ಗುರುವಾರ, ಜೂನ್ 23, 2022

ನಮ್ಮೀ ಹಿನ್ನೆನಪುಗಳ ನೀತಿ ಪ್ರಜ್ಞೆ / Moral Turpitude: Wish We Had…

ನಾನು ಕನ್ನಡದಲ್ಲಿ ಎಷ್ಟೋ ಕವಿತೆ ಬರೆದಿದ್ದರೊ ಅವುಗಳನ್ನು ನನಗೆ ಗೊತ್ತಿರುವ ಬೇರೆ ಭಾಷೆಗಳಾದ ಇಂಗ್ಲಿಷ್ ಮತ್ತು ಹಿಂದಿಯಲ್ಲಿ ಬರೆಯುವ ಅಥವ ಅನುವಾದಿಸುವ ಪ್ರಯತ್ನ ಎಂದೂ ಮಾಡಿರಲಿಲ್ಲ. ಕೊನೆಗೊ ಧೈರ್ಯ ಮಾಡಿ ನಾನು ಬರೆದ ಒಂದು ಕನ್ನಡ ಕವಿತೆಯನ್ನು ಇಂಗ್ಲಿಷ್ ಭಾಷೆಗೆ ಅನುವಾದಿಸಿದೆ. ಅನುವಾದಿಸಿದೆ ಎನ್ನುವುದಕ್ಕಿಂತ ಭಾವಾನುವಾದ ಮಾಡಿದೆ ಅಂತ ಹೇಳಬಹುದು. ಕನ್ನಡ ಮತ್ತು ಇಂಗ್ಲಿಷ್ ಎರಡರಲ್ಲೂ ಓದಿ ನೀವೇ ನಿರ್ಧರಿಸಿ, ಇದೊಂದು ಒಳ್ಳೆಯ ಪ್ರಯತ್ನವಾ ಎಂದು. 

 ಹಿನ್ನೆನಪುಗಳ ನೀತಿ ಪ್ರಜ್ಞೆ 
-ರವಿ ಗೋಪಾಲರಾವ್ 

ಆಡಂಬರದ ಹೊಗಳಿಕೆಯನು ಸ್ವೀಕರಿಸದಿರೆ
ಕಡಿದ ಬಂಧನಗಳನು ಕಡಿಯದಿರೆ
ಭಂಡಾರದ ಐಶ್ವರ್ಯವನು ಎಣಿಸದಿರೆ

ಕೇಳಿದ ಗಾಳಿಸುದ್ದಿಯನು ಕೇಳದಿರೆ
ನಾಜೂಕಿನ ಹೃದಯವನು ಒಡೆಯದಿರೆ
ನಿಂತ ಡಾಂಭಿಕ ಪೀಠದಿಂದ ನೆಲಕ್ಕಿಳಿದಿರೆ

ನುಡಿದ ಕಟುನುಡಿಗಳನು ನುಡಿಯದಿರೆ
ಪೂರ್ವಜರ ನಂಬಿಕೆಯನು ಅಪಹಾಸ್ಯಸದಿರೆ
ಮಾಡಿದ ನೋವುಗಳನು ನಿಷ್ಪಲಗೊಳಿಸಿರೆ

ಸಿಹಿಮಾತುಗಳನು ನಿಸ್ಸಾರಗೊಳಿಸಿರೆ
ಹಗೆತನದ ಅಸಮ್ಮತಿಯನು ದಾಟದಿರೆ
 ಹೆಣೆದ ಗಂಟುಗಳನು ನೇರಮಾಡಿರೆ…

ಅಕಾಲವೆನಿಸಿದರೂ ಬದಲಿಸಲಾಗದ
ಯಥಾರ್ಥತೆಯಲಿ ಮನ ಕದಡಿತೇಕೋ
 ನಮ್ಮೀ ಹಿನ್ನೆನಪುಗಳ ನೀತಿ ಪ್ರಜ್ಞೆ
 ______________________

Moral Turpitude: Wish We Had…
-Ravi Gopalarao

Unsaid the words we said
Undone the hurt we caused
Untangled the knot we knit

 
Unheard the other’s gossip
Uncut the ties of loved ones
Unbroken the heart’s fragility

Unsweetened the sweet talks
Unbridged the hateful dissent
Unseated the ego pedestal we stood

Unaccepted the grandiose flattery
Uncounted the wealth we locked
Unbelieved our ancestors’ beliefs

Untimely however these may be 
Unswerving moral turpitudes
Unchangeable, they are not

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ