ಸೋಮವಾರ, ಜನವರಿ 26, 2026

ಗಣರಾಜ್ಯೋತ್ಸವ



ಗಣರಾಜ್ಯೋತ್ಸವ:

ಇಂದು ಭಾರತದ ಗಣರಾಜ್ಯೋತ್ಸವ ದಿವಸ.  ಎಲ್ಲಾ ಭಾರತೀಯರಿಗೆ ಗಣರಾಜ್ಯೋತ್ಸವ ದಿನ ಆಚರಿಸುವುದು ಎಂದರೆ “ದೇಶದ ರಾಜಧಾನಿಯಲ್ಲಿ ರಿಪಬಲಿಕ್  ಡೇ ಪೆರೇಡ್ ನಲ್ಲಿ ದೇಶದ ಸೈನಿಕರು ತಮ್ಮ ರೆಜಿಮೆಂಟಿನ ಪ್ರದರ್ಶನ ಮತ್ತು ಎಲ್ಲ ರಾಜ್ಯಗಳಿಂದ ಸಾಂಸ್ಕೃತಿಕ ಪ್ರದಶನ ನೀಡುವ  ದಿವಸ” ಎಂದು ಆಗಿಬಿಟ್ಟಿದೆ.  ಭಾರತ ರತ್ನ, ಪದ್ಮ ಭೂಷಣ, ಪದ್ಮಶ್ರೀ, ಇತ್ಯಾದಿ ಪಾರಿತೋಷಕಗಳನ್ನು ಘೋಷಿಸುವ ದಿವಸ.  ಅವೆರಡು ಅಂದಿನ ಪ್ರಧಾನ ಸಂಭ್ರಮಗಳು.   ಸ್ವಾತಂತ್ರ ದಿವಸದಂತೆ ಎಲ್ಲ ಕಡೆ ಬಾವುಟ ಹಾರಿಸಿ ಮಕ್ಕಳಿಂದ ಹಿಡಿದು ವೃದ್ಧರವರೆಗೂ ಸಂತೋಷ ಪಡುವ ದಿನವಲ್ಲ ಅದು. ಹಾಗೆ ನೋಡಿದರೆ ಮಕ್ಕಳಿಗೆ ಗಣರಾಜ್ಯೋತ್ಸವ ಅಂದರೆ ವಿವರಿಸುವುದೂ ಕೂಡ ಕಷ್ಟ ಏಕೆಂದರೆ ಆಗಸ್ಟ್ ೧೫, ೧೯೪೭ರಲ್ಲಿ ಸ್ವಾತಂತ್ರ ಬಂತು ಮತ್ತೆ ಜನವರಿ ೨೬, ೧೯೫೦ರಲ್ಲಿ ರಿಪಬಲಿಕ್ ಆಯಿತು ಅಂತ ಅರ್ಥೈಸಿ ಹೇಳಿದರೆ ಸಾಲದು. ಏಕೆಂದರೆ ಜನವರಿ ೨೬ ರಂದು ಭಾರತದ ಸಂವಿಧಾನವನ್ನು ಅಂಗೀಕರಿಸಿದ ದಿನ.  ಭಾರತದ್ದೇ ಅತಿ ದೀರ್ಘವಾದ ಸಂವಿದಾನ.  ಪ್ರಪಂಚದ ಅತಿ ದೀರ್ಘವಾದ ಸಂವಿದಾನ ಬರೆದದ್ದು ಯಾರು ಅಂತ ಮುಖ್ಯವಲ್ಲ.  ಆದರೆ ಅದರಲ್ಲಿ ಆಗಲೇ ನೂರಕ್ಕೂ ಹೆಚ್ಚು ತಿದ್ದುಪಡಿಗಳು (ಅಮೆಂಡ್ಮೆಂಟ್ಸ್) ಮತ್ತು ೪೫೦ಕ್ಕೂ ಹೆಚ್ಚು ಸಂವಿಧಾನದ ವಿಧಿ (ಆರ್ಟಿಕಲ್ಸ್) ಗಳನ್ನೂ ಅಳವಡಿಸಿಕೊಂಡಂತ ಒಂದು ಬೃಹತ್ ಗ್ರಂಥ ಅದು.  ಅದನ್ನು ಓದಿ ಜೀರ್ಣಿಸಿಕೊಳ್ಳಲು ಸಾಧ್ಯವಿಲ್ಲ.  ಆದರೆ ಮೊದಲು ಅದರ ಪ್ರಿಯಾಮ್ಬಲ್, ಮುನ್ನುಡಿ ಓದೋಣ ಇಂದು:

ನಾವು, ಭಾರತದ ಜನರು, ಭಾರತವನ್ನು ಸಾರ್ವಭೌಮ ಸಮಾಜವಾದಿ ಜಾತ್ಯತೀತ ಪ್ರಜಾಪ್ರಭುತ್ವ ಗಣರಾಜ್ಯವಾಗಿ ರೂಪಿಸಲು ಮತ್ತು ಅದರ ಎಲ್ಲಾ ನಾಗರಿಕರಿಗೆ ಇವುಗಳನ್ನು ಖಚಿತಪಡಿಸಿಕೊಳ್ಳಲು ಶ್ರದ್ಧೆಯಿಂದ ಸಂಕಲ್ಪ ಮಾಡಿದ್ದೇವೆ:

ನ್ಯಾಯ, ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ;

ಚಿಂತನೆ, ಅಭಿವ್ಯಕ್ತಿ, ನಂಬಿಕೆ, ಶ್ರದ್ಧೆ ಮತ್ತು ಆರಾಧನೆಯ ಸ್ವಾತಂತ್ರ್ಯ;

ಸ್ಥಾನಮಾನ ಮತ್ತು ಅವಕಾಶದ ಸಮಾನತೆ;

ಮತ್ತು ಅವರೆಲ್ಲರ ನಡುವೆ ಸಹೋದರತ್ವವನ್ನು ಉತ್ತೇಜಿಸಲು, ವ್ಯಕ್ತಿಯ ಘನತೆ ಮತ್ತು ರಾಷ್ಟ್ರದ ಏಕತೆ ಮತ್ತು ಸಮಗ್ರತೆಯನ್ನು ಖಚಿತಪಡಿಸಿಕೊಳ್ಳಲು;


ಏಕೋ ಇಂಗ್ಲಿಷ್ ನಲ್ಲೆ ಓದಿಕೊಂಡು ಅರ್ಥ ಮಾಡಿಕೊಳ್ಳಬೇಕು ಅನಿಸಿದರೆ ನಾನೂ ಸಮ್ಮತಿಸುವೆ. ಏಕೆಂದರೆ ನಮ್ಮ ಸಂವಿಧಾನವನ್ನು ಬರೆದದ್ದು ಇಂಗ್ಲಿಷ್ ನಲ್ಲಿಯೇ.  


WE, THE PEOPLE OF INDIA, having solemnly resolved to constitute India into a SOVEREIGN SOCIALIST SECULAR DEMOCRATIC REPUBLIC and to secure to all its citizens:

JUSTICE, social, economic and political;

LIBERTY of thought, expression, belief, faith and worship;

EQUALITY of status and of opportunity;

and to promote among them all FRATERNITY assuring the dignity of the individual and the unity and integrity of the Nation;


ಸ್ವತಂತ್ರ ದೇಶ, ಸ್ವಲ್ಪ ಕಾಪಿ ಹೊಡದರೆ ನಮ್ಮ ಹಿಂದುಳಿದ ಜನಕ್ಕೆ, ಅದರಲ್ಲೂ ಇಂಗ್ಲಿಷ್ನಲ್ಲಿ ಬರೆದರೆ ಗೊತ್ತಾಗಲ್ಲ ಅಂತ ಅಮೇರಿಕ, ಕೆನಡಾ, ಫ್ರಾನ್ಸ್ ಇತರ ದೇಶದ ಸಂವಿಧಾನಗಳನ್ನು ಕೂಡ ಅಳವಡಿಸಿಕೊಂಡಂತ ಗ್ರಂಥ ನಮ್ಮದು.  ಅಮೆರಿಕನ್ನರಲ್ಲೆವೇ ನಾವೆಲ್ಲಾ… ಇಲ್ಲಿದೆ ನೋಡಿ ಅದರ ಸಂವಿಧಾನದ ಮುನ್ನುಡಿ.  


We the People of the United States, in Order to form a more perfect Union,

establish Justice, insure domestic Tranquility, provide for the common defence,

pr... of America.


೭೬ನೇ ವರ್ಷಕ್ಕೆ ಕಾಲಿಟ್ಟಿದೆ ಭಾರತದ ಸಂವಿಧಾನ.  ಅಮೇರಿಕ ಕೂಡ ೨೫೦ಕ್ಕೆ ತಲುಪಿದೆ. ಇದುವರೆಗೂ ಆದ  ತಿದ್ದುಪಡಿಗಳು ಕೇವಲ ೨೭ ಅಷ್ಟೇ. ಕೇವಲ ೭ ಸಂವಿಧಾನ ವಿಧಿಗಳು ಮಾತ್ರ.  ಒಟ್ಟಿನಲ್ಲಿ ಭಾರತದ ಸಂವಿಧಾನ ಬೇರೆಯೇ ರೀತಿಯದ್ದು ಅಂದುಕೊಂಡರೂ ಸಾಮ್ಯತೆ ಇದ್ದೆ ಇದೆ, ಎರಡೂ ಪ್ರಜಾಪ್ರಭುತ್ವವನ್ನು ಕಾಪಾಡಿಕೊಂಡು ಬಂದಿವೆ.  ಅಥವಾ ಅದೊಂದು ಭ್ರಮೆಯೇ? ಇಂದಿರಾ ಗಾಂಧೀ ಸಮಯದಲ್ಲಿ ಮತ್ತು ಈಗಿನ ಟ್ರಂಪ್ ಕಾಲದಲ್ಲಿ ಮಾತ್ರ ಎರಡೂ ದೇಶಗಳ ಸಂವಿಧಾನ ಹದಗೆಟ್ಟಿತ್ತು ಎಂದು ಇತಿಹಾಸಜ್ಞರು ಮುಂದೆ ಹೇಳಬಹುದೇನೋ.  ನಿಜ ತಿಳಿಯಲು ಇನ್ನು ಸ್ವಲ್ಪ ಸಮಯ ಬೇಕು. 


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ