ಪರಾಭವ ಸಂವತ್ಸರದ ಶ್ರೀ ರಾಮ ನವಮಿಯಂದು ನನ್ನ ಅಳಿಲು ಸೇವೆ: ವಿದ್ವಾನ್ ರಂಗನಾಥಶರ್ಮ ಅವರು ಕನ್ನಡಕ್ಕೆ ಅನುವಾದಿಸಿ 1960ರ ದಶಕದಲ್ಲಿ ಪ್ರಕಟಿಸಿದ ಶ್ರೀಮದ್ವಾಲ್ಮೀಕಿ ರಾಮಾಯಣಂ ಪುಸ್ತಕಗಳನ್ನು ಗೂಗಲ್ ಪ್ಲೆ ನಲ್ಲಿ ನಿಮ್ಮೊಡನೆ ಹಂಚಿಕೊಳ್ಳುವ ಭಾಗ್ಯ ನನ್ನದಾಗಿದೆ. ಎಂಟು ಸಂಪುಟಗಳಲ್ಲಿರುವ ಈ ಪುಸ್ತಕಗಳಿಗೆ ಮರುಜೀವ ಕೊಡುವ ಉದ್ದೇಶವಷ್ಟೇ ಇದಾಗಿಲ್ಲ. ಮರೆತುಹೋದ ಅಮೋಘ ಕೃತಿಗಳಿವು. ಓದುಗರಿಗೆ ಅಷ್ಟು ಸುಲಭವಾಗಿ ಸಿಗದ ಪುಸ್ತಕಗಳಿವು. ಪ್ರಪಂಚದಾದ್ಯಂತ ಕನ್ನಡ ಓದುಗರಿಗೆ ಉಚಿತವಾಗಿ ಎಂಟೂ ಸಂಪುಟಗಳನ್ನು ಡಿಜಿಟಲ್ ಮಾಧ್ಯಮದಲ್ಲಿ ಹೊರತರಲು ಪಟ್ಟ ನನ್ನ ಈ ಶ್ರಮ ಸಾರ್ಥಕ ಎನಿಸುವುದು ಎಲ್ಲ ವಿದ್ಯಾವಂತ ಕನ್ನಡಿಗರು ಇವುಗಳನ್ನು ತಮ್ಮ ಜೀವನದಲ್ಲಿ ಒಂದು ಬಾರಿಯಾದರೂ ಓದಿದಾಗ ಮಾತ್ರ. ಪುಸ್ತಕಗಳ ಕವರ್ ಡಿಸೈನ್ ನನ್ನದೇ. ಫೋನ್, ಕಂಪ್ಯೂಟರ್, ಟ್ಯಾಬ್ಲೆಟ್ ಯಾವುದೇ ಮಾಧ್ಯಮಲ್ಲಿ ಎಲ್ಲಿ ಬೇಕಾದರೂ ಓದಲೂ ಸಾಧ್ಯವಿರುವ ಈ ಸುದವಕಾಶವನ್ನು ಉಪಯೋಗಿಸಿಕೊಳ್ಳಿ, ಸ್ನೇಹಿತರೊಡನೆ ಹಂಚಿಕೊಳ್ಳಿ. ಜೈ ಶ್ರೀ ರಾಮ್.
ಶ್ರೀಮದ್ವಾಲ್ಮೀಕಿ ರಾಮಾಯಣಂ
ಗುರುವಾರ, ಏಪ್ರಿಲ್ 23, 2026
ಶ್ರೀ ರಾಮನ ಸೇವೆ ಮಾಡಲು ಹಲವು ಮಾರ್ಗಗಳಂತೆ.
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ