ಮತ್ತೆ ಬಾರದೇಕೋ ಬಾಲ್ಯ
ಚಂದ್ರಮನ ನಸು ಬೆಳಕಲಿ
ಹಿಡಿಯಲಾಗದ ಪುಟ್ಟ ಕೈಯಲಿ
ಅಮ್ಮನಿತ್ತ ದೊಡ್ಡ ಕೈತುತ್ತಿನ
ಮೊಸರನ್ನದ ರುಚಿ
ಮೊಣಕೈವರೆಗೂ ಸೋರಿ
ಚಪ್ಪರಿಸಿದ ಸಿಹಿಯೂಟದ ಸವಿ
ಮತ್ತೆ ಲಭಿಸಲಿಲ್ಲವೇಕೋ
ಬೇಡೆಂದರೂ ದಿನವಿಡೀ
ಓಣಿಯಲಿ ಆಡಿದ ಗೋಲಿಯಾಟ
ಸೋತು ನಟಿಸಿದ ದೊಂಬರಾಟ
ಕಟ್ಟಿಗೆಯ ಕದ್ದು ಸುಟ್ಟ ಕಾಮಣ್ಣನಾಟ
ಇದ್ದಲಿನಲಿ ಬರೆದು ಕೊರೆದ
ಗೋಡೆಯ ಮೇಲಿನ ವಿಕೆಟ್
ವಿಕೆಟ್ ಕೀಪರ್ ಇಲ್ಲದೆ ಆಡಿದ ಕ್ರಿಕೆಟ್
ಗಾಜಿನ ಕಿಟಕಿಯ ಠಳ್ ಅಬ್ಬರ
ಮತ್ತೆ ಕೇಳಿಸಲಿಲ್ಲವೇಕೋ
ಶಾರದಮ್ಮನ ಮನೆಯ
ಆಳೆತ್ತರದ ಗೋಡೆ
ಎವರೆಸ್ಟ್ ಶಿಖರವನೇ ಹೋಲುತ್ತಿತ್ತು
ನೆರೆಮನೆಗೆ ಜಿಗಿದು ಧುಮುಕಿ ಓಡಿ
ಕದ್ದು ಕಿತ್ತದ್ದು ನಾಲ್ಕೇ ನಾಕು
ಸ್ವಾದಿಷ್ಟ ಮಾವಿನ ಹಣ್ಣು
ಕೆನ್ನೆಗೆ ಬಿದ್ದದ್ದೂ ನಾಲ್ಕೇ ನಾಕು
ಕೈಬೆರಳ ಗುರುತು
ಕೊಂಡು ತಿಂದರೂ ಮಾಗಿದರುಚಿ
ಮತ್ತೆ ಸವಿಯಲಿಲ್ಲವೇಕೋ
ಸೀಳಿ ತೆಂಗಿನಗರಿಯ
ಬಿಲ್ಲುಬಾಣವನೇ ಹೆದೆಗೇರಿಸಿ
ಬಾಲಂಗೋಚಿಯನು ಕಟ್ಟಿ
ಮಾಡಿದ ಬಣ್ಣದ ಗಾಳಿಪಟ
ಲಾಗವನೇ ಹೊಡೆದರೂ
ಮೋಡವ ತಲುಪಿತೆಂಬ
ಹೆಮ್ಮೆಯ ಸಾಧನೆ
ಮತ್ತೆ ಗಳಿಸಲಿಲ್ಲವೇಕೋ
ಚಂದ್ರಮನ ನಸು ಬೆಳಕಲಿ
ಹಿಡಿಯಲಾಗದ ಪುಟ್ಟ ಕೈಯಲಿ
ಅಮ್ಮನಿತ್ತ ದೊಡ್ಡ ಕೈತುತ್ತಿನ
ಮೊಸರನ್ನದ ರುಚಿ
ಮೊಣಕೈವರೆಗೂ ಸೋರಿ
ಚಪ್ಪರಿಸಿದ ಸಿಹಿಯೂಟದ ಸವಿ
ಮತ್ತೆ ಲಭಿಸಲಿಲ್ಲವೇಕೋ
ಬೇಡೆಂದರೂ ದಿನವಿಡೀ
ಓಣಿಯಲಿ ಆಡಿದ ಗೋಲಿಯಾಟ
ಸೋತು ನಟಿಸಿದ ದೊಂಬರಾಟ
ಕಟ್ಟಿಗೆಯ ಕದ್ದು ಸುಟ್ಟ ಕಾಮಣ್ಣನಾಟ
ಇದ್ದಲಿನಲಿ ಬರೆದು ಕೊರೆದ
ಗೋಡೆಯ ಮೇಲಿನ ವಿಕೆಟ್
ವಿಕೆಟ್ ಕೀಪರ್ ಇಲ್ಲದೆ ಆಡಿದ ಕ್ರಿಕೆಟ್
ಗಾಜಿನ ಕಿಟಕಿಯ ಠಳ್ ಅಬ್ಬರ
ಮತ್ತೆ ಕೇಳಿಸಲಿಲ್ಲವೇಕೋ
ಶಾರದಮ್ಮನ ಮನೆಯ
ಆಳೆತ್ತರದ ಗೋಡೆ
ಎವರೆಸ್ಟ್ ಶಿಖರವನೇ ಹೋಲುತ್ತಿತ್ತು
ನೆರೆಮನೆಗೆ ಜಿಗಿದು ಧುಮುಕಿ ಓಡಿ
ಕದ್ದು ಕಿತ್ತದ್ದು ನಾಲ್ಕೇ ನಾಕು
ಸ್ವಾದಿಷ್ಟ ಮಾವಿನ ಹಣ್ಣು
ಕೆನ್ನೆಗೆ ಬಿದ್ದದ್ದೂ ನಾಲ್ಕೇ ನಾಕು
ಕೈಬೆರಳ ಗುರುತು
ಕೊಂಡು ತಿಂದರೂ ಮಾಗಿದರುಚಿ
ಮತ್ತೆ ಸವಿಯಲಿಲ್ಲವೇಕೋ
ಸೀಳಿ ತೆಂಗಿನಗರಿಯ
ಬಿಲ್ಲುಬಾಣವನೇ ಹೆದೆಗೇರಿಸಿ
ಬಾಲಂಗೋಚಿಯನು ಕಟ್ಟಿ
ಮಾಡಿದ ಬಣ್ಣದ ಗಾಳಿಪಟ
ಲಾಗವನೇ ಹೊಡೆದರೂ
ಮೋಡವ ತಲುಪಿತೆಂಬ
ಹೆಮ್ಮೆಯ ಸಾಧನೆ
ಮತ್ತೆ ಗಳಿಸಲಿಲ್ಲವೇಕೋ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ