯರಾದ ವಡಿವೇಲು ಮುಂತಾದವರು ರಾಜ ಸ್ವಾತಿ ತಿರುನಾಳ್ ಬೆಂಬಲದಲ್ಲಿ ಪಿಟೀಲನ್ನು ಮತ್ತಷ್ಟು ಸ್ವೀಕಾರಾರ್ಹ ವಾದನವನ್ನಾಗಿ ಮಾಡಿದರು. ಆದಾಗ್ಯೂ, ಉತ್ತರ ಭಾರತದ ಹಿಂದೂಸ್ತಾನಿ ಸಂಗೀತದಲ್ಲಿ ಪಿಟೀಲು ಮೆಚ್ಚುಗೆ ಗಳಿಸಲು ಬಹಳ ಕಾಲ ಹಿಡಿಯಿತು. 1950 ರ ದಶಕದಲ್ಲಿ ಪಂಡಿತ್ ಜೋಗ್ ರವರ ಸಾರಥ್ಯದಲ್ಲಿ ಮೊದಲ ಬಾರಿಗೆ ಪಾಶ್ಚತ್ಯ ಪಿಟೀಲನ್ನು ಹಿಂದೂಸ್ತಾನಿ ಸಂಗೀತದಲ್ಲಿ ಬಳಸಲಾಯಿತು.
ಇನ್ನೂರು ವರ್ಷಗಳ ಹಿಂದಾದ ಈ ಬದಲಾವಣೆ, ನನ್ನ ಅಭಿಪ್ರಾಯದಲ್ಲಿ ಕರ್ನಾಟಕ ಸಂಗೀತವನ್ನು ಅತ್ಯುಚ್ಛ್ರಾಯ ಸ್ಥಿತಿಯಿಂದ ಒಂದೆರೆಡು ದರ್ಜೆ ಕೆಳಗಿಳಿಸಿತು. ಜೊತೆಗೆ ಸಾವಿರಾರು ವರ್ಷಗಳಿಂದಲೂ ಹಿಂದೂ ಸಂಸ್ಕೃತಿಯ ಉನ್ನತ ಸ್ವದೇಶೀ ವಾದನವೆಂದು ಕರೆಯಲ್ಪಟ್ಟ, ಸರಸ್ವತಿ ನುಡಿಸುವ ವೀಣೆಯನ್ನು ಹಿಂದಕ್ಕೆ ತಳ್ಳಿ ಪರ ದೇಶದ ಪಿಟೀಲನ್ನು ಕರ್ನಾಟಕ ಸಂಗೀತಕ್ಕೆ ಅಳವಡಿಸಿಕೊಂಡಿದ್ದು ಒಂದು ಶೋಚನೀಯ ಸಂಗತಿ. ನನ್ನ ಈ ವಾದಕ್ಕೆ ಕೆಲವು ಪುರಾವೆಗಳನ್ನು ಈ ಕೆಳಗಿನ ಪರಿಚ್ಛೇದದಲ್ಲಿ ಕೊಟ್ಟಿದ್ದೇನೆ:
1. ಪಾಶ್ಚಾತ್ಯ ಪಿಟೀಲು ಮತ್ತು ಅದರ ಲಕ್ಷಣಗಳು:
ಈ ವಿಡಿಯೋ ನಲ್ಲಿ ಪಾಶ್ಚಾತ್ಯ ಪಿಟೀಲಿನ ಗುಣ ಲಕ್ಷಣಗಳನ್ನು ಮತ್ತು ಅದನ್ನು ನುಡಿಸುವ ಕೌಶಲವನ್ನು ಯಾರು ವಿವರಿಸದಿದ್ದರೂ ಅರ್ಥವಾಗುವಂತೆ ಚಿತ್ರಿತವಾಗಿದೆ. ಇಟಲಿ ದೇಶದಲ್ಲಿ ಮೊದಲು ಅವಿಷ್ಕಾರಗೊಂಡದ್ದು ಈ ಪಿಟೀಲು. ಅದರ ಉದ್ದೇಶ ಸಂಗೀತ ಕೇಳುವವರಲ್ಲಿ ಭಾವಪರವಶತೆಯನ್ನು ಉಂಟುಮಾಡುವುದು. ಜೊತೆಯಲ್ಲಿ ಪಿಯಾನೋ ನುಡಿಸಿದರೂ ಈ ಭಾವಪರವಶತೆಯ ಮುಖ್ಯ ಕೇಂದ್ರ ಬಿಂದು ಪಿಟೀಲು ಮಾತ್ರ. ಆದರೂ ಮನುಷ್ಯ ಧ್ವನಿಯನ್ನು ಅನುಕರಿಸಲು ಪಿಟೀಲನ್ನು ಅವಿಷ್ಕಾರ ಮಾಡಲಿಲ್ಲ ಎಂದು ಖಂಡಿತ ಹೇಳಬಹುದು. ಏಕೆಂದರೆ ಪಾಶ್ಚಾತ್ಯ ಆರ್ಕೆಷ್ಟ್ರಾ ಮತ್ತು ಆಪೇರಾ ಗಳಲ್ಲಿ ಹಾಡುವವನನ್ನು ಅನುಕರಿಸುವ ಬದಲು, ಎಲ್ಲ ವಾದ್ಯಗಳು ತಮ್ಮದೇ ಹೊಂದಾಣಿಕೆಯ ಸ್ವರಗಳನ್ನು ನಿರೂಪಿಸುತ್ತವೆ. ಈ ನಾದವನ್ನು 1680 ರಲ್ಲಿ ಜರ್ಮನಿಯ ಜೊಹಾನ್ ಪ್ಯಾಕೆಲ್ಬೆಲ್ ಎನ್ನುವವನು ಸಂಯೋಜಿಸಿದ್ದು. ಕಲಾವಿದ ಬೆರಳನಾಡಿಸುವ ಕ್ರಮ ಮತ್ತೊಮ್ಮೆ ನೋಡಿ. ಬೆರಳುಗಳನ್ನು ಜಾರಿಸದೆ ತುದಿಯಲ್ಲಿ ಪ್ರತಿಯೊಂದು ಸ್ವರದ ಲಕ್ಷಣಗಳನ್ನು ನಿರೂಪಿಸುತ್ತಾನೆ. ನಂತರ ಕಂಪನಗೊಳಿಸಿ ಹೊಸ ಅಲಂಕಾರಗಳನ್ನು ನಿರೂಪಿಸುತ್ತಾನೆ. ಶ್ರುತಿ ಕೂಡ ತೀರ್ವ ಅನಿಸುವುದಿಲ್ಲ ಮತ್ತು ಬೆರಳುಗಳನ್ನು ಜಾರಿಸಿದ್ದರೆ ಅಪಸ್ವರ ಬರುವ ಸಂಭವವೇ ಹೆಚ್ಚು. ಅಂದರೆ, ಯಾವ ರೀತಿಯಲ್ಲಿ ಮಾರ್ಪಾಟು ಮಾಡಿದರೂ ಪಿಟೀಲಿನ ಮೂಲ ಉದ್ದೇಶ ಬೇರೆ ವಾದ್ಯಗಳನ್ನಾಗಲಿ, ಹಾಡುವವರನ್ನಾಗಲಿ ಅನುಕರಿಸುವುದಾಗಿರಲಿಲ್ಲ. ಹಾಗಿದ್ದಲ್ಲಿ ತಂಜಾವೂರಿನ ಸಂಗೀತ ವಿದ್ವಾಂಸರು ಕರ್ನಾಟಕ ಸಂಗೀತದಲ್ಲಿ ಪಿಟೀಲು ವಿರೋದಿಸಿದ್ದು ಇಂದಿಗೂ ಅತಿಶಯೋಕ್ತಿಯಲ್ಲ ಎಂದಾಯಿತು.
ಆದರೆ ಒಂದು ಸ್ಪಷ್ಟೀಕರಣದ ಮಾತು: ಗಾಯನದ ಜೊತೆ ತಾಳವಾದ್ಯದೊಂದಿಗೆ ಪಿಟೀಲು ನುಡಿಸಿದಾಗ ಮನದಲ್ಲಾಗುವ ಭಾವನೆಗಳೇ ಬೇರೆ. ಒಬ್ಬರೇ ಕುಳಿತು ಈ ಕೆಳಗಿನ ವಿಡಿಯೋದಲ್ಲಿರುವಂತೆ ಕರ್ನಾಟಕ ಸಂಗೀತ ಶೈಲಿಯಲ್ಲಿ ಯಾವುದೇ ಪಕ್ಕವಾದ್ಯಗಳಿಲ್ಲದೆ ಪಿಟೀಲು ನುಡಿಸಿದರೆ ಅದರ ಫಲಿತಾಂಶವೇ ಬೇರೆ.
ಈ ಎರಡೂ ಶೈಲಿಯಲ್ಲಿ ಪಿಟೀಲು ನುಡಿಸುವುದನ್ನು ನೋಡಿದ ಮೇಲೆ ನಿಮಗಾದ ಭಾವಪರವಶತೆನ್ನು ನಿಷ್ಪಕ್ಷವಾಗಿ ನೀವೇ ನಿರ್ಧರಿಸಿ.
2. ಪಿಟೀಲು ಇಲ್ಲದ ಕರ್ನಾಟಕ ಸಂಗೀತ ಬಹುಷಃ ಹೀಗಿದದ್ದೀತು:
ನೂರಾರು ವರ್ಷಗಳ ಕಾಲ ಕರ್ನಾಟಕ ಸಂಗೀತವನ್ನು ದಾಳಿ ಮಾಡಿದೆ ಈ ಪಾಶ್ಚಾತ್ಯ ಪಿಟೀಲು. ಹಾಗಿದ್ದಲ್ಲಿ ಬಾಲುಸ್ವಾಮಿ ದೀಕ್ಷಿತರ ಸಮಯಕ್ಕೆ ಮುಂಚೆ ಕರ್ನಾಟಕ ಸಂಗೀತ ಹೇಗಿದ್ದರಬಹುದು ಎಂದು ಊಹಿಸಿಕೊಳ್ಳಲು ಸ್ವಲ್ಪ ಕಷ್ಟವೇ. ಪುರಂದರ ದಾಸರ ಕಾಲವನ್ನು ಊಹಿಸಿಕೊಂಡು ಈ ಮೇಲಿನ ವಿಡಿಯೋ ನೋಡಿದರೆ, ಬಹುಷಃ ಪಿಟೀಲು ಇಲ್ಲದಯೇ ಒಂದು ಏಕನಾದದ ತಂಬೂರಿಯನ್ನು ಮಾತ್ರ ಮೀಟುತ್ತ ಹಾಡಿದರೆ ಕರ್ನಾಟಕ ಸಂಗೀತ ಹೇಗಿತ್ತು ಅನ್ನುವುದು ಮನದಟ್ಟವಾಗುವುದು. ಪುರುಷ ಧ್ವನಿಯಲ್ಲಿ ಅದೆಷ್ಟು ಸೂಕ್ಷ್ಮಾತಿಸೂಕ್ಷ್ಮ ಸ್ವರ ತರಂಗಗಳು ಉದ್ಭವಿಸಿಸಲು ಸಾಧ್ಯ ಎಂದು ಅರಿವಾಗುತ್ತದೆ. ಕಂಪಿತ ಧ್ವನಿಯ ಏರಿಳಿತ, ಸಾಂಧ್ರತೆ, ಆವರ್ತನ ಎಲ್ಲವನ್ನು ಕಿವಿಗೊಟ್ಟು ಆಲಿಸಿದಾಗ ಮನತಟ್ಟುವ ಸಂಗೀತವಾಗುತ್ತದೆ. ಲಯಬದ್ದತೆಗೆ ತಾಳವಾದ್ಯ ಇದ್ದರೆ ಸಾಕು ಇನ್ನಷ್ಟು ಸ್ಪಂದಿಸುತ್ತದೆ. ಆದರೆ ಈ ತಾಳವಾದ್ಯದಲ್ಲಿ ಪಾಶ್ಚತ್ಯ ಪಿಟೀಲು ಸೇರಿದಾಗ, ಅದರ ಉದ್ದೇಶವೇ ಬೇರೆ ಆದ್ದರಿಂದ ಹಾಡುಗಾರನ ಸೂಕ್ಷ್ಮಾತಿಸೂಕ್ಷ್ಮ ಸ್ವರತರಂಗಗಳನ್ನು ಅನುಕರಿಸಲು ಪ್ರಯತ್ನಿಸಬಹುದೇ ವಿನಃ ಅದನ್ನು ನುಡಿಸಲು ಸಾಧ್ಯವಿಲ್ಲ. ಹಾಡುಗಾರನ ಗಾಯನದಲ್ಲಿದ್ದ ಭಾವಪರವಶತೆಯನ್ನು ನಕಲು ಮಾಡಲು ಪ್ರಯತ್ನಿಸುತ್ತದೆ ಅಪ್ರಧಾನ ಪಿಟೀಲು. ಅನಾವಶ್ಯವಾಗಿ ಹಾಡುವವರ ಮತ್ತು ಪಿಟೀಲು ನುಡಿಸುವುವವರ ಮಧ್ಯೆ ಒಂದು ಪೈಪೋಟಿ ಪ್ರಾರಂಭವಾಗಿ ಸಭಿಕರ ಮನ ದ್ವಂದಕ್ಕೆ ತಿರುಗ್ಗುತ್ತದೆ. ಸಾಮರಸ್ಯಕ್ಕೆ ತಾಳವಾದ್ಯ ಬೇಕೇ ಹೊರತು ದ್ವಂದವನು ಸೃಜಿಸಲು ಅಲ್ಲ.
ಮತ್ತೊಂದು ವಿಡಿಯೋ ನೋಡಿ.
ಈ ಸಂಗೀತ ಕಚೇರಿಯಲ್ಲಿ ಜೇಸುದಾಸರ ಭಾವಪರವಶತೆಯನ್ನು ಅನುಕರಿಸಲು ಪಿಟೀಲು ವಾದಕ ತ್ರಾಸ ಪಡುತ್ತಿರುವುದು ಎದ್ದು ಕಾಣುತ್ತದೆ. ಇದು ವಾದಕನ ನ್ಯೂನತೆ ಅಲ್ಲ. ಇದು ಪಿಟೀಲು ವಾದನದ ನ್ಯೂನತೆಯು ಅಲ್ಲ. ಇದು ಕರ್ನಾಟಕ ಸಂಗೀತದಲ್ಲಿ ಪಿಟೀಲಿನ ಅಸಹವರ್ತನ. (Incompatibility). ಕೇವಲ ಅನುಕೂಲತೆಗೆ ಮಾಡಿಕೊಂಡ ಒಂದು ಮದುವೆಯಂತೆ ಈ ಪಿಟೀಲು ಮತ್ತು ಕರ್ನಾಟಕ ಸಂಗೀತದ ಸಂಭಂದ. ಆದರೆ ಮೊದಲಿನಂತೆ ಅವಕಾಶಗಳಲ್ಲಿ ಸಮತೆಯಿಲ್ಲದ, ಮಾರ್ಗದರ್ಶಕ ತತ್ವ ಇಲ್ಲದ ಒಂದು ತಾಳವಾದ್ಯ ಅನಿಸುತ್ತದೆ. ಎಲ್ಲ ಭಾರತೀಯ ಸಂಗೀತದಲ್ಲಿ ಇದ್ದಂತೆ, ಕರ್ನಾಟಕ ಸಂಗೀತದಲ್ಲಿಯೂ ಕಲಾವಿದ ತಾನು ಕಲಿತಿದ್ದಕ್ಕಿಂತ ಹೆಚ್ಚಾಗಿ, ನುಡಿಸುವ ಅಥವಾ ಹಾಡುವ ಆ ಕ್ಷಣದಲ್ಲಿ ಸ್ವರಗಳ ಗುಣಗಳನ್ನು ಉತ್ತಮಗೊಳಿಸಿ ಸಭಿಕರ ಮನ ಗೆಲ್ಲುತ್ತಾರೆ. ಪಿಟೀಲು ವಾದಕ ಗಾಯಕನನ್ನು ಅನುಕರಿಸಿ ಉತ್ತಮ್ಮಗೊಳಿಸಿದ ಸ್ವರಗಳನ್ನು ಮೊದಲು ಕೇಳಿ, ನಂತರ ತಾನು ಅದರಂತೆ ನುಡಿಸಲು ಸಾಧ್ಯವಿಲ್ಲ ಎಂದು ಸಾಬೀತು ಪಡಿಸುತ್ತದೆ ಈ ವಿಡಿಯೋ.
3. ತಾಳವಾದ್ಯ
ತಾಳವಾದ್ಯದಲ್ಲಿ ಮುತ್ತುಸ್ವಾಮಿ ದೀಕ್ಷಿತರಿಗೆ ವೀಣೆಯ ಮೇಲಿದ್ದ ಒಲವು -- ಪುರಂದರ ಕೈಯಲ್ಲಿ ಸದಾ ಏಕನಾದ ಇರುವಂತೆ, ಮುತ್ತುಸ್ವಾಮಿಯವರ ಕೈಯಲ್ಲಿ ಸದಾ ವೀಣೆ ಇರುವುದನ್ನು ನಾವು ಕೇಳಿದ್ದೇವೆ.
ಅದಕ್ಕೆ ಕಾರಣ ಪಿಟೀಲು ಮತ್ತು ವೀಣೆಯಲ್ಲಿರುವ ಅಜಗಜಾಂತರ: ವೀಣೆಯ ಪ್ರತಿಧ್ವನಿಸುವ ಸೆಲೆ ಮತ್ತು ತಾಳವಾದ್ಯದಲ್ಲಿ ವೀಣೆಯ ಅಪ್ರಧಾನ ಸ್ಥಾನ. ದಾಸರ ‘ಇಂದು ಎನಗೆ ಗೋವಿಂದ’ ಹಾಡನ್ನು ಸಮಯ ಸಿಕ್ಕಾಗಿ ಕೇಳಿ. ಅದರ ತಾಳವಾದ್ಯದಲ್ಲಿ ವೀಣೆಯ ಮಾಧುರ್ಯತೆಯನ್ನು ಸವಿಯಬಹುದು. ಇಂದಿನಂತೆ ಆಗಲೂ ಪಾಶ್ಚಾತ್ಯ ಸಂಸ್ಕೃತಿಯನ್ನೇ ಅನುಸರಣೆ ಮಾಡುವ ಕೆಲವು ಪ್ರಭಾವಶಾಲಿ ಸಮುದಾಯಗಳು ಮುತ್ತುಸ್ವಾಮಿಯವರ ಪಿಟೀಲಿನ ವಿರೋಧ ಧ್ವನಿಯನ್ನು ಹೇಗೆ ದನಿಯಡಗಿಸರಬಹುದು ಎಂದು ಅರಿವಾಗುತ್ತದೆ. ಮತ್ತೊಂದು ವಿಷಯ: ಕರ್ನಾಟಕ ಸಂಗೀತ ದಿಗ್ಗಜರಾದ ಅಣ್ಣಮಾಚಾರ್ಯ, ಪುರಂದರ ದಾಸರು, ಕನಕದಾಸರು, ತ್ಯಾಗರಾಜ, ಶ್ಯಾಮ ಶಾಸ್ತ್ರೀ, ಮುತ್ತುಸ್ವಾಮಿ ದೀಕ್ಷಿತರು, ಎಲ್ಲರು ಸಂಯೋಜಿಸಿದ ರಾಗಗಳಾಗಲಿ, ಕೀರ್ತನೆಗಳಾಗಲಿ, ಗಮಕಗಳಾಗಲಿ, ಪಿಟೀಲು ತಾಳವಾದ್ಯವೆಂದು ಮನದಲ್ಲಿಟ್ಟುಕೊಂಡು ಕಲ್ಪಿಸಿದ ಕೃತಿಗಳಲ್ಲ. ಹಾಗಾಗಿ, ಇದುವರೆಗೂ ನಮಗೆ ಸಿಗುವ ಕರ್ನಾಟಕ ಸಂಗೀತದ -- ಒಂದೆರಡು ಇಪ್ಪತ್ತನೇ ಶತಮಾನದ ಪ್ರಯೋಗಗಳನ್ನು ಬಿಟ್ಟು -- ಎಲ್ಲ ಕೃತಿಗಳು ಪಿಟೀಲಿಗೆ ಹೊಂದಿಕೆಯಾಗಲು ಸಾಧ್ಯವಿಲ್ಲ ಎಂದಾಯಿತು. ಪಿಟೀಲು ಹೊಸತನವನ್ನು ಕುಂಠಿತಗೊಳಿಸಿದೆ ಏಕೆಂದರೆ ಹಾಡುವವರಿಂದ ಹಿಡಿದು ಮಿಕ್ಕೆಲ್ಲರೂ ಪಿಟೀಲಿನ ತಗ್ಗು ಶ್ರುತಿಗೆ ಸರಿಸಮನಾಗಿ ನುಡಿಸ ಬೇಕು.
4. ದಕ್ಷಿಣ ಭಾರತದಲ್ಲಿ ಆಧಾರಸ್ತಂಭ ಇಲ್ಲದ ಪಿಟೀಲು ಕಲೆ.
ಒಂದು ಪಾಶ್ಚಾತ್ಯ ಕಲೆಯನ್ನು ಪ್ರೋತ್ಸಾಹಿಸಿ ಅದನ್ನು ಪ್ರತಿಶಕ ಅಳವಡಿಸಿಕೊಳ್ಳಲು ಸಮಾಜದಲ್ಲಿ ನೂರಾರು ಬದಲಾವಣೆಗಳ ಅಗತ್ಯವಿರುತ್ತದೆ. ಪಿಟೀಲಿನ ಉದಾಹರಣೆಯಲ್ಲಿ, ವಾದನವನ್ನು ಮಾಡಲು ಬೇಕಾದ ವಿಶೇಷ ಮರದ ದಿಮ್ಮಿ, ಅದನ್ನು ಕೆತ್ತಲು ನೈಪುಣ್ಯತೆ, ತಂತಿ, ಬಿಲ್ಲಿಗೆ ಬೇಕಾದ ಕುದುರೆಯ ಕೂದಲು, ಬಣ್ಣಗಳು, ಮರದ ಅಂಟು, ಹೀಗೆ ಒಂದು ಕೈಗಾರಿಕೆಯ ಸಹಾಯ ಬೇಕಾಗುತ್ತದೆ. ಜೊತೆಗೆ ಕಲಿಯುವ ಸಾಧನಗಳು, ಪುಸ್ತಕಗಳು, ಕಲಿಸಲು ಗುರುಗಳು, ಶಾಲೆಗಳು, ಹೀಗೆ ಹೇಳುತ್ತಾ ಹೋದರೆ ನೂರಾರು ಪ್ರಯೋಜನಕ್ಕೆ ಬರುವ ಸೌಕರ್ಯ ಬೇಕಾಗುತ್ತದೆ. ಯಾವುದೇ ಕಲೆಯನ್ನು ನಮ್ಮ ಸಾಂಪ್ರದಾಯಕ ಅಂಗವಾಗಿ ಅಳವಡಿಸಿಕೊಳ್ಳಲು ಒಂದು ತಲೆಮಾರಿನಿಂದ ಮತ್ತೊಂದು ತಲೆಮಾರಿನವರಿಗೆ ಆ ಕಲೆಯ ಅಸ್ತಿತ್ವಕ್ಕೆ ಬೆಂಬಲ ದೊರಕಬೇಕು. ಇದೆಲ್ಲವನ್ನು ಪರಿಶೀಲಿಸಿ ನೋಡಿದಾಗ ಕಳೆದ 150 ವರ್ಷಗಳಲ್ಲಿ ದಕ್ಷಿಣ ಭಾರತದ, ಕರ್ನಾಟಕ ಸಂಗೀತದ ಯಾವುದೇ ತಾಣದಲ್ಲಿ ಪಿಟೀಲು ತಯಾರಿಸಿಲ್ಲ ಎನ್ನುವ ವಿಷಯ ಗೊತ್ತಾಗುತ್ತದೆ. ಇಡೀ ಭಾರತದಲ್ಲಿ ಪಿಟೀಲು ನಿರ್ಮಿಸುವ ಜಾಗವೆಂದರೆ ರಾಂಪುರ್ ಎನ್ನುವ ಉತ್ತರ ಪ್ರದೇಶದ ಒಂದು ಸಣ್ಣ ಹಳ್ಳಿ. ಬ್ರಿಟಿಷರ ಕಾಲದಲ್ಲಿ ಒಂದು ಮುಸಲ್ಮಾನ್ ಕುಟುಂಬ ಪ್ರಾರಂಭ ಮಾಡಿದ ಈ ಗ್ರಾಮಕೈಗಾರಿಕೆ, ಪಿಟೀಲು ತಯಾರಿಸುವ ನೈಪುಣ್ಯತೆ ಪಡೆದಿದೆ. ಬ್ರೆಜಿಲ್ ದೇಶದಿಂದ ಆಮದು ಮಾಡಿಸಿಕೊಂಡ ವಿಶೇಷ ಮೇಪಲ್ ಮರ, ಹಿಮಾಚಲ ಪ್ರದೇಶದಲ್ಲಿ ಸಿಗುವ ದೇವದಾರು ಮರ, ಮತ್ತೊಂದು ರೀತಿಯ ಕರಿಮರದ ದಿಮ್ಮಿಯನ್ನು ಉಪಯೋಗಿಸಿಕೊಂಡು ಪಿಟೀಲು ತಯಾರುಮಾಡುತ್ತಾರೆ.
ಅಂದರೆ, ನೂರಾರು ವರುಷಗಳ ನಂತರವೂ ದಕ್ಷಿಣ ಭಾರತದಲ್ಲಿ ಆಧಾರಸ್ತಂಭ ಇಲ್ಲದ ಪಿಟೀಲು ಕಲೆ ಸ್ಥಳೀಯವಾಗಿ ಪ್ರಭಾವ ಬೀರಿಲ್ಲ ಎಂದಾಯಿತು. ನಮ್ಮ ಸಾಂಪ್ರದಾಯಕ ದಿನಚರಿಯಲ್ಲಿ ಪಿಟೀಲು ಬೆರೆಯಲೇ ಇಲ್ಲ. ಈಗಲೂ ಪರ ದೇಶದ ಘಟಕಗಳೇ ಆಧಾರ ಮತ್ತು ಅಲ್ಲಿಂದಲೇ ಬರುವ ಸಂಗೀತ ಸ್ಫೂರ್ತಿ ಎಲ್ಲವು ಸೇರಿ ಪಿಟೀಲು ಕರ್ನಾಟಕ ಸಂಗೀತವನ್ನು ಅತ್ಯುಚ್ಛ್ರಾಯ ಸ್ಥಿತಿಯಿಂದ ಒಂದೆರೆಡು ದರ್ಜೆ ಕೆಳಗಿಳಿಸಿದೆ ಎಂದು ನಿರ್ಣಯ ಮಾಡಬಹುದು.

ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ