ಒಮ್ಮೊಮ್ಮೆ
ಹಿಂದಿ ಚಿತ್ರದ ಒಂದು ಹಾಡು
ಅನುವಾದ: ರವಿ ಗೋಪಾಲರಾವ್
ಸಿಗುವುದು ಜೀವನದಲಿ
ಪ್ರೀತಿ ಒಮ್ಮೊಮ್ಮೆ
ಆಗುವುದು ಹೃದಯದ ಮೇಲೆ
ಅನಿವಾರ್ಯತೆ ಒಮ್ಮೊಮ್ಮೆ
ನಾಚಿ ಮುಖ ತಿರುಗಸದಿರು
ಕಣ್ಣಿನ ಪ್ರಶ್ನೆಗಳಿಗೆ
ತಂದು ನಿಲ್ಲಿಸುವುದು ಆ ದಾರಿ
ವಿಧಿಲಿಖಿತ ಒಮ್ಮೊಮ್ಮೆ
ಒಂಟಿತನ ಕಳೆಯಲಾರೆ
ಯವ್ವನದ ದಾರಿಯಲಿ
ಆವಿಷ್ಕರಿಸುವುದು ಯಾರದೋ
ಅವಶ್ಯಕತೆ ಒಮ್ಮೊಮ್ಮೆ
ಮತ್ತೊಮ್ಮೆ ಕಳೆದು ಹೋಗೆವು ನಾವು
ಪ್ರಪಂಚದ ಜನಜಂಗುಳಿಯಲಿ
ಸಿಗುವುದು ಹತ್ತಿರ ಬರುವ
ಕಾಲಾವಕಾಶ ಒಮ್ಮೊಮ್ಮೆ
ಟಿಪ್ಪಣಿ: ಒಲ್ಲದ ಪ್ರಿಯತಮನಿಗೆ ಹೆಣ್ಣು ತನ್ನ ಭಾವನೆಗಳನ್ನು ವ್ಯಕ್ತಪಡಿಸುವ ಕವಿತೆಗಳು ಅನೇಕ. ಅಂತಹ ಕವಿತೆಗಳಲ್ಲಿ ಇದು ಬಹಳ ಉತ್ತಮವಾದದ್ದು ಎಂದು ನನ್ನ ಅನಿಸಿಕೆ. ಹಿಂದಿ ಚಿತ್ರ ರಂಗದ ಸಾಹಿತಿ ಸಾಹಿರ್ ಲುಧ್ಯಾನ್ವಿ ಬರೆದಿರುವ ಈ ಕವಿತೆಯನ್ನು ಕನ್ನಡಕ್ಕೆ ಅನುವಾದಿಸಿದ್ದೇನೆ. ಹಿಂದಿಯಷ್ಟೇ ಸರಳವಾದ ಪದಗಳನ್ನು ಉಪಯೋಗಿಸಿದ್ದೇನೆ ಈ ಅನುವಾದದಲ್ಲಿ. ಯಾವುದೇ ಗೊಂದಲಮಯ ಅರ್ಥವಾಗದ ಪದಗಳನ್ನು ಉಪಯೋಗಿಸದೆ ಮತ್ತು ಅಷ್ಪಷ್ಟ ಚರಣಗಳಿಲ್ಲದ ಈ ಕವಿತೆಯ ಲೇಖನದ ಶೈಲಿ ನನಗೆ ತುಂಬಾ ಪ್ರಿಯವಾದದ್ದು. ಹೆಣ್ಣಿನ ಆಕಾಂಕ್ಷೆಯೊಂದಿಗೆ ಬಹಿರಂಗಪಡಿಸದ ಹತಾಶೆ ಕೂಡ ಈ ಕವನದಲ್ಲಿ ಬೆರೆತಿದೆ. ಲತಾ ಮಂಗೇಶ್ಕರ್ ಅವರ ಮಧುರ ಧ್ವನಿಯಲ್ಲಿ ಈ ಹಾಡು ನಮ್ಮ ಭಾವನೆಗಳನ್ನು ಪರಿಪೂರ್ಣಗೊಳಿಸುತ್ತವೆ. ಮಾಲಾ ಸಿನ್ಹ ಮತ್ತು ಧರ್ಮೇಂದ್ರ ನಾಯಕ ಮತ್ತು ನಾಯಕಿ ಪಾತ್ರದಲ್ಲಿ. ಜಪಾನ್ ದೇಶದ ಹೊರಾಂಗಣ ಮತ್ತು ಆಗಿನ ಕಾಲದ ಚಿತ್ರೀಕರಣದ ಸರಳತೆಯನ್ನು ಗಮನಿಸಿ, ಮತ್ತು ಆನಂದಿಸಿ.
ಹಿಂದಿ ಹಾಡಿನ ವಿಡಿಯೋ ಇಲ್ಲಿದೆ:
ಚಿತ್ರ: ಆಂಖೆ, ಸಾಹಿತಿ; ಸಾಹಿರ್ ಲುಧ್ಯಾನ್ವಿ, ಸಂಗೀತ: ರವಿ, ಧ್ವನಿ: ಲತಾ ಮಂಗೇಶ್ಕರ್
ಮಿಲ್ತಿ ಹೈ ಜಿಂದಗಿ ಮೇ
ಮೊಹಬತ್ ಕಭೀ ಕಭೀ
ಹೋತಿ ಹೈ ದಿಲ್ ಪರ್
ಇನಾಯತ್ ಕಭೀ ಕಭೀ
ಶರ್ಮಾಕೆ ಮೋಹ್ ನ ಫೇರ್
ನಜರ್ ಕೆ ಸವಾಲ್ ಪರ್
ಲಾತಿ ಹೈ ಐಸೆ ಮೋಡ್ ಪೆ
ಕಿಸ್ಮತ್ ಕಭೀ ಕಭೀ
ತನಹ ನ ಕಟ್ ನ ಸಕೇನ್ಗೆ
ಜವಾನಿ ಕೆ ರಾಸ್ತೆ
ಪೇಶ್ ಆಯೇಗಿ ಕಿಸೀಕಿ
ಜರೂರತ್ ಕಭೀ ಕಭೀ
ಫಿರ್ ಖೋ ನ ಜಾಯೆ ಹಮ್ ಕಹೀ
ದುನಿಯಾ ಕಿ ಬೀಡ್ ಮೆ
ಮಿಲ್ತಿ ಹೈ ಪಾಸ್ ಆನೇಕಿ
ಮೊಹಲತ್ ಕಭೀ ಕಭೀ

ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ