ಮಂಗಳವಾರ, ಜೂನ್ 18, 2019

ಇಂಗ್ಲಿಷ್ ಉಲ್ಲೇಖನಗಳ ಕನ್ನಡ ವ್ಯಾಖ್ಯಾನ


ಇಂಗ್ಲಿಷ್ ಉಲ್ಲೇಖನಗಳ ಕನ್ನಡ ವ್ಯಾಖ್ಯಾನ
ರವಿ ಗೋಪಾಲರಾವ್

ನೀವು ಹಿಂದಿನದನ್ನು ಬದಲಿಸಲು ಸಾಧ್ಯವಿಲ್ಲ. ಆದರೆ ಭವಿಷ್ಯದ ಚಿಂತನೆಯಲ್ಲಿ ವರ್ತಮಾನವನ್ನು ನಷ್ಟ ಮಾಡಿಕೊಳ್ಳುವ ಸಾಧ್ಯತೆ ಇದೆ.
--- ಅನಾಮಿಕ

ಯಾರು ನಿನ್ನ ಗತಕಾಲವನ್ನು ಅರ್ಥಮಾಡಿಕೊಂಡಿರುವರೋ, ನಿನ್ನ ಭವಿಷ್ಯದಲ್ಲಿ ನಂಬಿಕೆ ಇಟ್ಟಿರುವರೋ, ನಿನ್ನ ವರ್ತಮಾನದಲ್ಲಿ ನೀನಿರುವಂತೆಯೇ ಅಂಗೀಕರಿಸುವರೋ ಅವರೇ ನಿನ್ನ ಗೆಳೆಯರು.
--- ಅನಾಮಿಕ

ಎದೆಗಾರಿಕೆಯಲ್ಲಿ ಬೆಂಬೆತ್ತಿಹೋದಾಗ ತಾನಾಗಿಯೇ ನಿನ್ನ ಕನಸುಗಳೆಲ್ಲ ನನಸಾಗುವುದು.
--- ವಾಲ್ಟ್ ಡಿಸ್ನಿ

ನಿನ್ನ ಜೀವನದ ಪ್ರಶ್ನೆಗಳಿಗೆ ನೀನೇ ಉತ್ತರ, ನಿನ್ನ ಜೀವನದ ಸಮಸ್ಯಗಳಿಗೆ ನೀನೇ ಪರಿಹಾರ.
--- ಜೋ ಕಾರ್ಡರ್

ಕೋಪ ಮನಸ್ಸಿನ ಜ್ಯೋತಿಯನ್ನೇ ಆರಿಸಿಬಿಡುವುದು.
--- ಆರ್. ಜಿ. ಇಂಗ್ರೆಸಾಲ್

ನಿದ್ರೆಯಲ್ಲಿ ಕಂಡಿದ್ದು ಕನಸಲ್ಲ. ಯಾವುದು ನಿಮ್ಮನ್ನು ನಿದ್ದೆಮಾಡಲು ಬಿಡುವುದಿಲ್ಲವೋ ಅದು ಕನಸು.
--- ಅಬ್ದುಲ್ ಕಲಾಂ

ನೀ ಎಲ್ಲಿದ್ದರು ಕೈಲಾದ ಸಣ್ಣ ಕೆಲಸಗಳನ್ನೇ ಮಾಡು; ಅಂತಹ ಸಣ್ಣ ಕೆಲಸಗಳೇ ಒಟ್ಟುಗೂಡಿದಾಗ ಪ್ರಪಂಚವನ್ನು ಭಾವಪರವಶಗೊಳಿಸುವುದು.
--- ಆರ್ಕ್ಬಿಷಪ್ ಡೆಸ್ಮನ್ಡ್ ಟುಟು

ಸಂತೋಷದ ಒಳ ಗುಟ್ಟು ಇಷ್ಟೇ; ತಾನು ಬದುಕುವ ಇಚ್ಛೆ, ಪರರೂ ಬದುಕಲಿ ಎಂಬ ಸಮ್ಮತ ಮತ್ತು ತಾನು ಕರುಣೆಯಿಲ್ಲದ ಮನುಷ್ಯನಾದರೆ ಅದಕ್ಕಿಂತ ಅಕ್ಷಮ್ಯ ಅಪರಾಧ ಮತ್ತೊಂದಿಲ್ಲ ಎನ್ನುವ ಪ್ರಜ್ಞೆ.
--- ಗೆಲನ್ ಸ್ಟಾರ್ ರಾಸ್

ಕತ್ತಲು ಕತ್ತಲನ್ನು ಓಡಿಸಲು ಸಾಧ್ಯವಿಲ್ಲ; ಬೆಳಕು ಮಾತ್ರ ಅದನ್ನು ಓಡಿಸಬಲ್ಲದು. ದ್ವೇಷ ದ್ವೇಷವನ್ನು ಓಡಿಸಲು ಸಾಧ್ಯವಿಲ್ಲ; ಪ್ರೀತಿಯೊಂದೇ ಅದನ್ನು ಓಡಿಸಬಲ್ಲದು.
--- ಮಾರ್ಟಿನ್ ಲೂಥರ್ ಕಿಂಗ್

ಸ್ನೇಹ ಎಂದಿದ್ದರೂ ಮಧುರ ಜವಾಬ್ದಾರಿಯೇ ಹೊರತು ಸದವಕಾಶವಲ್ಲ.
--- ಖಲೀಲ್ ಗಿಬ್ರಾನ್

ಮನಸ್ಸಿನಲ್ಲೇ ಮಣ್ಣನ್ನು ತಿರುವಿಹಾಕಿ ಜಮೀನು ಉಳಲು ಸಾಧ್ಯವಿಲ್ಲ.
--- ಅನಾಮಿಕ

ಶ್ರಮ ಪಡದೆ ಯಶಸ್ಸು ಗಳಿಸಲು ಹವಣಿಸುವುದು, ಸಸಿ ನೆಡದೆ ಫಸಲು ಕೀಳಲು ಹೋದಂತೆ.
--- ಡೇವಿಡ್ ಬ್ಲಯ್

ಜೀವನ ಅತ್ಯಂತ್ಯ ಉಪಯೋಗಕ್ಕೆ ಬರುವುದು ಅದನ್ನು ಜೀವಕ್ಕಿಂತ ಹೆಚ್ಚುಕಾಲ ಉಳಿಯುವಂತೆ ವ್ಯಯಿಸಿದಾಗ ಮಾತ್ರ.
--- ವಿಲಿಯಮ್ ಜೇಮ್ಸ್

ಪ್ರತಿಧ್ವನಿಯಲ್ಲಿ ಯಾವ ಸ್ವಂತಿಕೆಯನ್ನೂ ನಿರೀಕ್ಷಿಸಬೇಡ.
-- ಅನಾಮಿಕ

ನೀನು ಹೇಳುವುದನ್ನು ನಾನು ಒಪ್ಪಿಕೊಳ್ಳದಿರಬಹುದು. ಆದರೆ ಅದನ್ನು ಹೇಳಲು ನಿನಗೆ ಇರುವ ಹಕ್ಕನ್ನು ನಾನು ಸಾವನ್ನಪ್ಪುವರೆಗೂ ಪ್ರತಿಪಾದಿಸುತ್ತೇನೆ.
-- ವಾಲ್ಟೇಯ್ರ್

ಯಾವ ಮನುಷ್ಯ ನಿರ್ಧಾರಕ್ಕೆ ಬರುವ ಮುನ್ನ ಎಲ್ಲದನ್ನು ಸ್ಪಷ್ಟವಾಗಿ ಕಾಣಲೇ ಬೇಕೆಂದು ಪಟ್ಟುಹಿಡಿಯುತ್ತಾನೋ, ಅವನು ಯಾವುದೇ ನಿರ್ಧಾರ ತೆಗೆದುಕೊಳ್ಳಲಾರ.
-- ಹೆನ್ರಿ ಫ್ರೆಡೆರಿಕ್ ಅಮಿಯೆಲ್, ಸ್ವಿಟ್ಜರ್ಲ್ಯಾನ್ಡ್ ನ ಒಬ್ಬ ಕವಿ

ಸದಾ ಸುಖವನ್ನು ಬೆಂಬೆತ್ತಿ ಹೋಗುವುದಕ್ಕಿಂತ ಆಗೊಮ್ಮೆ ಈಗೊಮ್ಮೆ ವಿರಾಮ ಕೊಟ್ಟು ಸುಖ ಪಡುವುದೇ ಮೇಲು.
-- ಗಿಲ್ಯಾಮೆ ಅಪೋಲಿಯನೈರ್

ನೀವು ಅದನ್ನು ಬಗ್ಗಿಸ ಬಹುದು ಮತ್ತು ತಿರುಚ ಬಹುದು … ಅದನ್ನು ನೀವು ದುರಪಯೋಗಿಸಬಹುದು ಮತ್ತು ಅಪವ್ಯಯ ಮಾಡಬಹುದು …. ಆದರೆ ದೇವರೂ ಕೂಡ ಸತ್ಯವನ್ನು ಬದಲಿಸಲಾರ.
-- ಮೈಕೆಲ್ ಲೆವಿ

ಅರ್ಧಕ್ಕಿಂತ ಹೆಚ್ಚಾಗಿ ಯಶಸ್ಸು ಗಳಿಸಿದ ಉದ್ಯಮಿಯನ್ನೂ ನಿಷ್ಫಲ ಉದ್ಯಮಿಯನ್ನೂ ಬೇರ್ಪಡಿಸುವುದು ಪ್ರಾಮಾಣಿಕ ದೃಢನಿಷ್ಠೆ ಮಾತ್ರ ಎಂದು ನನಗೆ ಮನವರಿಕೆ ಆಗಿದೆ.
-- ಸ್ಟೀವ್ ಜಾಬ್ಸ್

ನೀವು ಮುಳ್ಳುಗಳನ್ನು ಹರಡಿದರೆ, ಬರಿಗಾಲಲ್ಲಿ ಓಡಾಡಬಾರದು.
-- ಇಟಲಿ ದೇಶದ ಒಂದು ಗಾದೆ

ನಮ್ಮ ಬಳಿ ಏನು ಇದೆಯೋ ಅದರ ಬಗ್ಗೆ ಲಕ್ಷ್ಯಕೊಡುವುದಿಲ್ಲ, ಆದರೆ ಅದನ್ನು ಕಳೆದುಕೊಂಡಾಗ ನಾವು ಅಳುತ್ತೇವೆ.
-- ರಷಿಯಾದ ಒಂದು ನಾಣ್ಣುಡಿ

ಕಾನೂನನ್ನು ಜಾರಿಗೊಳಿಸದೆ ಇರುವುದಕ್ಕಿಂತ ಕಾನೂನು ಇಲ್ಲದಿರುವುದೇ ಮೇಲು.
-- ಇಟಲಿ ದೇಶದ ಒಂದು ನಾಣ್ಣುಡಿ

ಬೇರೆಯವರ ವ್ಯವಹಾರದಲ್ಲಿ ಎಲ್ಲರು ನ್ಯಾಯಾಧಿಪತಿಗಳೇ.
-- ಇಟಲಿ ದೇಶದ ಒಂದು ಗಾದೆ

ಬೇರೆಯವರಿಗೆ ಗೊತ್ತಾಗಬಾರದು ಎಂದಿದ್ದರೆ, ಅದನ್ನು ಮಾಡಬೇಡಿ.
-- ಚೀನಾ ದೇಶದ ಒಂದು ಗಾದೆ

ಶಿಕ್ಷಕರು ಬಾಗಿಲು ತೆಗೆಯುತ್ತಾರೆ; ನೀವಾಗೇ ಒಳಗೆ ಪ್ರವೇಶಿಸುತ್ತೀರಿ.
-- ಚೀನಾ ದೇಶದ ಒಂದು ಗಾದೆ

ಯಾರ ಜೊತೆ ನೀವು ಗಾಳಿ ಮಾತನಾಡುತ್ತಿರೋ ಅವರೇ ನಿಮ್ಮ ಬಗ್ಗೆ ಗಾಳಿ ಮಾತನ್ನಾಡುತ್ತಾರೆ.
-- ಐರಿಷ್ ಗಾದೆ

ಯಾರಿಗೆ ಆರೋಗ್ಯವಿದೆಯೋ ಅವರಿಗೆ ಭರವಸೆ ಇದೆ.  ಯಾರಿಗೆ ಭರವಸೆ ಇದೆಯೋ ಅವರಿಗೆ ಸರ್ವಸ್ವವೂ ಇದೆ. 
--- ಅರಬ್ ದೇಶದ ಒಂದು ಗಾದೆ

ಯಾವಾಗ ಪ್ರಪಂಚ “ಬಿಟ್ಟುಬಿಡು” ಎಂದು ಹೇಳುತ್ತದೆಯೋ, ಆಗ ಭರವಸೆ “ಮತ್ತೊಂದು ಬಾರಿ ಪ್ರಯತ್ನಿಸು” ಎಂದು ಪಿಸುಗುಟ್ಟುತ್ತದೆ.
--- ಅನಾಮಿಕ

ನೀನು ಅನುಮತಿ ಕೊಡದ ಹೊರತು, ಯಾರೂ ನಿನಗೆ ಮಾತ್ಸರ್ಯ, ಕೋಪ, ಪ್ರತೀಕಾರ ಅಥವಾ ಅತ್ಯಾಸೆ ಬರಿಸಲು ಸಾಧ್ಯವಿಲ್ಲ.
--- ನಪೋಲಿಯನ್ ಹಿಲ್

ಸುಯೋಗ ಬಂದಾಗ ಸಿದ್ಧವಾಗಿರು.  ಯಾವಾಗ ಸುಯೋಗ ಮತ್ತು ಸಿದ್ಧತೆ ಸಂದಿಸುತ್ತವೋ, ಅದೇ ಅದೃಷ್ಟ ಗಳಿಗೆ.
--- ರಾಯ್ ಡಿ. ಚಾಪಿನ್ ಜೂನಿಯರ್

ಚಂದ್ರನನ್ನು ಗುರಿಮುಟ್ಟಲು ಪ್ರಯತ್ನಿಸು, ಒಂದುವೇಳೆ ಗುರಿ ತಪ್ಪಿದರೆ ತಾರೆಗಳ ಮಧ್ಯದಲ್ಲಿ ಬೀಳುವುಯಷ್ಟೇ.
--- ಲೆಸ್ ಬ್ರೌನ್

ಕ್ಷಮಾಶೀಲತೆ ಹಿಂದಿನದನ್ನು ಬದಲಿಸುವುದಿಲ್ಲ, ಆದರೆ ಮುಂಬರುವ ಕಾಲವನ್ನು ವಿಶಾಲಗೊಳಿಸುತ್ತದೆ.
--- ಪೌಲ್ ಬೊಯೇಸಿ

ಕ್ಷಮಾಶೀಲತೆಯೇ ಅತಿ ಮಧುರವಾದ ಪ್ರತೀಕಾರ.
--- ಐಸ್ಸಾಕ್ ಫ್ರೆಡ್ಮನ್

ಕೆಲವರು ಯಶಸ್ಸನ್ನು ಕನಸುಕಾಣುತ್ತಾರೆ…. ಕೆಲವರು ಎಚ್ಛೆತ್ತು ಕಠಿಣ ಕೆಲಸ ಮಾಡಲು ತೊಡಗುತ್ತಾರೆ. 
--- ಅಜ್ಞಾತ

ನಮ್ಮನ್ನು ಸಂತೋಷಪಡಿಸುವ ಜನರನ್ನು ಉಪಕಾರಸ್ಮರಣೆಯಲಿ ಸದಾ ನೆನೆಯೋಣ.
--- ಮಾರ್ಸೆಲ್ ಪ್ರೌಸ್ಟ್

ನೂರು ಮಣ ಭಾರದ ಚಿಂತೆ ಒಂದು ಚಿಟಿಕೆ ಸಾಲವನು ತೀರಿಸುವುದಿಲ್ಲ.
--- ಜಾರ್ಜ್ ಹರ್ಬರ್ಟ್

ಅಪಜಯ ಸಹಜವಾಗಿಯೇ ಮತ್ತೊಮ್ಮೆ ಪ್ರಾರಂಭಿಸಲು ಸದವಕಾಶ ಕೊಡುವುದು, ಆದರೆ ಈ ಬಾರಿ ಹೆಚ್ಚು ಬುದ್ಧಿವಂತಿಕೆಯಲಿ.
--- ಹೆನ್ರಿ ಫೋರ್ಡ್

ಶತ್ರುಗಳನ್ನು ಗೆಲುವವನಿಗಿಂತ ಯಾರು ತನ್ನ ಉತ್ಕಟ ಬಯಕೆಗಳನ್ನು ಅಧೀನಪಡಿಸಿಕೊಳ್ಳುತ್ತಾನೋ ಅವನನ್ನು ನಾನು ಕೆಚ್ಛೆದೆಯ ವೀರನೆಂದು ಪರಿಗಣಿಸುತ್ತೇನೆ, ಏಕೆಂದರೆ ತನ್ನನ್ನು ತಾನು ಗೆಲುವುದು ಎಲ್ಲದಕ್ಕಿಂತ ಕಠಿಣ. 
--- ಅರಿಸ್ಟಾಟಲ್

ನಿಮ್ಮ ಮನಸ್ಸಿನ ಮೂಲೆಯೊಂದನ್ನು ಸ್ವಚ್ಛಗೊಳಿಸಿ ನೋಡಿ, ತ್ವರಿತದಲ್ಲೇ ಆ ಜಾಗವನ್ನು ಕ್ರಿಯಾಶೀಲತೆ ತುಂಬಿಬಿಡುವುದು.
--- ಡೀ ಹಾಕ್

ಒಬ್ಬ ಮನುಷ್ಯನ ಹೃದಯ ಮತ್ತು ಮನಸ್ಸನ್ನು ಅರ್ಥ ಮಾಡಿಕೊಳ್ಳಲು, ಹಿಂದೆ ಅವನು ಆಗಲೇ ಏನು ಸಾಧಿಸಿದ್ದಾನೆ ಎಂದು ತಿಳಿದುಕೊಳ್ಳುವುದಕ್ಕಿಂತ ಅವನು ಮುಂದೆ ಏನಾಗಲು ಬಯಸುತ್ತಾನೆ ಎನ್ನುವುದನ್ನು ತಿಳಿದುಕೊಳ್ಳುವುದು ಒಳಿತು.
--- ಖಲೀಲ್ ಗಿಬ್ರಾನ್

ಪ್ರಾಮಾಣಿಕತೆ ಇರದ ಹೊರತು ಗೌರವ ಇರುವುದೇ?
--- ಸಿಸೆರೊ

ಗೆಳೆಯ ಅಂದರೆ ಏನು?  ಎರಡು ದೇಹಗಳಲ್ಲಿ ವಾಸಿಸುವ ಒಂದೇ ಆತ್ಮ. 
--- ಅರಿಸ್ಟಾಟಲ್

ಶಿಸ್ತಿಲ್ಲದೆ ಬದುಕುವ ಮನುಷ್ಯ ಮಾನ್ಯತೆ ಪಡೆಯೆದೆ ಸಾಯುವವನು.
--- ಐಸ್ಲ್ಯಾನ್ಡ್ ದೇಶದ ಗಾದೆ

ಆಶಾವಾದಿ ಎಲ್ಲ ಅನಾಹುತದಲ್ಲೂ ಸುಸಂಧಿಯನ್ನೇ ಕಾಣುವನು, ಆದರೆ ನಿರಾಶಾವಾದಿ ಎಲ್ಲ ಸುಸಂಧಿಯಲ್ಲೂ ಅನಾಹುತವನ್ನೇ ಕಾಣುವನು.
--- ವಿಂಸ್ಟನ್ ಚರ್ಚಿಲ್

ಹಣವನ್ನು ದುಂದು ವೆಚ್ಚ ಮಾಡಿದರೆ ಕಳೆದುಕೊಳ್ಳುವುದು ಹಣ ಮಾತ್ರ, ಆದರೆ ಕಾಲವನ್ನು ವ್ಯರ್ಥ ಮಾಡಿದರೆ ನಿಮ್ಮ ಜೀವನದ ಒಂದು ಭಾಗವನ್ನೇ ಕಳೆದುಕೊಂಡಂತೆ.
--- ಮೈಕಲ್ ಲಿಬಿಯೋಫ್

ಜೀವನದಲ್ಲಿ ಎರಡು ಪ್ರಧಾನ ಆಯ್ಕೆಗಳು ಮಾತ್ರ ದೊರಕುತ್ತವೆ; ಕರಾರುಗಳನ್ನು ಇರುವಂತೆ ಒಪ್ಪಿಕೊಳ್ಳುವುದು, ಇಲ್ಲ ಅವುಗಳನ್ನು ಬದಲಾಯಿಸುವ ಜವಾಬ್ದಾರಿಯನ್ನು ಒಪ್ಪಿಕೊಳ್ಳುವುದು.
--- ಡೆನಿಸ್ ವೈಟ್ಲಿ

ಅಪಜಯದ ಋತುವೇ ವಿಜಯದ ಬೀಜಗಳನ್ನು ಬಿತ್ತಲು ಅತ್ತ್ಯತ್ತಮ ಋತು.
--- ಪರಮಹಂಸ ಯೋಗಾನಂದ

ಯಶಸ್ಸುಗಳಿಸಿದ ಮನುಷ್ಯನಾಗಲು ಹವಣಿಸಬೇಡ, ಅದರ ಬದಲು ಮೌಲ್ಯಕ್ಕೆ ಮಣಿಯುವ ಮನುಷ್ಯನಾಗು. 
--- ಅಲ್ಬರ್ಟ್ ಐನ್ಸ್ಟನ್

ನಿನ್ನಲ್ಲಿರುವ ಪ್ರತಿಭೆ ಆ ದೇವರು ಕೊಟ್ಟ ಕಾಣಿಕೆ.  ಅದನ್ನು ಹೇಗೆ ಬಳಸುವೆ ಎನ್ನುವುದು ನೀನು ದೇವರಿಗೆ ಮಾಡಿದ ಮರುಕಾಣಿಕೆ.
--- ಲಿಯೋ ಬುಸ್ಕಾಗ್ಲಿಯ

ಸಂಕಟದಿಂದ ಪಾರಾಗಲು ದೇವರಲ್ಲಿ ಪ್ರಾರ್ಥಿಸಬೇಡ.  ನಿನ್ನ ಉದ್ವಿಗ್ನತೆಯನ್ನು ಶಮನಗೊಳಿಸಲು ಪ್ರಾರ್ಥಿಸಬೇಡ.  ಪ್ರತಿಯೊಂದು ಬಾರಿಯೂ ದೇವರ ಸಂಕಲ್ಪಶಕ್ತಿಯನ್ನು ಪೂರೈಸಲು ಪ್ರಾರ್ಥಿಸು.  ಅದಕ್ಕಿಂತ ಬೇರೆ ಯಾವ ಪ್ರಾರ್ಥನೆಯೂ ಮಿಗಿಲಿಲ್ಲ. 
--- ಸಾಮ್ಯುಯೆಲ್ ಶೂಮೇಕರ್

ಸಹಾಯ ಮಾಡಲು ಹೃದಯವಿರುವ ಮನುಷ್ಯನಿಗೆ ಮಾತ್ರ ಪರರನ್ನು ನಿಂದಿಸುವ ಅಧಿಕಾರವಿರುವುದು.
--- ಅಬ್ರಹಾಂ ಲಿಂಕನ್

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ