ಮಂಗಳವಾರ, ಮಾರ್ಚ್ 24, 2020

ಕನ್ನಡದಲ್ಲಿ ಮೂರು ಇ-ಪುಸ್ತಕಗಳ ಪ್ರಕಟಣೆ.

ಕನ್ನಡದಲ್ಲಿ ಮೂರು ಇ-ಪುಸ್ತಕಗಳ ಪ್ರಕಟಣೆ.
1. ಕನ್ನಡದ ಅತ್ತ್ಯುತ್ತಮ ಸಣ್ಣ ಕಥೆಗಳು 
2. ಕನ್ನಡ ಗಾದೆಗಳು 
3, ಇಂಗ್ಲಿಷ್ ಉಲ್ಲೇಖಗಳು 

ಕನ್ನಡದ ಅತ್ತ್ಯತ್ತಮ ಸಣ್ಣ ಕಥೆಗಳು 
೧೯೫೮ ರಲ್ಲಿ ಸಾಹಿತ್ಯಪರಿಷತ್ತು ಪ್ರಕಟಿಸಿದ ಪುಸ್ತಕ
ebook published from public domain: Dec 2019
Publisher: RG Kannada e-Publisher, USA



ಪ್ರಿಂಟ್ ಮಾಧ್ಯಮದಲ್ಲಿ ಸಿಗದ ಹಳೇ ಕನ್ನಡ ಪುಸ್ತಕಗಳನ್ನು ಡಿಜಿಟಲ್ ಮಾಧ್ಯಮದಲ್ಲಿ ಓದಲು ಬಯಸುವ ಪುಸ್ತಕ ಪ್ರೇಮಿಗಳಿಗೆ ಇದೊಂದು ಸುಂದರ ಪುಸ್ತಕ. ನನ್ನ ಬಳಿಯಿದ್ದ ಪಿಡಿಎಫ್ ಕಾಪಿಯನ್ನು ಫ್ರಿ ಡಿಜಿಟಲ್ ಪುಸ್ತಕವಾಗಿ ನಿಮ್ಮ ಜೊತೆ ಹಂಚಿಕೊಡಿದ್ದೇನೆ. ಕ್ರಿಸ್ಮಸ್ ರಜಾ ದಿನಗಳಲ್ಲಿ ಓದಿ ಬೇರೆಯವರೊಡನೆ ಕೂಡ ಹಂಚಿಕೊಂಡು ಆನಂದಿಸಿ.

_______________________ ಕನ್ನಡ ಗಾದೆಗಳು 
ಶಿವಪ್ಪ ಯಕ್ಕರನಾಳ ಮತ್ತು ರವಿ ಗೋಪಾಲರಾವ್ 
ebook published: Feb 2020
Publisher: RG Kannada e-Publisher, USA



A collection of over 1700 Kannada proverbs with explanations in English for selected proverbs. These rare proverbs’ literal meanings, English equivalents and proper usage are given. After several years of gap, this collection will bridge Kannada and English readers’ quest to understand proverbs in both languages.    

ಈ ಪುಸ್ತಕದಲ್ಲಿ ಸುಮಾರು 1700ರಕ್ಕೂ ಹೆಚ್ಚು ಕನ್ನಡ ಗಾದೆಗಳನ್ನು ಒಟ್ಟುಗೂಡಿಸಲಾಗಿದೆ. ಪುಸ್ತಕದ ಕೊನೆಯಲ್ಲಿ ಆಯ್ದ ಗಾದೆಗಳಿಗೆ ಇಂಗ್ಲಿಷ್ ಭಾಷೆಯಲ್ಲಿ ವಿವರಣೆ ಕೊಡಲಾಗಿದೆ.  ಈ ವಿವರಣೆಯಲ್ಲಿ ಗಾದೆಯ ಇಂಗ್ಲಿಷ್ ನಿಕಟ ಅರ್ಥವನ್ನು ಕೊಡುವುದರ ಜೊತೆಗೆ ಕೆಲವು ಕಡೆ ಈ ಗಾದೆಗಳ ಸಮಯೋಚಿತ ಉಪಯೋಗದ ಬಗ್ಗೆ ಕೂಡ ವಿವರಣೆ ಕೊಡಲು ಪ್ರಯತ್ನಿಸಿಲಾಗಿದೆ.  ಬಹಳ ವರ್ಷಗಳ ನಂತರ ಕನ್ನಡ ಮತ್ತು ಇಂಗ್ಲಿಷ್ ಭಾಷಾ ಪ್ರೇಮಿಗಳಿಗೆ ಸಾಕಷ್ಟು ಅಪರೂಪದ ಗಾದೆಗಳ ಕೊಡುಗೆ ಈ ಪುಸ್ತಕ.  

____________________
ಇಂಗ್ಲಿಷ್ ಉಲ್ಲೇಖಗಳು 
ರವಿ ಗೋಪಾಲರಾವ್ 
ebook published: Feb 2020
Publisher: RG Kannada e-Publisher, USA.



ಇಂಗ್ಲೀಷಿನಲ್ಲಿ ಸಿಗುವ ಸಾವಿರಾರು ಉಲ್ಲೇಖಗಳಿಗೆ ಹೋಲಿಸಿದರೆ ಒಂದೋ ಎರಡೋ ಕನ್ನಡದಲ್ಲಿ ನಮಗೆ ಲಭ್ಯ ಅಷ್ಟೇ.  ಆ ಕೊರತೆಯನ್ನು ನೀಗಲೆಂದೇ ಬರೆದ ಒಂದು ಕೈಪಿಡಿ ಪುಸ್ತಕವಿದು.  ಇಂಗ್ಲೀಷನಿಂದ ಕನ್ನಡಕ್ಕೆ ಅನುವಾದ ಮಾಡಿದ ಉಲ್ಲೇಖಗಳೆ ಈ ಪುಸ್ತಕದ ಆಧಾರ ಮತ್ತು ಸ್ಫೂರ್ತಿ. ಪ್ರಾರಂಭದ ಹೆಜ್ಜೆ.  ನಾನು ಅನುವಾದಿಸಿದ ನೂರು ಉಲ್ಲೇಖಗಳ ಒಂದು ಪುಟ್ಟ ರೆಫೆರೆನ್ಸ್ ಪುಸ್ತಕ.  ಫ್ರಿ ಡಿಜಿಟಲ್ ಮಾಧ್ಯಮದಲ್ಲಿ ನಿಮ್ಮೊಡನೆ ಹಂಚಿಕೊಳ್ಳುತ್ತಿದ್ದೇನೆ. ಲೇಖಕ, ಸಂಪಾದಕ, ವಿನ್ಯಾಸಕ, ಛಾಯಾಚಿತ್ರಕಾರ, ಡಿಜಿಟಲ್ ಪ್ರಕಾಶಕನ ಎಲ್ಲ ಪಾತ್ರಗಳು ನನ್ನದೇ ಏಕಾಭಿನಯವಾದ್ದರಿಂದ ತಪ್ಪುಗಳಿದ್ದಲ್ಲಿ ನಿಮ್ಮ ಕ್ಷಮೆಯಿರಲಿ.
ರವಿ ಗೋಪಾಲರಾವ್ 
______________________
The English language is rich in motivational quotes that not only offer inspiration to rejuvenate the mind and body but also offer us ways to overcome obstacles. When compared to thousands of English quotes, there are very few in Kannada.  This book is an attempt to fill that void.  Quotes mostly translated from English to Kannada are the basis and inspiration behind this reference handbook. First step towards bringing the wisdom and motivational quotes from such luminaries as Aristotle, Buddha, Mahatma Gandhi, Martin Luther King -- just to name a few -- for  Kannada readers to appreciate in their own language.


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ