ಮಂಗಳವಾರ, ಏಪ್ರಿಲ್ 7, 2020

ಆಗಿನ ದುರ್ಯೋಧನ ಮತ್ತು ಈಗಿನ ಟ್ರಂಪ್

ಗಿನ ದುರ್ಯೋಧನ ಮತ್ತು ಈಗಿನ ಟ್ರಂಪ್

ಮಹಾಭಾರತ ಓದುತ್ತಾ ಇದ್ದೆ.  ಡಾ. ನರೇಂದ್ರ ಶರ್ಮ ಅವರ ‘ಶ್ರೀಮನ್ಮಹಾಭಾರತ’ ಎನ್ನುವ ಕನ್ನಡ ಪುಸ್ತಕ. ವನಪರ್ವದ ಆರಂಭದ ಭಾಗ.  ಪಾಂಡವರು ಜೂಜಿನಲ್ಲಿ ಎಲ್ಲ ಸೋತು ಹನ್ನೆರಡುವರ್ಷ ಕಾಡಿನಲ್ಲಿ ಕಳೆಯಬೇಕಾದ ಸನ್ನಿವೇಶ. ಹಸ್ತಿನಾಪುರದ ಜನಸಾಮಾನ್ಯರು ದುಃಖಿತರಾಗಿದ್ದಾರೆ.  ಆದರೆ ಅವರ ಸಂಭಾಷಣೆ ಬರಲಿರುವ ದುರ್ಯೋಧನ-ಕರ್ಣ-ಶಕುನಿ-ದುಃಶಾಸನರ ರಾಜ್ಯಬಾರದಲ್ಲಿ ಮುಂದೇನು ಕಾದಿದೆಯೋ ಎನ್ನುವ ಭೀತಿಯಲ್ಲಿ ಹೀಗೆ ಮುಂದುವರಿಯುತ್ತೆ:

ದುರ್ಯೋಧನೋ ಗುರುದ್ವೇಷೀ ತ್ಯಕ್ತಾಚಾರಸುಹೃಜ್ಜನಃ  ।
ಅರ್ಥಲುಬ್ಧೋsಭಿಮಾನೀ ಚ ನೀಚಹ್ಹ ಪ್ರಕೃತಿನಿಗ್ರುಣಃ ।।

ದುರ್ಯೋಧನನು ಗುರುಜನರನ್ನೇ ದ್ವೇಷಿಸುವವನು.  ಅವನ ಗೆಳೆಯರೂ ಸದಾಚಾರವಿಹೀನರು. ದುರ್ಯೋಧನನು ಯಾವಾಗಲೂ ಅರ್ಥಾಪೇಕ್ಷಿಯು. ದುರಭಮಾನಿಯು. ನೀಚಕಾರ್ಯದಲ್ಲೇ ಹೆಚ್ಚು ಆಸಕ್ತಿ ಉಳ್ಳವನು. ಸ್ವಭಾಹತಹ ನಿರ್ದಯನು. ಇಂತಹವನು ರಾಜ್ಯಪಾಲನಾದರೆ ನಿಶ್ಚಯವಾಗಿಯೂ ಈ ಪ್ರಪಂಚವೇ ಹಾಳಾಗುತ್ತದೆ. (ಡಾ. ನರೇಂದ್ರ   ಶರ್ಮ ಅವರ ಶ್ರೀಮನ್ಮಹಾಭಾರತ ಪುಸ್ತಕದಿಂದ ಇರುವ ಹಾಗೆಯೇ ಪ್ರತಿಮಾಡಿದ್ದೇನೆ)

ಮಹಾಭಾರತ ಈಗಿನ ಕಾಲಕ್ಕೂ ಅನ್ವಯಿಸುವ ಕತೆ ಎನ್ನುವುದಕ್ಕೆ ಮೇಲಿನ ಸಾಲುಗಳಲ್ಲಿ, ನಾವು ಹಸ್ತಿನಾಪುರದ ಪ್ರಜೆಗಳಂತೆ ನಮ್ಮದೇಶದ ಅಧ್ಯಕ್ಷನ ಬಗ್ಗೆ ಮಾತನಾಡಿಕೊಳ್ಳುವುದು ಇದೆ ರೀತಿಯಲ್ಲವೇ?  ದುರ್ಯೋಧನನ ಬದಲು ಅಧ್ಯಕ್ಷನ ಹೆಸರು ಸೇರಿಸಿದರೆ ಎಲ್ಲವೂ ಅಕ್ಷರಸಹ ನಿಜ ಅನಿಸುವುದು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ