ಗುರುವಾರ, ಜನವರಿ 30, 2020

ಕನ್ನಡದಲ್ಲಿ ಗಾಂಧಿ ಉಲ್ಲೇಖಗಳು

ಕನ್ನಡದಲ್ಲಿ ಗಾಂಧಿ ಉಲ್ಲೇಖಗಳು ಹೆಚ್ಚಾಗಿ ಕಾಣಿಸುವುದಿಲ್ಲ.  ಹುತಾತ್ಮರ ದಿನದ ಸಲುವಾಗಿ ಅವರ ಉಲ್ಲೇಖಗಳನ್ನು ಕನ್ನಡಕ್ಕೆ  ಅನುವಾದಿಸಿ ಪೋಸ್ಟ್ ಮಾಡಿದ್ದೇನೆ.  ನೀವೂ ಸ್ನೇಹಿತರೊಡನೆ ಹಂಚಿಕೊಳ್ಳಿ. 








ಸಂತೋಷ ಅಂದರೆ ಯಾವಾಗ ನೀವು ಮಾಡುವ ಚಿಂತನೆ, ನೀವು ಆಡುವ ಮಾತು ಮತ್ತು ನೀವು ಮಾಡುವ ಕೆಲಸ ಎಲ್ಲವೂ ಹೊಂದಾಣಿಕೆಯಲ್ಲಿ ಇದ್ದಾಗ ಮಾತ್ರ ಸಾಧ್ಯ.
-- ಮಹಾತ್ಮ ಗಾಂಧಿ   
ಪರರು ತಮ್ಮ ಕೊಳಕಾದ ಕಾಲುಗಳಿಂದ ನನ್ನ ಮನಸ್ಸಿನೊಳಗೆ ನೆಡೆಯಲು ಬಿಡುವುದಿಲ್ಲ.
-- ಮಹಾತ್ಮ ಗಾಂಧಿ
ನನ್ನ ಅನುಮತಿಯಿಲ್ಲದೆ ಯಾರೂ ನನ್ನನ್ನು ನೋಯಿಸಲು ಸಾಧ್ಯವಿಲ್ಲ. 
-- ಮಹಾತ್ಮ ಗಾಂಧಿ
ದುರ್ಬಲರು ಎಂದೂ ಕ್ಷಮಿಸುವುದಿಲ್ಲ.  ಕ್ಷಮಾಶೀಲತೆ ಬಲಿಶಾಲಿಗಳ ವಿಶೇಷ ಗುಣ.
-- ಮಹಾತ್ಮ ಗಾಂಧಿ 
ನಾಳೆಯೇ ಮೃತನಾಗುವವನಂತೆ ಜೀವಿಸು.  ಎಂದೆಂದೂ ಬದುಕುವವನಂತೆ ಜ್ಞಾನ ಸಂಪಾದಿಸು.
-- ಮಹಾತ್ಮ ಗಾಂಧಿ  
ಹೇಡಿಗಳು ಪ್ರೀತಿ ತೋರಿಸಲು ಅಸಮರ್ಥರು; ಅದು ಧೀರರ ವಿಶೇಷ ಹಕ್ಕು.
-- ಮಹಾತ್ಮ ಗಾಂಧಿ  
ಮನುಷ್ಯ ತನ್ನ ಆಲೋಚನೆಗಳ ಖೈದಿ.  ಏನು ಆಲೋಚಿಸುತ್ತಾನೋ ಅದೇ ಆಗಿಬಿಡುತ್ತಾನೆ.
-- ಮಹಾತ್ಮ ಗಾಂಧಿ
ಒಂದು ಚಿಟಿಕೆ ಅಭ್ಯಾಸ ಸಾವಿರ ಪದಗಳಿಗೆ ಸಮ.
-- ಮಹಾತ್ಮ ಗಾಂಧಿ 
ತಪ್ಪು ಮಾಡುವ ಸ್ವಾತಂತ್ರ್ಯವನ್ನು ಅವಕಾಶ ಮಾಡಿಕೊಡದ ಸ್ವಾತಂತ್ರ್ಯ, ಉಪಯೋಗಕ್ಕೆ ಬಾರದ ಸ್ವಾತಂತ್ರ್ಯ.
-- ಮಹಾತ್ಮ ಗಾಂಧಿ   
ಮೃದುವಾಗಿಯೇ ನೀವು ಪ್ರಪಂಚವನ್ನು ಅಲುಗಾಡಿಸಬಹುದು. 
-- ಮಹಾತ್ಮ ಗಾಂಧಿ




ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ