ಮೂಲ: ಸಾಹಿರ್ ಲುಧಿಯಾನ್ವಿ
ಭಾವಾನುವಾದ: ರವಿ ಗೋಪಾಲರಾವ್
ಅರಮನೆ ಭರಿತ ಮುಕುಟಪ್ರಾಯ ಪ್ರಪಂಚವಿದು
ಮನುಷ್ಯದ್ರೋಹಿ ಪ್ರತಿಷ್ಠಾಪಿತ ಪ್ರಪಂಚವಿದು
ಹಣದ ದಾಹದಲಿ ಮುಳುಗಿದ ಕಟ್ಟಳೆಗಳ ಪ್ರಪಂಚವಿದು
ಕೈಗೆಟುಕಿದರೂ ಅರ್ಥರಹಿತವೇಕೋ ಈ ಪ್ರಪಂಚ (೨)
ಒಂದೊಂದೂ ಘಾಸಿಗೊಂಡ ದೇಹ ತೃಷೆ ತಣಿಸದ ಆತ್ಮ
ಕುಡಿನೋಟದಲಿ ಗೊಂದಲ ಹೃದಯದಲಿ ತಲ್ಲಣ
ವ್ಯಥೆಯ ಸಂವೇದನೆ ಅರಿಯದ ಎಂತಹ ಪ್ರಪಂಚವಿದು
ಕೈಗೆಟುಕಿದರೂ ಅರ್ಥರಹಿತವೇಕೋ ಈ ಪ್ರಪಂಚ (೨)
ಇದುವೇ ಮನುಜಕುಲದ ನಗುವಿನ ಗೊಂಬೆಯಾಟ
ನಿರ್ಜೀವಿಗಳ ಈ ಬಸದಿ ಪರರದೇ ಈ ಬಸದಿ
ಅದೇಕೋ ಇಲ್ಲಿ ಸಾವಿಗಿಂತಲೂ ಬದುಕೇ ಕಳಪೆ
ಕೈಗೆಟುಕಿದರೂ ಅರ್ಥರಹಿತವೇಕೋ ಈ ಪ್ರಪಂಚ (೨)
ದಾರಿತಪ್ಪಿಹದು ಯವ್ವನ ಮನ ಕೆರಳಿಸಿಹುದು
ಯವ್ವನದ ಮಾರುಕಟ್ಟೆಯಲಿ ಸಜ್ಜಾದ ದೇಹವಿದು
ವ್ಯಾಪಾರದಲಿ ಪ್ರೀತಿಯೇ ವಿಕ್ರಯ ಆಗಿಹುದು
ಕೈಗೆಟುಕಿದರೂ ಅರ್ಥರಹಿತವೇಕೋ ಈ ಪ್ರಪಂಚ (೨)
ಮನುಜರಿಗೆ ಬೆಲೆಯಿಲ್ಲದ ಪ್ರಪಂಚವಿದು
ಕೃತಜ್ಞತೆಯೂ ಇರದು ಮೈತ್ರಿಯೂ ಇರದು
ಕಿಂಚಿತ್ತು ಪ್ರೀತಿಯ ಮರ್ಮವೂ ಇರದು
ಕೈಗೆಟುಕಿದರೂ ಅರ್ಥರಹಿತವೇಕೋ ಈ ಪ್ರಪಂಚ (೨)
ಭಸ್ಮ ಮಾಡು ಥೂಕರಿಸು ಈ ಪ್ರಪಂಚವನು
ನನ್ನೆದುರಿನಿಂದಲೇ ತೊಲಗಿಸಿಬಿಡು ಈ ಪ್ರಪಂಚವನು
ನಿನ್ನದಷ್ಟೇ ಪ್ರಪಂಚವಿದು ನೀನೆ ನಿಭಾಯಿಸು ಈ ಪ್ರಪಂಚವನು
ಕೈಗೆಟುಕಿದರೂ ಅರ್ಥರಹಿತವೇಕೋ ಈ ಪ್ರಪಂಚ (೨)
_______________
ಏ ದುನಿಯಾ ಅಗರ್ ಮಿಲ್ ಭೀ ಜಾಯೆ ತೋ ಕ್ಯಾ ಹೈ
ಕವಿ: ಸಾಹಿರ್ ಲುಧಿಯಾನ್ವಿ
ಏ ಮೆಹಲೋ ಏ ತಕ್ತೋ ಏ ತಾಜೋ ಕಿ ದುನಿಯಾ
ಏ ಇನ್ಸಾನ್ ಕೆ ದುಷ್ಮನ್ ಸಮಾಜೋ ಕಿ ದುನಿಯಾ
ಏ ದೌಲತ್ ಕೆ ಭೊಕೆ ಏ ರಿವಾಜೋ ಕೆ ದುನಿಯಾ
ಏ ದುನಿಯಾ ಅಗರ್ ಮಿಲ್ ಭೀ ಜಾಯೆ ತೋ ಕ್ಯಾ ಹೈ
ಹರ್ ಏಕ್ ಜಿಸ್ಮ್ ಘಾಯಲ್ ಹರ್ ಏಕ್ ರೂಹ್ ಪ್ಯಾಸಿ
ನಿಗಾಹೋಕೆ ಉಲ್ಜನ್ ದಿಲೋಮೆ ಉದಾಸಿ
ಏ ದುನಿಯಾ ಹೈ ಯಾ ಆಲಮ್ ಎ ಬದ್ ಹವಾಸಿ
ಏ ದುನಿಯಾ ಅಗರ್ ಮಿಲ್ ಭೀ ಜಾಯೆ ತೋ ಕ್ಯಾ ಹೈ
ಏಹ್ ಏಕ್ ಖಿಲೋನ ಹೈ ಇನ್ಸಾನ್ ಕಿ ಹಸ್ತಿ
ಏಹ್ ಬಸ್ತಿ ಮುರುದಾ ಪರಸ್ತೋ ಕಿ ಬಸ್ತಿ
ಏಹಾ ಪರ್ ತೋ ಜೀವನ್ ಸೆ ಹೀ ಮೌತ್ ಸಸ್ತಿ
ಏ ದುನಿಯಾ ಅಗರ್ ಮಿಲ್ ಭೀ ಜಾಯೆ ತೋ ಕ್ಯಾ ಹೈ
ಜವಾನಿ ಭಟಕ್ತಿ ಹೈ ಭಡ್ಕಾರ್ ಬನ್ಕರ್
ಜವಾ ಜಿಸ್ಮ್ ಸಜಾತೇ ಹೈ ಬಾಜಾರ್ ಬನ್ಕರ್
ಜಹಾ ಪ್ಯಾರ್ ಹೋತ ಹೈ ವ್ಯಾಪಾರ್ ಬನ್ಕರ್
ಏ ದುನಿಯಾ ಅಗರ್ ಮಿಲ್ ಭೀ ಜಾಯೆ ತೋ ಕ್ಯಾ ಹೈ
ಏ ದುನಿಯಾ ಜಹಾ ಆದ್ಮಿ ಕುಚ್ ನಹೀ ಹೈ
ವಫಾ ಕುಚ್ ನಹೀ ದೋಸ್ತಿ ಕುಚ್ ನಹೀ ಹೈ
ಜಹಾ ಪ್ಯಾರ್ ಕಿ ಖದ್ರ್ ಹೀ ಕುಚ್ ನಹೀ ಹೈ
ಏ ದುನಿಯಾ ಅಗರ್ ಮಿಲ್ ಭೀ ಜಾಯೆ ತೋ ಕ್ಯಾ ಹೈ
ಜಲಾದೋ ಇಸೇ ಫೂನ್ಕ್ ಡಾಲೋ ಏ ದುನಿಯಾ
ಮೇರೆ ಸಾಮ್ನೆ ಸೆ ಹಟಾಲೋ ಏ ದುನಿಯಾ
ತುಮಾರೀ ಹೈ ತುಮೀ ಸಂಬಾಲೋ ಏ ದುನಿಯಾ
ಏ ದುನಿಯಾ ಅಗರ್ ಮಿಲ್ ಭೀ ಜಾಯೆ ತೋ ಕ್ಯಾ ಹೈ
___________________
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ